
ಮಂಗಳೂರು
ಕ್ಷೇತ್ರದ ಭಕ್ತರಾದ ಎಂ ಸತೀಶ ಆಳ್ವ, ಮೂಡಾರೆ ಅವರಿಂದ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಲಿದೆ.
ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಶ್ರೀ ಆದ್ಯಪಾಡಿ ಆದಿನಾಥೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷ ಮಹಾಶಿವರಾತ್ರಿಯಿಂದ ಆರಂಭವಾಗಿ ಒಂಬತ್ತು ದಿನಗಳ ಪರ್ಯಂತ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತದೆ. 2020ನೇ ವರ್ಷ ಜಾತ್ರಾ ಮಹೋತ್ಸವ ಫೆಬ್ರವರಿ 21ರಿಂದ ಮಾರ್ಚ್ 1ರ ವರೆಗೆ ನಡೆಯಲಿದೆ.
ಫೆಬ್ರವರಿ 21, 3020ರ ಶುಕ್ರವಾರ ಮಹಾ ಶಿವರಾತ್ರಿ ಆಚರಿಸಲಾಗುತ್ತಿದ್ದು, ಅಂದು ಮಹಾ ರಂಗಪೂಜೆ, ಶ್ರೀ ಭೂತಬಲಿಯೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭವಾಗಲಿದೆ. ಮಾರ್ಚ್ 1ರಂದು ಮಹಾಪೂಜೆ, ಮಂತ್ರಾಕ್ಷತೆ, ಬ್ರಹ್ಮಾರ್ಪಣ, ಪ್ರಸಾದ ವಿತರಣೆ ಮತ್ತು ರಂಗಪೂಜೆಯೊಂದಿಗೆ ಉತ್ಸವ ಮುಕ್ತಾಯಗೊಳ್ಳಲಿದೆ.
(ಉಪಯುಕ್ತ ನ್ಯೂಸ್ ಸುದ್ದಿಜಾಲ)