ದೇಶ-ವಿದೇಶ ಬಾಲಿವುಡ್

ಐರಾವತ ಸಿನಿಮಾದ ನಟಿ ಊರ್ವಶಿ ಉ.ಪ್ರದೇಶದ ಮುಖ್ಯಮಂತ್ರಿ ಯೋಗಿ ಯವರ ಭೇಟಿ

ಉತ್ತರ ಪ್ರದೇಶ:

ದರ್ಶನ್ ಅಭಿನಯದ ‘ಐರಾವತ’ ಸಿನಿಮಾದಲ್ಲಿ ನಟಿಸಿದ ಬೆಡಗಿ ಊರ್ವಶಿ ರೋಟೆಲ್ಲ ಅಚಾನಕ್ಕಾಗಿ ಉತ್ತರ ಪ್ರದೇಶ ರಾಜ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿಯಾಗಿದ್ದಾರೆ. ಭೇಟಿ ಸಮಯ ಯೋಗಿ ಆದಿತ್ಯನಾಥರಿಗೆ ಉಡುಗೊರೆಯನ್ನು ನೀಡಿರುವ ಊರ್ವಶಿ ರಾಟೆಲ್ಲಾ

‘ನಿಮ್ಮ ಅತ್ಯಂತ ಬ್ಯುಸಿ ಶೆಡ್ಯೂಲ್‌ನ ನಡುವೆಯೂ ಈ ಮಧ್ಯಾಹ್ನ ನನ್ನನ್ನು ಭೇಟಿಯಾಗಿದ್ದು ಅತೀವ ಸಂತೋಷ ತಂದಿದೆ’ ಎಂದು ಊರ್ವಶಿ ರಾಟೆಲ್ಲ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು, ಚಿತ್ರವನ್ನು ಶೇರ್ ಮಾಡಿದ್ದಾರೆ.

ಅವರು ‘ಇನ್‌ಸ್ಪೆಕ್ಟರ್ ಅವಿನಾಶ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದು, ಚಿತ್ರೀಕರಣವು ಉತ್ತರ ಪ್ರದೇಶದ ವಿವಿಧ ನಗರಗಳಲ್ಲಿ ನಡೆಯಲಿದೆ.

ಮೊದಲ ಬಾರಿಗೆ ಲಖನೌ ನ ಹುಡುಗಿಯ ಪಾತ್ರದಲ್ಲಿ ಊರ್ವಶಿ ಕಾಣಿಸಿಕೊಳ್ಳಲಿದ್ದಾರೆ. ‘ನಾನು ನನ್ನ ಅಭಿನಯದಿಂದ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಲಿದ್ದೇನೆ’ ಎಂದಿದ್ದಾರೆ ಊರ್ವಶಿ.

ಚಿತ್ರತಂಡಕ್ಕೆ ಉತ್ತರ ಪ್ರದೇಶ ಸರ್ಕಾರವು ವಿಶೇಷ ಅನುಮತಿ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಿದೆ ಎನ್ನಲಾಗುತ್ತಿದೆ.

ಈ ಕಾರಣಕ್ಕಾಗಿಯೇ ಊರ್ವಶಿ ಅವರು ಯೋಗಿ ಆದಿತ್ಯನಾಥರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದ್ದಾರೆ ಮತ್ತು ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ

Related posts

ಜಯಾ ಜೇಟ್ಲಿ, ಸಂಗಡಿಗರಿಗೆ 4 ವರ್ಷ ಜೈಲು, 1 ಲಕ್ಷ ರೂ ದಂಡ ವಿಧಿಸಿದ ದಿಲ್ಲಿ ವಿಶೇಷ ನ್ಯಾಯಾಲಯ

Harshitha Harish

ಕೋವಿಡ್ -19: ವಿಶ್ವದಲ್ಲಿ 92 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು

Upayuktha

ಬಿಜೆಪಿಯಿಂದ ಕಲಿತ ಪಾಠ: ‘ರಾಷ್ಟ್ರೀಯತೆ’ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ತರಬೇತಿ

Upayuktha