ರಾಜ್ಯ ಸಮುದಾಯ ಸುದ್ದಿ

ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್‌ನ ಪ್ರಥಮ ಸಭೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿ ಸಮಿತಿಯ ಪ್ರಥಮ ಸಭೆ ಜುಲೈ 6ರಂದು ಸೋಮವಾರ ರಾಧಾಕೃಷ್ಣ ಮಂದಿರ (ಬಾಲಂಭಟ್ರ ಹಾಲ್) ಇಲ್ಲಿ ಜರುಗಿತು.

Advertisement
Advertisement

ಫಲನ್ಯಾಸ ಪೂರ್ವಕ ದೇವತಾ ಪ್ರಾರ್ಥನೆ, ಸ್ವಸ್ತಿವಾಚನದೊಂದಿಗೆ ಪ್ರಾರಂಭವಾಗಿ ಜಿಲ್ಲಾಧ್ಯಕ್ಷ ವೇದಮೂರ್ತಿ ಕೃಷ್ಣರಾಜ ಭಟ್ ಅವರು ಪ್ರಸ್ತಾವನೆಯೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ರಾಜ್ಯಾಧ್ಯಕ್ಷ ವೇದಬ್ರಹ್ಮ ವಿದ್ವಾನ್ ಎಂ.ಎಲ್.ವಿಶ್ವೇಶ್ವರ ಭಟ್ಟರು ಧ್ವನಿ ಸಂದೇಶದ ಮೂಲಕ ಅಧಿಕೃತವಾಗಿ ಉದ್ಘಾಟಿಸಿ, ಶುಭ ಕೋರಿದರು.

ಹಿರಿಯ ಉಪಾಧ್ಯಕ್ಷರಾದ ವೇದಬ್ರಹ್ಮ ಡಾ|| ರಾಘವೇಂದ್ರ ಭಟ್ಟರು ಪರಿಷತ್ತಿನ ಕಾರ್ಯ ಚಟುವಟಿಕೆಯ ಮಾರ್ಗದರ್ಶನವನ್ನು ನೀಡಿ ಶುಭ ಹಾರೈಸಿದರು. ಪ್ರತಿಜ್ಞಾವಿಧಿಯೊಂದಿಗೆ ಅಧಿಕಾರ ಸ್ವೀಕರಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಮುಕ್ತವಾಗಿ ಅಭಿಪ್ರಾಯಗಳನ್ನು ಮಂಡಿಸಿ ಮುಂದಿನ ತಾಲೂಕು ಸಮಿತಿಯ ರಚನೆ ಮತ್ತು ಸದಸ್ಯತ್ವ ನೋಂದಣಿಯ ಜವಾಬ್ದಾರಿಯನ್ನು ಹಂಚಿಕೊಂಡರು.

ಜಿಲ್ಲಾ ಕಾರ್ಯದರ್ಶಿ ವೇದಮೂರ್ತಿ ಶ್ರೀ ರಾಘವೇಂದ್ರ ಹೊಳ್ಳರು ಧನ್ಯವಾದವನ್ನು ಸಮರ್ಪಿಸಿದರು. ವಿಪ್ರಾಭಿಮಾನಿ ರಘುರಾಮ ರಾಯರು ಆಸಕ್ತಿಯಿಂದ ಭಾಗವಹಿಸಿ ಎಲ್ಲರಿಗೂ ಮಾಸ್ಕನ್ನು ವಿತರಿಸಿದರು. ಸ್ಥಳಾವಕಾಶ ಮತ್ತು ಉಪಹಾರದ ಕೃಪೆಯನ್ನು ಜಿಲ್ಲಾ ಕೋಶಾಧ್ಯಕ್ಷರಾದ ವೇದಮೂರ್ತಿ ವಿದ್ವಾನ್ ಡಾ|| ಸತ್ಯಕೃಷ್ಣ ಭಟ್. ಎಂ ಇವರು ವಹಿಸಿಕೊಂಡಿದ್ದರು.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Advertisement
Advertisement

Related posts

ಬಿಎಸ್‌ವೈ ಇಳಿಸಲು ಬಿಜೆಪಿಯಲ್ಲೇ ಸಂಚು: ಸಿದ್ದರಾಮಯ್ಯ ಆರೋಪ

Upayuktha

ಕೊರೊನಾ ಮಹಾಮಾರಿಯ ತಾಂಡವಕ್ಕೆ ಭೂಪಟದಲ್ಲಿ ಒಂದು ದೇಶವೇ ಅಳಿಸಿ ಹೋದೀತು: ಕೋಡಿ ಮಠ ಶ್ರೀಗಳ ಭವಿಷ್ಯವಾಣಿ

Upayuktha

ಕೋವಿಡ್ ಹಿನ್ನೆಲೆಯಲ್ಲಿ ಬೆಂಗಳೂರು ಲಾಲ್ ಬಾಗ್ ಫ್ಲವರ್ ಶೋ ರದ್ದು

Harshitha Harish
error: Copying Content is Prohibited !!