ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಸಾಹಸ ಕ್ರೀಡೆ-ವಿಪತ್ತು ನಿರ್ವಹಣೆ ಪಠ್ಯ ಕ್ರಮವಾಗಲಿ: ವೇಣುಶರ್ಮ

ಫೇಮ್ ಅಡ್ವೆಂಚರ್‌ನಿಂದ ಎಸ್‍ಡಿಎಂ ವಿದ್ಯಾರ್ಥಿಗಳಿಗೆ ತರಬೇತಿ

ಮಂಗಳೂರು: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಎನ್‍ಎಸ್‍ಎಸ್, ಯೂತ್ ರೆಡ್‍ಕ್ರಾಸ್ ಘಟಕ ಹಾಗೂ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಮಾ. 3 ಮತ್ತು 4ರಂದು, ಬೆಳುವಾಯಿಯ ಶೃಂಗ ಶ್ಯಾಮಲ ನೇಚರ್ ವಿಲೇಜ್‍ನಲ್ಲಿ “ಎರಡು ದಿನಗಳ ಸಾಹಸ ಮತ್ತು ವಿಪತ್ತು ನಿರ್ವಹಣೆ ತರಬೇತಿ” ಕಾರ್ಯಕ್ರಮ ನಡೆಯಿತು. ಫೇಮ್ ಅಡ್ವೆಂಚರ್ ಅಕಾಡೆಮಿ ಈ ತರಬೇತಿಯನ್ನು ನಡೆಸಿಕೊಟ್ಟಿತು.

ಕಾರ್ಯಕ್ರಮದಲ್ಲಿ ಹಲವು ಸಾಹಸ ಕ್ರೀಡೆಗಳು ಹಾಗೆಯೇ ಪ್ರಥಮಚಿಕಿತ್ಸೆ, ಹಾವು ಕಚ್ಚಿದ ಸಂದರ್ಭ, ನೆರೆ ಹಾಗೂ ನೈಸರ್ಗಿಕ ವಿಕೋಪದ ಸಂದರ್ಭ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು. ಒಟ್ಟು 47 ವಿದ್ಯಾರ್ಥಿಗಳು ಈ ತರಬೇತಿಯ ಉಪಯೋಗ ಪಡೆದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಫೇಮ್ ಅಡ್ವೆಂಚರ್‍ನ ವೇಣು ಶರ್ಮ, ಶಾಲಾ-ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಈ ವಿಚಾರಗಳು ಒಂದು ಪಠ್ಯಕ್ರಮವಾಗಿಯೇ ಅಳವಡಿಕೆಯಾಗಬೇಕು. ನೂತನ ಶಿಕ್ಷಣ ನೀತಿಯಲ್ಲಿ ಇದರ ಕುರಿತು ಉಲ್ಲೇಖವೂ ಇದೆ ಎಂದು ಅಭಿಪ್ರಾಯಪಟ್ಟರು.

ಶೃಂಗ ಶ್ಯಾಮಲ ನೇಚರ್ ವಿಲೇಜ್‍ನ ವೆಂಕಟೇಶ್ ಮಯ್ಯ ಅಧ್ಯಕ್ಷ ಸ್ಥಾನ ವಹಿಸಿದ್ದರು.
ಸಂತೋಷ್ ಪೀಟರ್ ಡಿಸೋಜಾ ಹಾಗೂ ನಿತಿನ್ ಸುವರ್ಣ ತರಬೇತಿಯ ನೇತೃತ್ವ ವಹಿಸಿದ್ದರು. ಜೊತೆಗೆ ತರಬೇತಿಯಲ್ಲಿ ಶೆರಿನ್, ಗ್ಲೋರಿಯಾ, ಶೈಲಜಾ, ಅಂಚನ್, ರಂಜಿತ್ ಸಹಕರಿಸಿದರು. ಎಸ್‍ಡಿಎಂ ಕಾಲೇಜಿನ ಅಧ್ಯಾಪಕರಾದ ಪುಷ್ಪರಾಜ್, ಶಶಿಪ್ರಸಾದ್ ಇದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಮಂಗಳೂರು ನಗರದಲ್ಲಿ ಸುತ್ತಾಡಿದ ಕಾಡು ಕೋಣದ ರಕ್ಷಣೆ, ಅರಣ್ಯಕ್ಕೆ ವಾಪಸ್

Upayuktha

ಆಳ್ವಾಸ್ ವಿದ್ಯಾರ್ಥಿ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ

Upayuktha

ಮೊಗ್ರ ಸೇತುವೆ- ಕಮಿಲ ರಸ್ತೆ ಸಮಸ್ಯೆ: ಕಮಿಲ ನಾಗರಿಕರಿಂದ ಪ್ರಧಾನಿಗೆ ವೀಡಿಯೋ ಸಿಡಿ ರವಾನೆ

Upayuktha