ಪ್ರವಾಸ ಲೇಖನಗಳು

ಐತಿಹಾಸಿಕ ಅಗ್ರಾ: ಯಮುನಾ ತೀರದ ವಿಶ್ವ ಪ್ರಸಿದ್ಧ ತಾಣದಲ್ಲಿ ಒಂದು ದಿನ

ಆಗ್ರಾ ಭಾರತದ ಪ್ರಾಚೀನ ಇತಿಹಾದಿಂದಲೂ ಪ್ರಾಮುಖ್ಯತೆ ಪಡೆದ ನಗರ. ಮೊಘಲರ ಕಾಲದಲ್ಲಿ ಇನ್ನಷ್ಟು ವೈಭೋಗ-ಐಭೋಗಕೊಳಪಟ್ಟ ನಗರ ಬಹಳಷ್ಟು ಐತಿಹಾಸಿಕ ಕಟ್ಟಡಗಳಿಗೆ ಪ್ರಸಿದ್ಧಿ ಪಡೆದಿದೆ.

ಉನ್ನತ ಶಿಕ್ಷಣ ವಿಭಾಗಳಲ್ಲಿ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣದ ಜೊತೆಗೆ ಪ್ರವಾಸವು ಒಂದು ಭಾಗವಾಗಿರುವ ಕಾರಣ 12 ದಿವಸಗಳ ಸುದೀರ್ಘ ಪ್ರವಾಸವನ್ನು ಕೈಗೊಂಡಿದ್ದೆವು, ಗಂಗಾಮೂಲ ಉತ್ತರಾಖಂಡ್‌ನ ಸಂದರ್ಶನ ಮುಗಿಸಿ ಆಗ್ರಾದ ಸೌಂದರ್ಯೋಪಾಸನೆಗೆ ಆಗಮಿಸಿದ್ದ ನಮ್ಮ‌ ವಿದ್ಯಾರ್ಥಿಗಣ.

ರಾತ್ರಿಯೆಲ್ಲಾ ಬಸ್ಸಿನಲ್ಲೇ ಪ್ರಯಾಣಿಸಿ ಆಗ್ರಾಕ್ಕೆ ತಲುಪುವ ಹೊತ್ತಿಗಾಗಲೇ ಮುಂಜಾನೆಯಾಗಿತ್ತು… ಅಲ್ಲಿಂದ ಹೋಟೆಲ್ ಒಂದಕ್ಕೆ ತೆರಳಿ ಪ್ರವಾಸೀ ತಾಣಗಳ ಭೇಟಿಗೆ ಉತ್ಸುಕರಾಗಿದ್ದೆವು..

ಆಗ್ರಾ ಎಂದ ತಕ್ಷಣ ನೆನಪಾಗೋದೇ ವಿಶ್ವ ಪ್ರಸಿದ್ಧ ತಾಜ್ ಮಹಲ್! ಉತ್ತರ ಪ್ರದೇಶದ ಆಗ್ರಾ ನಗರವು ತಾಜ್ ಮಹಲ್ ಇರುವ ಕಾರಣಕ್ಕಾಗಿ ಜಗತ್ತಿನಲ್ಲೆಲ್ಲಾ ಪ್ರಸಿದ್ಧಿಯಾಗಿದೆ. ಅದಲ್ಲದೆ ವಿವಿಧ ಪ್ರವಾಸಿ ತಾಣಗಳು,ಉದ್ಯಾನಗಳು,ಇನ್ನಷ್ಟು ವಿಶ್ವ ಪಾರಂಪರಿಕ ತಾಣಗಳು ಸಹ ಇವೆ. ಭಾರತದ ಸುವರ್ಣ ತ್ರಿಕೋನ (Golden Triangle) ಪ್ರವಾಸ ಕೈಗೊಳ್ಳುವ ನಗರಗಳಲ್ಲಿ ಆಗ್ರಾವು ಒಂದಾಗಿದೆ. ಮೊಘಲರ ಕಾಲದಲ್ಲಿ ರಾಜಧಾನಿಯಾಗಿದ್ದ ಆಗ್ರಾವು ಅನೇಕ ರಾಜರಿಂದ ಆಳ್ವಿಕೆಗೆ ಒಳಪಟ್ಟಿದ್ದೆ. ಹೀಗಾಗಿಯೇ ಇಸ್ಲಾಂ ಶೈಲಿಯ ವಾಸ್ತು ಶಿಲ್ಪಗಳು ಇಲ್ಲಿ ಕಾಣಸಿಗುತ್ತವೆ. ಭಾರತದ ರಾಜಧಾನಿ ದೆಹಲಿಗೆ ಸಮೀಪವಿರುವ ಈ ನಗರವು ಪ್ರವಾಸಿಗರನ್ನಂತೂ ಕೈಬೀಸಿ ಕರೆಯುತ್ತಿದೆ.

ಸಿಕಂದರ್:
ಪ್ರವಾಸಿ ತಾಣಗಳೆಲ್ಲ ಆಗ್ರಾ ನಗರಕ್ಕೆ ಹತ್ತಿರವಿದ್ದು ತುಂಬಾ ಕ್ರಮಿಸುವ ಅಗತ್ಯ ಇಲ್ಲ..ಅಂದು ನಾವು ಮೊದಲು ಭೇಟಿ ಕೊಟ್ಟದ್ದು ಅಕ್ಬರ್ ನ ಸಮಾಧಿ ಸ್ಥಳವಾದ ಸಿಕಂದರ್ ಗೆ, ಆ ಸಮಾಧಿಯನ್ನು ಅಕ್ಬರನ ಮಗ ಜಹಾಂಗಿರನು ನಿರ್ಮಿಸಿದ್ದಾನೆ. ಎದುರುಗಡೆ ಪ್ರವೇಶ ದ್ವಾರವಿದ್ದು ಮೊಘಲ ವಾಸ್ತು ಶಿಲ್ಪಗಳ ಶೈಲಿಯಲ್ಲಿ ನಿರ್ಮಿಸಿದ್ದಾರೆ,ಅದರ ಮೇಲೆ ಉರ್ದುವಿನಲ್ಲಿ ಬರೆಯಲಾಗಿದೆ. ಅದರಿಂದ ಒಳಗಡೆ ಹೋದಾಗ ಸಿಗುವುದು ಅಕ್ಬರನ ಸಮಾಧಿ ಸ್ಥಳ ಅದನ್ನೂ ಕೂಡ ಮೊಘಲ್ ಶೈಲಿಯಲ್ಲಿ ಕಟ್ಟಲಾಗಿದೆ. ಅದರ ಹೊರಗಡೆ ಸಂಕೀರ್ಣದಲ್ಲಿ ಗ್ಯಾಲರಿ ಇದೆ. ಇದರ ಸುತ್ತಲೂ ಉದ್ಯಾನವನವಿದೆ.ಆಗ್ರಾದ ಯಾವುದೇ ಪ್ರೇಕ್ಷಣೀಯ ಸ್ಥಳಕ್ಕೆ ಹೋದಾಗಲೂ ಅಲ್ಲಿ ನಿಯೋಜಿತ ಗೈಡ್ಗಳಿರುತ್ತಾರೆ ಅವರೇ ಅಲ್ಲಿನ ಇತಿಹಾಸಗಳನ್ನ ತಿಳಿಸಿ ಕೊಡುತ್ತಾರೆ.

ಆಗ್ರಾ ಕೋಟೆ:
ಅಂದು ಪ್ರವಾಸಿ ತಾಣಗಳಿಗೆ ಭೇಟಿಕೊಡಲು ಹೊರಡಲು ತಡವಾದ್ದರಿಂದ ಅದಾಗಲೇ ಸೂರ್ಯ ನೆತ್ತಿಯ ಮೇಲೆ ಬಂದಿತ್ತು ಹೋಟೆಲ್ಗೆ ಹೋಗಿ ಮಧ್ಯಾಹ್ನದ ಭೋಜನ ಸ್ವೀಕರಿಸಿ ಅಲ್ಲಿಂದ ಕೋಟೆಯ ಕಡೆಗೆ ಹೊರಟೆವು.

ಬೃಹತ್ತಾದ ಆಗ್ರಾ ಕೋಟೆಯು ತಾಜ್ ಮಹಲ್ನಿಂದ 2.5km ದೂರದಲ್ಲಿದೆ.ಯಮುನ ನದಿಯ ಹತ್ತಿರವಿರುವ ಕಾರಣ ಕೋಟೆಯು ಆಕರ್ಷಣೀಯಣೀಯವಾಗಿ ಕಾಣುತ್ತದೆ. ಮೊಘಲರ ಆಳ್ವಿಕೆಯ ಕಾಲದಲ್ಲಿ ಹುಮಯೂನ್ ನ ನಂತರದ ಆಡಳಿತಗಾರರ ವಾಸ ಸ್ಥಾನವಾಗಿತ್ತು.ಇದು ಅರ್ಧ ಚಂದ್ರಾಕರವಾಗಿದ್ದು ಕೆಂಪು ಶಿಲೆಯಿಂದ ನಿರ್ಮಿತವಾಗಿದೆ.ಇದರ ಒಳಗಡೆ ಮಸೀದಿ, ಬಲು ವಿಶೇಷವಾಗಿ ನಿರ್ಮಿಸಿದ ಪ್ರೇಕ್ಷಕರ ಸಭಾಂಗಣ,ಶಹಜಾನ್ ಮಹಲ್,ಅಕ್ಬರ್ ಮಹಲ್ ಕೂಡ ಇದೆ.ಶಹಜಾನ್ ನ ಕಾಲದಲ್ಲಿ ನಿರ್ಮಾಣವಾದ ಕಟ್ಟಡಗಳೆಲ್ಲ ಅಮೃತ ಶಿಲೆಯಿಂದಲೇ ನಿರ್ಮಾಣವಾಗಿದೆ.ಇಲ್ಲಿಯೂ ಕೂಡ ಶಹಜಾನ್ ಮಹಲ್ ಮತ್ತು ಮಸೀದಿಯು ಅಮೃತ ಶಿಲೆಯಿಂದ ನಿರ್ಮಾಣ ಮಾಡಲಾಗಿದೆ. ಕೋಟೆಯ ಒಳಗಡೆ ವಿಸ್ತಾರವಾಗಿದ್ದು ಉದ್ಯಾನವನವು ಇದೆ. ಕೋಟೆಯನ್ನೆಲ್ಲಾ ಸುತ್ತಾಡಿ ಅಲ್ಲಿಂದ ಹೊರಟೆವು.

ತಾಜ್ ಮಹಲ್
ಊರಿಗೆ ಹೋಗಿ ನೀರಿಗೆ ಹೋಗದಿದ್ದರೆ ಹೇಗಾದಿತು?, ಅಂತೆಯೇ ಆಗ್ರಾಕ್ಕೆ ಹೋಗಿ ತಾಜ್ ಮಹಲ್ ನೋಡದಿದ್ದರೆ ಪ್ರವಾಸ ವ್ಯರ್ಥವೇ ಸರಿ. ನಾವು ಬಿಡಿ ಅಮೆರಿಕದಿಂದ ಆಗಮಿಸುವ ಟ್ರಂಪ್ ಕೂಡ ತಾಜ್ ಮಹಲ್ ಗೆ ಭೇಟಿ ಕೊಡಲು ಇನ್ನೇನು ಕೆಲವೇ ದಿನಗಳುಬಾಕಿಇತ್ತಷ್ಟೇ.ಹೀಗಾಗಿಯೇ ತಾಜ್ ಮಹಲ್ ಸಂಕೀರ್ಣವನ್ನು ಇನ್ನಷ್ಟು ಸುಂದರಗೊಳಿಸಲಾಗಿತ್ತು.

ಒಂದಿಷ್ಟು ದೂರದಲ್ಲಿಯೇ ನಮ್ಮ ವಾಹನವನ್ನು ನಿಲ್ಲಿಸಿ ಮತ್ತೆ ಅಲ್ಲಿಂದ ಎಲೆಕ್ಟ್ರಿಕ್ ಚಾಲಿತ ವಾಹನದಲ್ಲಿ ಹೋದೆವು.ಸಂಜೆಯ ಹೊತ್ತಿಗೆ ಹೋದ ಕಾರಣ ಜನವಂತು ಕಿಕ್ಕಿರಿದು ಸೇರಿದ್ದರು.ಅದರಲ್ಲಿ ವಿದೇಶಿಯರೇ ಹೆಚ್ಚು,ಪ್ರೀತಿಸುವ ಒಂದಿಷ್ಟು ಜನಕ್ಕೆ ಪ್ರೇಮ ಸೌಧ ಹಾಗೂ ಪ್ರೀತಿಯ ಸಂಕೇತವಾದ ಮಹಲ್ ನ ಮುಂದೆ ಉನ್ಮತ್ತ ತನ್ಮಯ ಭಾವದಲ್ಲಿ ನಿಂತಿದ್ದೆವು. ತಾಜ್‌ಮಹಲ್ ನ ಎದುರುಗಡೆ ನೀರು ಚಿಮ್ಮುವ ಕಾರಂಜಿ ಇದ್ದು ಎರಡು ಬದಿಗಳಲ್ಲಿ ವರ್ಣಂರಂಜಿತ ಉದ್ಯಾನವನಕ್ಕೆ ಅಂದ ನೀಡುವ ಹೂವಿನ ಗಿಡಗಳಿವೆ ಇವೆಲ್ಲ ತಾಜ್ ನ ಅಂದವನ್ನು ಹೆಚ್ಚಿಸುತ್ತಿದೆ.

ಇಲ್ಲೆಲ್ಲಾ ಫೋಟೋ,ಸೆಲ್ಫಿ ತೆಗೆಯುವವರೇ ಹೆಚ್ಚು ನಾವು ಒಂದು ಗ್ರೂಪ್ ಫೋಟೋ ತೆಗೆದುಕೊಂಡು ತಾಜ್ ನ ಒಳಗಡೆ ಹೊರಟೆವು. ಅಂದಹಾಗೆ ಒಳಗಡೆ ಅಲ್ಲಿ ಕೊಡುವ ಬಟ್ಟೆಯ ಕವರನ್ನು ಕಾಲಿಗೆ ಧರಿಸಿ ಹೋಗಬೇಕು,ಪೂರ್ತಿ ಅಮೃತ ಶಿಲೆಯಿಂದಲೇ ನಿರ್ಮಾಣ ಮಾಡಲಾದ ತಾಜ್ ಮಹಲ್ ಸೂಕ್ಷ್ಮಾತಿಸೂಕ್ಷ್ಮ ಕೆತ್ತನೆಗಳು ಕಣ್ಮನ ಸೆಳೆಯುತ್ತವೆ. ತಾಜ್ ಮಹಲ್ ನ ಹಿಂದಿನ ಭಾಗದಲ್ಲಿ ಶಿವಾಲಿಕ ಬೆಟ್ಟಗಳಿಂದ ಹರಿದು ಬರುವ ಯಮುನಾ ನದಿಯು ಹರಿಯುತ್ತದೆ. ಇದು ಪ್ರವಾಸಿಗರ ಕಣ್ಸೆಳೆಯುತ್ತಿದೆ. ಇಲ್ಲಿಂದ ಆಗ್ರಾ ಕೋಟೆಯ ನೋಟ ಇನ್ನಷ್ಟು ಅಂದವಾಗಿ ತೋರುತ್ತದೆ. ಹತ್ತಿರದಲ್ಲಿ ಒಂದು ಮಸೀದಿ ಸಹ ಇದೆ.

ಫತೇಪುರ್ ಸಿಕ್ರಿ
ಮರು ದಿವಸ ಬೆಳಗ್ಗೆ ಎದ್ದು ಬೆಳಗ್ಗಿನ ಉಪಹಾರ ಸೇವಿಸಿ ಅಲ್ಲಿಂದ ಹೊರಟು ಮೊದಲು ಭೇಟಿ ನೀಡಿದ್ದು ಫತೇಪುರ್ ಸಿಕ್ರಿಗೆ. ವಿಶ್ವ ಪಾರಂಪರಿಕ ತಾಣವಾಗಿರುವ ಫತೇಪುರ್ ಸಿಕ್ರಿವು ಬೃಹತ್ಆ ಕಾರದ ಸಂಕೀರ್ಣವನ್ನು ಹೊಂದಿದೆ.ಇದು ಅಕ್ಬರನು ಕಟ್ಟಿಸಿದ ರಾಜಧಾನಿಯಾಗಿತ್ತು., ನಾವು ಹೊರಡುವ ಜಾಗದಿಂದಲೇ ಕೋಟೆಯ ಪ್ರಾಂಗಣ ಆರಂಭವಾಗುತ್ತದೆ ಆದರೆ ಈಗ ಅದೆಲ್ಲಾ ಅಲ್ಪ ಸ್ವಲ್ಪ ಇದೆಯಷ್ಟೇ ಯುದ್ಧ ಸಮಯದಲ್ಲಿ ನಾಶಗೊಂಡಿದೆ ಎಂದು ಅಲ್ಲಿನ ಗೈಡ್ ತಿಳಿಸಿದರು. ಈಗ ಅಲ್ಲಿಂದಲೇ ಮಾರ್ಗವಿದೆ ಮುಂದೆ ಹೋಗಿ ಬಸ್ಸಿನಿಂದ ಇಳಿದು ನೋಡುವಾಗ ಕಾಣಸಿಗುವುದು ‘ಬುಲಂದ್ ದರ್ವಾಜ್’, ಕೋಟೆಯ ಮುಖ್ಯ ಪ್ರವೇಶ ದ್ವಾರವಾಗಿದೆ.  ಮೊಘಲ್ ಶೈಲಿಯಲ್ಲಿ ನಿರ್ಮಿತವಾಗಿದೆ.

ಮುಂದೆ ಹೋದಾಗ ಒಳಾಂಗಣ ವಿಸ್ತಾರವಾಗಿದ್ದು ಬೇರೆ ಬೇರೆ ವಾಸ್ತು ಶಿಲ್ಪಗಳು ಕಟ್ಟಡಗಳು ಕಾಣಸಿಗುತ್ತವೆ. ಒಳಗಡೆ ಐದು ಮಹಡಿಯುಳ್ಳ ಕಟ್ಟಡ (ಪಂಚ ಮಹಲ್),ನಾವೆಲ್ಲ ಅಕ್ಬರ್ ಬೀರಬಲ್ಲನ ಕತೆಗಳನ್ನು ಕೇಳಿರುತ್ತೇವೆ. ಆ ಅಕ್ಬರ್ ನ ಮಂತ್ರಿ ಬೀರಬಲ್ಲನ ಆಸ್ಥಾನ ಇಲ್ಲಿಯೇ ಇರೋದು, ಜೋಧಾ ಬಾಯಿ ಮಂದಿರ ಕೂಡ ಇದೆ, ಒಳಗಡೆ ಮಸೀದಿಯೂ ಇದೆ. ಇಲ್ಲಿನ ವಾಸ್ತು ಶಿಲ್ಪಗಳು ವಿವಿಧ ರಾಜ್ಯಗಳ ಶೈಲಿಯಲ್ಲಿ ನಿರ್ಮಾಣವಾಗಿದೆ.ಎಲ್ಲಾ ಕೋಟೆ ಗಳನ್ನು ನಿರ್ಮಾಣ ಮಾಡಿದ ಹಾಗೇನೇ ಇದನ್ನು ಕೂಡ ಕೆಂಪು ಕಲ್ಲಿನಿಂದ ನಿರ್ಮಾಣ ಮಾಡಿದ್ದಾರೆ.
ಒಟ್ಟಾರೆ ಆಗ್ರಾ ಪ್ರವಾಸ ಅತ್ಯಂತ ಮಧುರ ನೆನಪಾಗಿ ಉಳಿದಿತ್ತು..

ಆಗ್ರಾದ ಇತರ ಪ್ರವಾಸೀ ತಾಣಗಳು:
ಪಲೀವಾಲ್ ಪಾರ್ಕ್
ಮಂಕಮೇಶ್ವರ ದೇವಳ ಇತ್ಯಾದಿ..

ಇತರ ಸಾಮಾಗ್ರಿಗಳು:
* ಚರ್ಮದ ಉತ್ಪನ್ನಗಳು
* ಮರದ ಉತ್ಪನ್ನಗಳು ಇತ್ಯಾದಿ..

ಆಗ್ರಾ ಫೇಡಾ ತರೋದು ಮರಿಬೇಡಿ: ಆಗ್ರಾಗೆ ಹೋದರೆ, ಆಗ್ರಾದ ಬಹು ವಿಶೇಷ ಸಿಹಿತಿಂಡಿ ಫೇಡಾ ತರಲು‌ ಮರೀಬೇಡಿ. ಬೂದುಕುಂಬಳದಿಂದ ತಯಾರಿಸಲ್ಪಡುವ ಹಲ್ವಾ ಹೋಲುವ ತಿನಿಸು, ಅತ್ಯಂತ ಮಿತದರದಲ್ಲಿ ಲಭ್ಯವಿವೆ.

– ರೋಹಿತ್ ದೋಳ್ಪಾಡಿ

ಪ್ರವಾಸೋದ್ಯಮ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆ

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಹೆಣ್ಣು ಮಕ್ಕಳು ತಿಳಿದುಕೊಳ್ಳಬೇಕಾದ ಒಂದು ವಿಚಾರ.

Harshitha Harish

ನಿಮ್ಮ ನಗುವೇ ನಿಮ್ಮ ಶಕ್ತಿ; ಸದೃಢ ಹಲ್ಲುಗಳಿಂದ ಉತ್ತಮ ಆರೋಗ್ಯ

Upayuktha

‘ರಕ್ತದಾನ ಜೀವದಾನ’: ಇಂದು ವಿಶ್ವ ರಕ್ತದಾನಿಗಳ ದಿನ

Upayuktha