ರಾಜ್ಯ

ಸರ್ಕಾರಿ ಉದ್ಯೋಗಿಗಳು ಕಛೇರಿಯಲ್ಲಿ ಐಡಿ ಕಾರ್ಡ್ ಧರಿಸುವುದು ಕಡ್ಡಾಯ

ಬೆಂಗಳೂರು: ಸರ್ಕಾರಿ ನೌಕರಿಯಲ್ಲಿರುವ ತಮ್ಮ ಕಛೇರಿಗಳಲ್ಲಿ, ಕೆಲಸದ ಸಮಯದಲ್ಲಿ ಕಡ್ಡಾಯವಾಗಿ ಸರ್ಕಾರ ಒದಗಿಸಿದ ಗುರುತಿನ ಚೀಟಿಯನ್ನು ಧರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ.

ಈ ಬಗ್ಗೆ ಆದೇಶ ಹೊರಡಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಕೇವಲ ತಾವು ಕರ್ತವ್ಯ ನಿರ್ವಹಿಸುವ ಇಲಾಖೆ ನೀಡಿದ ಗುರುತಿನ ಚೀಟಿಯನ್ನು ಧರಿಸುವುದು ಮಾತ್ರವಲ್ಲದೆ, ಕಛೇರಿಯಲ್ಲಿ ತಾವು ಕುಳಿತುಕೊಳ್ಳುವ ಸ್ಥಳದ ಮೇಜಿನ ಮೇಲೆಯೂ ತಮ್ಮ ಹೆಸರು, ಹುದ್ದೆ ನಮೂದಾಗಿರುವ ನಾಮಫಲಕಗಳನ್ನು ಅಳವಡಿಸಬೇಕು ಎಂದು ತಿಳಿಸಿದ್ದಾರೆ.

ಇದೀಗ ಕೆಲಸದಲ್ಲಿ ಪಾರದರ್ಶಕ‌ತೆ ತರಲು, ಸಾರ್ವಜನಿಕ‌ರಿಗೆ ಅಧಿಕಾರಿಗಳನ್ನು ನೇರವಾಗಿ ಭೇಟಿಯಾಗುವುದಕ್ಕೆ ಸಹಾಯವಾಗುತ್ತದೆ. ಅದಕ್ಕಾಗಿ ಈ ಕ್ರಮವನ್ನು ಜಾರಿಗೆ ತರಲಾಗಿದೆ.

ಈ ವ್ಯವಸ್ಥೆಯೂ ಬ್ಯಾಂಕ್, ಅಂಚೆ ಕಛೇರಿಗಳಲ್ಲಿ ಈಗಾಗಲೇ ಜಾರಿಯಲ್ಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಈ ಆದೇಶವನ್ನು ಸರಿಯಾದ ರೀತಿಯಲ್ಲಿ ಪಾಲಿಸುವಂತೆ  ಎಲ್ಲಾ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ‌ಗಳು, ಪ್ರಧಾನ ಕಾರ್ಯದರ್ಶಿ‌ಗಳು, ಕಾರ್ಯದರ್ಶಿ‌ಗಳು ತಮ್ಮ ಕೆಳಗಿನ ಎಲ್ಲಾ ಸಿಬ್ಬಂದಿ‌ಗಳಿಗೂ ಕಡ್ಡಾಯವಾಗಿ ಸೂಚನೆ ನೀಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

Related posts

ಕೋಮು ಗಲಭೆಗಳ ಪ್ರಚೋದನಕಾರಿ ಪೋಸ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ – ಗೃಹ ಸಚಿವ

Harshitha Harish

ಸಚಿವ ಜೆಸಿ ಮಾಧುಸ್ವಾಮಿ ಕೊರೊನಾ ಪಾಸಿಟಿವ್; ಆರೋಗ್ಯ ಸಚಿವ ಟ್ವೀಟ್

Harshitha Harish

ಮುಂಬಯಿ ವಿವಿ ಕನ್ನಡ ಎಂಎಯಲ್ಲಿ ಅನಿತಾ ಪೂಜಾರಿ ಪ್ರಥಮ ರ‍್ಯಾಂಕ್: ಎಂ.ಬಿ.ಕುಕ್ಯಾನ್ ಚಿನ್ನದ ಪದಕ ನ.30ಕ್ಕೆ ಪ್ರದಾನ

Upayuktha