ಪ್ರಮುಖ ರಾಜ್ಯ

ಫೆವಿಕಾಲ್‌ ಜಾಹೀರಾತಿಗೆ ಯಕ್ಷಗಾನದ ದುರ್ಬಳಕೆ: ಜಾಲತಾಣಗಳಲ್ಲಿ ವ್ಯಾಪಕ ವಿರೋಧ

ಮಂಗಳೂರು: ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನದ ಹಿನ್ನೆಲೆಯನ್ನು ಬಳಸಿಕೊಂಡು ಫೆವಿಕಾಲ್‌ (ಪಿಡಿಲೈಟ್‌) ಸಂಸ್ಥೆಯವರು ಪ್ರಚಾರ ಮಾಡುತ್ತಿರುವ ಜಾಹೀರಾತೊಂದು ತೀವ್ರ ವಿವಾದ ಸೃಷ್ಟಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ದೃಶ್ಯದ ತುಣುಕಿಗೆ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿದ್ದು, ಜಾಹೀರಾತು ತಯಾರಕರು ಕೂಡಲೇ ಅದನ್ನು ಹಿಂತೆಗೆದುಕೊಂಡು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಲಾಗಿದೆ.

ಈ ವೀಡಿಯೋ ತುಣುಕಿನಲ್ಲಿ- ಕಥಕ್ಕಳಿಯ ಹಿಮ್ಮೇಳ, ಯಕ್ಷಗಾನದ ರಂಗಸ್ಥಳದಲ್ಲಿ ತೆಂಕುತಿಟ್ಟಿನ ಪ್ರದರ್ಶನ ಆರಂಭವಾಗುತ್ತದೆ. ಇದೇ ವೇಳೆಗೆ ರಂಗಸ್ಥಳದ ಸಿಂಹಾಸನದಲ್ಲಿ ಪಾತ್ರಧಾರಿ ಕುಳಿತುಕೊಳ್ಳುವಾಗ ಅದು ಮುರಿದು ಬೀಳುತ್ತದೆ. ಆಗ ಸಿಟ್ಟಿನಿಂದ ಆ ವೇಷಧಾರಿ ಅರಚುತ್ತಾ ರಂದ ಮೇಲಿರುವ ಎಲ್ಲರನ್ನೂ ಅಟ್ಟಾಡಿಸುತ್ತಾನೆ. ಆ ಮೂಲಕ ಫೆವಿಕಾಲ್ ಅಂಟಿಗೆ ಸಾಟಿಯಾದ್ದು ಬೇರೆ ಯಾವುದೂ ಇಲ್ಲ ಎಂಬ ಸಂದೇಶ ಬಿತ್ತರಿಸಲು ಪ್ರಯತ್ನಿಸಲಾಗಿದೆ.

ಈ ಜಾಹೀರಾತಿನ ವಿರುದ್ಧ ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

https://fb.watch/1VP_PFzmGD/

Corcoise Films ಎಂಬ ಜಾಹೀರಾತು ತಯಾರಿಕಾ ಸಂಸ್ಥೆ ಪಿಡಿಲೈಟ್‌ ಕಂಪನಿಗಾಗಿ ಈ ವಿವಾದಾತ್ಮಕ ಜಾಹೀರಾತನ್ನು ಸಿದ್ಧಪಡಿಸಿಕೊಟ್ಟಿದೆ.

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕೊರೊನಾ: ದೇಶದಲ್ಲಿ ಒಟ್ಟಾರೆ ಸಂಖ್ಯೆ ಹೆಚ್ಚಿದರೂ ಪಾಸಿಟಿವ್‌ ಪ್ರಕರಣಗಳು ಸ್ಥಿರ: ಐಸಿಎಂಆರ್

Upayuktha

ತಲಪಾಡಿಯಲ್ಲಿ ಮಂಗಳೂರಿಗೆ ಉದ್ಯೋಗಕ್ಕೆ ಬರುವವರನ್ನು ತಡೆದ ಪೊಲೀಸರು: ಬಿಗುವಿನ ವಾತಾವರಣ

Upayuktha

ಭಾರತ-ಚೀನಾ 2ನೇ ಅನೌಪಚಾರಿಕ ಶೃಂಗಸಭೆ: ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸ್ವಾಗತಿಸಲು ಚೆನ್ನೈಗೆ ಬಂದ ಪ್ರಧಾನಿ ಮೋದಿ

Upayuktha

Leave a Comment