ಸಮುದಾಯ ಸುದ್ದಿ ಸ್ಥಳೀಯ

50ಕ್ಕೂ ಹೆಚ್ಚು ಬ್ರಾಹ್ಮಣ ಕುಟುಂಬಗಳಿಗೆ ಆಹಾರದ ಕಿಟ್, ಮಾಸ್ಕ್‌ ವಿತರಣೆ

‘ಅಕ್ಷಯಪಾತ್ರ’ ಮತ್ತು ರುದ್ರ ಪಾರಾಯಣ ಮಿತ್ರರ ಸಹಿತ ಬ್ರಾಹ್ಮಣ ಬಂಧುಗಳಿಂದ ಸ್ತುತ್ಯರ್ಹ ಕಾರ್ಯ

ಕೊಂಚಾಡಿ (ಮಂಗಳೂರು): ಕೊರೋನಾ ಸಂದಿಗ್ಧತೆ ಸಂದರ್ಭದಲ್ಲಿ ಅಕ್ಷಯ ಪಾತ್ರೆ ಹಾಗೂ ರುದ್ರ ಪಾರಾಯಣ ಮಿತ್ರರು ಸೇರಿದಂತೆ ವಿವಿಧ ಬ್ರಾಹ್ಮಣ ಸಹೃದಯಿಗಳು ಸಾಮಾಜಿಕ ಕಳಕಳಿಯಿಂದ 50ಕ್ಕೂ ಹೆಚ್ಚು ಬ್ರಾಹ್ಮಣ ಕುಟುಂಬಗಳಿಗೆ ಆಹಾರದ ಕಿಟ್‌ ಹಾಗೂ ಮಾಸ್ಕ್‌ಗಳನ್ನು ವಿತರಿಸಿದರು.

ಬ್ರಾಹ್ಮಣರಿಂದ ಬ್ರಾಹ್ಮಣರಿಗೆ ಎಂಬಂತೆ ಬ್ರಾಹ್ಮಣ ಮಿತ್ರರು ಅಕ್ಷಯ ಪಾತ್ರೆ ಎಂಬ ಬ್ರಾಹ್ಮಣ ದಾನಿಗಳು ಕೂಡಿಟ್ಟ ಹಣದ ನೆರವಿನಿಂದ ಬ್ರಾಹ್ಮಣರ ಬಾಂಧವರ ಶ್ರೇಯೋಭಿವೃದ್ಧಿಗೆ ದಾನಿಗಳು ನಿಡಿದ ದೇಣಿಗೆಯೊಂದಿಗೆ ಈ ಕಿಟ್‌ಗಳನ್ನು ವಿತರಿಸಲಾಯಿತು.

ಪ್ರಥಮ ಹಂತದಲ್ಲಿ ಏಪ್ರಿಲ್ 20ರಿಂದ ಇಂದಿನ ವರೆಗೆ ಕೂಳೂರು, ಹೊನ್ನಕಟ್ಟೆ, ಕೃಷ್ಣಾಪುರ, ಸುರತ್ಕಲ್, ಮಣ್ಣಗುಡ್ಡೆ, ಶಕ್ತಿನಗರ, ಪೆರವೋಡಿ, ಸಜಿಪನಡು, ವ್ಯಾಸ ನಗರ, ಲ್ಯಾಂಡ್ ಲಿಂಕ್ಸ್,  ಪುನರೂರು, ಪಚ್ಚನಾಡಿ, ಮಂಗಳಾದೇವಿ, ಅಳಿಕೆ, ನಾಗಕನ್ನಿಕಾ ರಸ್ತೆ, ಮಂದಾರ ಬೈಲ್, ಪ್ರಶಾಂತ ನಗರ, ನೆಕ್ಕಿಲ ಗುಡ್ಡೆ, ಬೋಳೂರು, ಮುಡಿಪು ದೇರಳಕಟ್ಟೆ, ಅಸೈಗೋಳಿ, ಹರೇಕಳ, ಬಡಕ್ಕರೆ, ನವಗ್ರಾಮ, ಪಡಿಕಲ್ಲು, ಅಡ್ಯಾರು ಉತ್ತರ ಮತ್ತು ದಕ್ಷಿಣ, ಮಾಲೇಮಾರ್ ಪ್ರದೇಶಗಳಲ್ಲಿ ಇರುವ ಸುಮಾರು 50ಕ್ಕೂ ಹೆಚ್ಚು ಶಿವಳ್ಳಿ, ಹವ್ಯಕ, ಕೂಟ ಹಾಗೂ ಸ್ಥಾನಿಕ ಬ್ರಾಹ್ಮಣ ಸಮಾಜದ ಬಾಂಧವರಿಗೆ ಆಹಾರದ ಚೀಲವನ್ನು ಮಾಸ್ಕ್ ಸಹಿತದ ಅಭಿಯಾನ ದೊಂದಿಗೆ ಹಸ್ತಾಂತರ ಮಾಡಲಾಯಿತು.

ದಾನಿಗಳಿಗೆ ಹಾಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ನಮ್ಮ ಆತ್ಮೀಯ ಬ್ರಾಹ್ಮಣ ಬಂಧುಗಳಿಗೆ, ಮಾರ್ಗದರ್ಶನ ಮಾಡಿದ ಸಹೃದಯಿ ಬ್ರಾಹ್ಮಣ ಮಿತ್ರರಿಗೆ, ಸ್ವೀಕರಿಸಿದ ಬಂಧುಗಳಿಗೆ ಶ್ರೀ ದೇವರು ಆಯುರ್ ಆರೋಗ್ಯ ಐಶ್ವರ್ಯ ಕೊಟ್ಟು ಆನುಗ್ರಹ ಮಾಡಲಿ ಎಂದು ‘ಅಕ್ಷಯ ಪಾತ್ರೆ’ಯ ಗುರುಪ್ರಸಾದ್ ಕಡಂಬಾರ್ ಮತ್ತು ರುದ್ರ ಪಾರಾಯಣ ಮಿತ್ರರು, ಲ್ಯಾಂಡ್ ಲಿಂಕ್ಸ್, ದೇರೇಬೈಲು- ಇಲ್ಲಿನ ರಘುರಾಮ ರಾವ್ ಹಾರೈಸಿದ್ದಾರೆ.

ಆಹಾರದ ಕಿಟ್ ವಿತರಣೆ ತಂಡದಲ್ಲಿ ಡಾ. ರಾಜೇಂದ್ರ ಪ್ರಸಾದ್‌, ಪಯ ಶ್ರೀಕೃಷ್ಣ ಭಟ್‌, ನೆ.ಕೃ ತಿಮ್ಮಪ್ಪಯ್ಯ, ರಘುರಾಮ ರಾವ್‌, ಗುರುಪ್ರಸಾದ್‌ ಕಡಂಬಾರ್ ಸೇರಿದಂತೆ ಹಲವು ಸಹೃದಯರು ಭಾಗಿಯಾಗಿದ್ದರು.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ನಗರ ಹಸೀರೀಕರಣ ಪ್ರತಿಯೊಬ್ಬನ ಕರ್ತವ್ಯ: ವೇದವ್ಯಾಸ ಕಾಮತ್

Upayuktha

ಗಣಿತ ಸಮಸ್ಯೆಗಳಿಗೆ ಸಾಫ್ಟ್‌ವೇರ್‌ ಅಗತ್ಯ: ಡಾ. ಚೇತನಾ

Upayuktha

ಪಿಯುಸಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ

Upayuktha
error: Copying Content is Prohibited !!