ದೇಶ-ವಿದೇಶ

ಗಾಯಕನ ವಿವಾಹ; ಪ್ರಧಾನಿ ಮೋದಿ ಹಾಗೂ ಬಾಲಿವುಡ್ ನಟ ಅಮಿತಾಬ್ ಗೆ ಆಹ್ವಾನ

ಮುಂಬೈ: ಹಿರಿಯ ಗಾಯಕ, ಸಹೃದಯಿ ಉದಿತ್ ನಾರಾಯಣ್ ಪುತ್ರ ಆದಿತ್ಯ ನಾರಾಯಣ್ ವಿವಾಹ ನಿಶ್ಚಯವಾಗಿದ್ದು, ಭಾರಿ ಅದ್ಧೂರಿಯಾಗಿ ಮದುವೆ ಮಾಡಲು ಉದಿತ್ ನಾರಾಯಣ್ ತಯಾರಾಗಿದ್ದಾರೆ.

ಆದಿತ್ಯ ನಾರಾಯಣ್ ಹಾಗೂ ಶ್ವೇತ ಅಗರ್ವಾಲ್ ವಿವಾಹ ಮುಂಬರುವ ಮಂಗಳವಾರ ನಡೆಯಲಿದೆ. ಉದಿತ್ ನಾರಾಯಣ್ ರವರು ವಿವಾಹಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಸೇರಿದಂತೆ ಹಲವಾರು ಗಣ್ಯರನ್ನು ವಿವಾಹಕ್ಕೆ ಆಹ್ವಾನ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಉದಿತ್ ನಾರಾಯಣ್, ಹಲವು ವರ್ಷಗಳಿಂದಲೂ ನಾನು ಬಾಲಿವುಡ್‌ನಲ್ಲಿದ್ದೇನೆ, ಹಲವು ಸ್ನೇಹಿತರು ಇಲ್ಲಿದ್ದಾರೆ ಅವರನ್ನೆಲ್ಲಾ ಮದುವೆಗೆ ಕರೆಯದೇ ಇರಲಾಗದು ಎಂದಿದ್ದಾರೆ.

ಉದಿತ್ ನಾರಾಯಣ್ ಪುತ್ರ ಆದಿತ್ಯ ನಾರಾಯಣ್ ಸಹ ಗಾಯಕರೇ ಆಗಿದ್ದು, ಶೋ ಒಂದರ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ.

Related posts

ಕೋವಿಡ್‌-19 ಚೇತರಿಕೆಯಲ್ಲಿ 90% ತಲುಪಿದ ಭಾರತ

Upayuktha

ಅಯೋಧ್ಯೆಯ ಭೂಮಿ ಪೂಜೆಗೆ ತಯಾರಾಗ್ತಿದೆ 1.25 ಲಕ್ಷ ಮಣ್ಣಿನ ಹಣತೆಗಳು

Harshitha Harish

ಖ್ಯಾತ ಪಿಟೀಲು ವಾದಕ ಟಿ.ಎನ್.ಕೃಷ್ಣನ್ ನಿಧನ; ಪಿಎಂ ಸಂತಾಪ

Harshitha Harish