ಕತೆ-ಕವನಗಳು

*ಅಜ್ಜಿ ಕತೆ*

ಅಜ್ಜ ,ಕತೆಯನು
ನಿತ್ಯ ಮನೆಯಲಿ
ಹೇಳಿ ಬೇಸರ ಕಳೆವನು
ಚಂದ ಮಾಮನ
ಬಾಲ ಮಿತ್ರನ
ಕೃತಿಯ ಓದುತ ಇರುವನು..

ಸಿಂದ ಬಾದನ
ಪಂಚ ತಂತ್ರದ
ಅಂದ ಕತೆಗಳ ಹೇಳಲು
ಖುಷಿಯು ಬಹಳವು
ಅವನ ಸುತ್ತಲು
ಕುಳಿತು ಕತೆಗಳ ಸವಿಯಲು..

ಅಜ್ಜಿ ಕತೆಗಳು
ಕಾಗೆ ಗುಬ್ಬಿಯ
ಹೇಗೆ ಮನವನು ಸೆಳೆದಿದೆ
ಎಂದು ಹೇಳಲು
ನಮಗೆ ಅಸದಳ
ಇಂದು ಇಂಥದು, ಎಲ್ಲಿದೆ?

ನಾವು ನಗರದ
ಮನೆಯ ಗೂಡಲಿ
ಬಂಧಿ, ಅಜ್ಜನು ಊರಲಿ
ಅಪ್ಪ ಅಮ್ಮನು
ಹೊರಗೆ ದುಡಿವರು
ಕತೆಯ ಯಾರಲಿ ಕೇಳಲಿ..?

ಹಳೆಯ ಕತೆಗಳು
ಬೆಳೆಸುತಿದ್ದವು
ನಮ್ಮ ಮನದಲಿ ಭಾವನೆ
ಇನ್ನು ನೆನಪಿದೆ
ಮರೆಯಲಾಗದು
ಈಗ ಉಳಿದಿದೆ ವೇದನೆ….

*ಗುಣಾಜೆ ರಾಮಚಂದ್ರ ಭಟ್*

Related posts

ಬಾಲವನ

Harshitha Harish

ಗಝಲ್: ದೀಪ ಹಚ್ಚಿದ ಮಗಳು

Upayuktha

ಹವ್ಯಕ ಕವಿತೆ: ಇಡ್ಕುತ್ತವು ಎಲ್ಲೋರು ಕಲ್ಲು ಹಣ್ಣಿಂಗೆ

Upayuktha