ಗ್ರಾಮಾಂತರ

ಅಳದಂಗಡಿ ಗ್ರಾ. ಪಂ.:ನೂತನ ಅಧ್ಯಕ್ಷರಾಗಿ ಸೌಮ್ಯ ಪಿಲ್ಯ, ಉಪಾಧ್ಯಕ್ಷ ಹರೀಶ್ ಆಚಾರ್ಯ ಮಿತ್ತಾರೋಡಿ ಆಯ್ಕೆ

ಅಳದಂಗಡಿ: ಅಳದಂಗಡಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಸೌಮ್ಯ ಪಿಲ್ಯ, ಉಪಾಧ್ಯಕ್ಷ ಹರೀಶ್ ಆಚಾರ್ಯ ಮಿತ್ತಾರೋಡಿ ಆಯ್ಕೆಯಾಗಿದ್ದಾರೆ.

ಹರೀಶ್ ಆಚಾರ್ಯ ಮಿತ್ತಾರೋಡಿ
ಅಳದಂಗಡಿ ಗ್ರಾಮ ಪಂಚಾಯತ್ ನಲ್ಲಿ ಫೆ.12 ರಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮದ್ದಡ್ಕ ತೋಟಗಾರಿಕಾ ಕ್ಷೇತ್ರದ ಸಹಾಯಕ ತೋಟಗಾರಿಕ ನಿರ್ದೇಶಕಿ ಲಿಖೀತಾ ರಾಜ್ ರವರು ಚುನಾವಣಾಧಿಕಾರಿ ಯಾಗಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ ಕೊಟ್ಟರು.

ಈ ಸಂದರ್ಭದಲ್ಲಿ ಪಂ.ಅ. ಅಧಿಕಾರಿ ರವಿ, ಕಾರ್ಯದರ್ಶಿ ಶ್ರೀನಿವಾಸ್, ಪಂಚಾಯತ್ ನ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಅಳದಂಗಡಿ ಗ್ರಾ.ಪಂ ನ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 9 ಸ್ಥಾನವನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪಡೆದು ಅಧಿಕಾರ ಗದ್ದುಗೆಯನ್ನು ಪಡೆಯುವಲ್ಲಿ ಯಶ್ವಸಿಯಾಗಿದ್ದಾರೆ.

ಪಿಲ್ಯ ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾದ ಸೌಮ್ಯ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿ ಅಧ್ಯಕ್ಷರಾಗಿದ್ದಾರೆ. ಬಡಗಕಾರಂದೂರು 1ನೇ ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾದ ಹರೀಶ್ ಆಚಾರ್ಯ ಹಿಂದುಳಿದ ವರ್ಗ ಎ ಮೀಸಲಾತಿಯಲ್ಲಿ ಉಪಾಧ್ಯಕ್ಷರಾಗುವ ಅವಕಾಶ ದೊರೆಯಿತು.

Related posts

ಆಳ್ವಾಸ್‌ ಕಾಲೇಜಿನಲ್ಲಿ `ನಾಯಕತ್ವ-ಯುವಜನಾಂಗ ಹಾಗೂ ರಾಷ್ಟ್ರ ನಿರ್ಮಾಣ’ ಶಿಬಿರ

Upayuktha

ಪ್ರಕೃತಿಲೀನರಾದ ತಂತ್ರಿವರ್ಯರು; ಸಾಂಗವಾಗಿ ನೆರವೇರಿದ ಅಂತ್ಯೇಷ್ಠಿ

Upayuktha

ಕೆಮ್ ಮ್ಯಾಜಿಕ್: ಮಾಹಿತಿ ಮತ್ತು ಪ್ರಾತ್ಯಕ್ಷಿಕೆ- ವಿಶೇಷ ಶೈಕ್ಷಣಿಕ ಕಾರ್ಯಕ್ರಮ

Upayuktha