ಗ್ರಾಮಾಂತರ ಸ್ಥಳೀಯ

ಅಡ್ಯಾರ್ ಗ್ರಾ.ಪಂ: 78 ಲಕ್ಷ ರೂ ಅನುದಾನದಲ್ಲಿ ವಿವಿಧ ರಸ್ತೆಗಳ ಕಾಂಕ್ರೀಟಿಕರಣಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಚಾಲನೆ

ಮಂಗಳೂರು: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಡ್ಯಾರ್ ಮಹಾಲಿಂಗೇಶ್ವರ ದೇವಸ್ಥಾನ ಎದುರು ಹಾಗೂ ಹಿಂಬದಿ ರಸ್ತೆ ಕಾಂಕ್ರೀಟಿಕರಣ- 14 ಲಕ್ಷ, ಅಡ್ಯಾರು ಕೆಮಂಜೂರು- ಬಿರ್ಪುಗುಡ್ಡೆ ರಸ್ತೆ ಕಾಂಕ್ರೆಟೀಕರಣ – 6 ಲಕ್ಷ, ಅಡ್ಯಾರು ವಳಬೈಲು ಮುಖ್ಯ ರಸ್ತೆ ಕಾಂಕ್ರೀಟಿಕರಣ- 8 ಲಕ್ಷ, ಅಡ್ಯಾರು ವಳಬೈಲು- ದಯಂಬು ರಸ್ತೆ ಕಾಂಕ್ರೀಟಿಕರಣ- 14 ಲಕ್ಷ, ಅಡ್ಯಾರು ವಳಬೈಲು ಅಡ್ಡ ರಸ್ತೆ ಕಾಂಕ್ರೀಟಿಕರಣ- 5 ಲಕ್ಷ (ಸಂಸದರ ಅನುದಾನ), ಅಡ್ಯಾರು ಕೆಮಂಜೂರು- ಬನತ್ತಡಿ ರಸ್ತೆ ಕಾಂಕ್ರೀಟಿಕರಣ- 5 ಲಕ್ಷ (ಪಂಚಾಯತ್ ಸದಸ್ಯರ ಅನುದಾನ) ದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಭಾನುವಾರ ಗುದ್ದಲಿಪೂಜೆ ನೆರವೇರಿಸಿದರು.

ಇನ್ನು ಅಡ್ಯಾರ್ 3 ನೇ ವಾರ್ಡಿನ ಬೂತ್ ನಂಬ್ರ 238, 239 ರಲ್ಲಿ 18 ಲಕ್ಷ ರೂಪಾಯಿ ಅನುದಾನದಲ್ಲಿ ಕಾಂಕ್ರೀಟಿಕರಣಗೊಂಡ ಮೂರು ರಸ್ತೆಗಳ ಉದ್ಘಾಟನೆಯನ್ನು ಶಾಸಕರಾದ ಡಾ.ವೈ ಭರತ್ ಶೆಟ್ಟಿ ನೆರವೇರಿಸಿದರು ಹಾಗೂ ಆ ಭಾಗದಲ್ಲಿ 8 ಲಕ್ಷ ರೂಪಾಯಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ ನೆರವೇರಿಸಿದರು.

ಬಿಜೆಪಿ ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠದ ಸಹ ಸಂಚಾಲಕರು ಹಾಗೂ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಸುಧಾಕರ್ ಅಡ್ಯಾರ್, ಮಂಗಳೂರು ನಗರ ಉತ್ತರ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾ ದ ಉಪಾಧ್ಯಕ್ಷರಾದ ಮಹಾಬಲ ಅಡ್ಯಾರ್, ಭೋಜ ಪೂಜಾರಿ ಬೂತ್ ಅಧ್ಯಕ್ಷರು, ಶೇಖರ್ ಶೆಟ್ಟಿ ಬೂತ್ ಅಧ್ಯಕ್ಷರು, ಸುಜಿತ್ ಬೂತ್ ಪ್ರಧಾನ ಕಾರ್ಯದರ್ಶಿ, ಪ್ರದೀಪ್ ಕುಮಾರ್ ಶೆಟ್ಟಿ ಹಿರಿಯ ನಾಯಕರು, ಪ್ರಸನ್ನಕುಮಾರ್ ಮಂಡಲ ಸಮಿತಿ ಸದಸ್ಯರು, ಪ್ರವೀಣ್ ಕುಮಾರ್ ಶೆಟ್ಟಿ ಹಿರಿಯ ನಾಯಕರು, ಅಜಿತ್ ಶೆಟ್ಟಿ ಅಡ್ಯಾರ್ ಗುತ್ತು ಸಂಚಾಲಕರು ಅಡ್ಯಾರ್ ಶಕ್ತಿ ಕೇಂದ್ರ, ಗಣೇಶ್ ರೈ ಸಹಸಂಚಾಲಕ ಅಡ್ಯಾರ್ ಶಕ್ತಿ ಕೇಂದ್ರ, ಯಾದವ ಸಾಲ್ಯಾನ್ ಸಂಚಾಲಕರು ಅಡ್ಯಾರ್ ಪದವು ಶಕ್ತಿ ಕೇಂದ್ರ, ಜನಾರ್ದನ ಅರ್ಕುಳ ಸದಸ್ಯರು ಜಿಲ್ಲಾ ಓಬಿಸಿ, ಶ್ರವಣ್ ಆಳ್ವ ಬೂತ್‌ ಅಧ್ಯಕ್ಷರು, ವಿಜಯ ಕೊಟ್ಟಾರಿ ಬೂತ್ ಅಧ್ಯಕ್ಷರು, ರವಿರಾಜ್ ಚೌಟ, ಬೂತ್ ಪ್ರಧಾನ ಕಾರ್ಯದರ್ಶಿ
ಮಹಾಬಲ ಪೂಜಾರಿ ನಿಕಟಪೂರ್ವ ಪಂಚಾಯತ್ ಸದಸ್ಯರು ‌ಕೃಷ್ಣ ಮಂಡಲ ಒಬಿಸಿ ಕಾರ್ಯದರ್ಶಿ, ಮಣೀಶ್ ರೈ ಅಡ್ಯಾರ್ ಗಾರ್ಡನ್, ಬೂತ್ ಸಮಿತಿ ಕಾರ್ಯದರ್ಶಿ ದೀಪಕ್ ಹಾಗೂ ಕಾರ್ಯಕರ್ತ ಬಂಧುಗಳು, ನಾಗರಿಕರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಫಿಲೋಮಿನಾ ಎಂಎಸ್‍ಡಬ್ಲ್ಯೂ ಶೈಕ್ಷಣಿಕ ಗ್ರಾಮೀಣ ಶಿಬಿರ 2020 ಸಮಾಪನ

Upayuktha

ಒಂದು ವರ್ಷ ಪರ್ಯಂತ ನಡೆದ ಪ್ರಜಾಪತಿ ಹವನ ಸಂಪನ್ನ

Upayuktha

ದ.ಕ ಜಿಲ್ಲಾ ಹೋಂಗಾರ್ಡ್ಸ್‌ ಕಮಾಂಡೆಂಟ್‌ರಿಗೆ ಉಪ್ಪಿನಂಗಡಿ ಘಟಕದಿಂದ ಅಭಿನಂದನಾ ಕಾರ್ಯಕ್ರಮ

Upayuktha