ಇತರ ಕ್ರೀಡೆಗಳು ಕ್ರೀಡೆ ಪ್ರಮುಖ

ಅಖಿಲ ಭಾರತ ಅಂತರ್‌ ವಿವಿ ಖೇಲೋ ಇಂಡಿಯಾ ಕ್ರೀಡಾಕೂಟ: ಆಳ್ವಾಸ್ ವಿದ್ಯಾರ್ಥಿಗಳಿಗೆ ಹಲವು ಪದಕಗಳು

ಮೂಡುಬಿದಿರೆ: ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್ ವಿ.ವಿ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಹಲವು ವಿಭಾಗಗಳಲ್ಲಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳು ಲಭಿಸಿವೆ.

5000 ಮೀಟರ್‌ ಓಟದ ವಿಭಾಗವನ್ನು 14.18 ನಿಮಿಷಗಳಲ್ಲಿ ಪೂರೈಸಿದ ನರೇಂದ್ರ ಪ್ರತಾಪ್ ಸಿಂಗ್‍ಗೆ ಚಿನ್ನದ ಪದಕ ಹಾಗೂ 14.27 ನಿಮಿಷದಲ್ಲಿ ಪೂರೈಸಿದ ಆದೇಶ್‍ಗೆ ಬೆಳ್ಳಿ ಪದಕ ಲಭಿಸಿದೆ.

ಮಹಿಳಾ ವಿಭಾಗದ 100 ಮೀಟರ್ಸ್ ಡ್ಯಾಶ್‍ನ್ನು 11.99 ಸೆಕೆಂಡ್‍ಗಳಲ್ಲಿ ಪೂರೈಸಿದ ಧನಲಕ್ಷ್ಮಿಎಸ್‍ಗೆ ಬೆಳ್ಳಿ ಪದಕ, ಪರುಷರ ವಿಭಾಗದ 100 ಮೀಟರ್ಸ್‍ಡ್ಯಾಶ್‍ನ್ನು 10.72 ಸೆಕೆಂಡ್‍ಗಳಲ್ಲಿ ಪೂರೈಸಿದ ವಿಘ್ನೇಶ್ ಎ. ಗೆ ಕಂಚಿನ ಪದಕ ಲಭಿಸಿದೆ.

ಪುರುಷರ ವಿಭಾಗದ 20 ಕಿ. ಮೀ ನಡಿಗೆಯನ್ನು 1 ಗಂಟೆ 29ನಿಮಿಷಗಳಲ್ಲಿ ಪೂರೈಸಿದ ಜುನೇದ್‍ಗೆ ಚಿನ್ನದ ಪದಕ, ಎತ್ತರ ಜಿಗಿತ ವಿಭಾಗದಲ್ಲಿಅರೊಮಲ್ ಟಿ. 2.04 ಮೀಟರ್‌ ಜಿಗಿದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಡಿಸ್ಕಸ್‍ಥ್ರೋ ವಿಭಾಗದಲ್ಲಿ 46. 32 ಮೀಟರ್ ದೂರಕ್ಕೆ ಎಸೆದ ನಿಧಿ ರಾಣಿಗೆ ಬೆಳ್ಳಿ ಪದಕ, ಸಫ್ವನ್ 4×100 ಮೀಟರ್‌ ರಿಲೇಯನ್ನು 41.45 ನೊಂದಿಗೆ ಪೂರೈಸಿದ ವಿಘ್ನೇಶ್ ಎ ಮತ್ತು ಮಹಮ್ಮದ್‍ಗೆ ಬೆಳ್ಳಿ ಪದಕ ಹಾಗೂ ಡೆಕಥ್ಲಾನ್ ವಿಭಾಗದಲ್ಲಿ ಕೃಷ್ಣ ಕುಮಾರ್ 6210 ಅಂಕಗಳೊಂದಿಗೆ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. 50 ಕೆ.ಜಿ ಕುಸ್ತಿ ವಿಭಾಗದಲ್ಲಿ ವಂದನಾಗೆಕಂಚಿನ ಪದಕ ಲಭಿಸಿದೆ.

ಆಳ್ವಾಸ್ ಕಾಲೇಜಿನ ವರ್ಷಾಗೆ ಹ್ಯಾಮರ್‌ ಥ್ರೋನಲ್ಲಿ 51.80 ಮೀಟರ್ ಎಸೆತದೊಂದಿಗೆ ಚಿನ್ನದ ಪದಕ, ಎತ್ತರ ಜಿಗಿತದಲ್ಲಿ 1.74 ಮೀಟರ್‍ಎತ್ತರಕ್ಕೆ ಹಾರಿದಎಸ್. ಬಿ ಸುಪ್ರಿಯಾ ಚಿನ್ನದ ಪದಕವನ್ನು ತಮ್ಮದಾಗಿಸಿ ಕೊಂಡಿದ್ದಾರೆ.

ಟ್ರಿಪಲ್‌ ಜಂಪ್ ವಿಭಾಗದಲ್ಲಿ 12.78 ಮೀಟರ್ ಹಾರಿದ ಐಶ್ವರ್ಯಾಬಿ.ಗೆ ಚಿನ್ನದ ಪದಕ ಮತ್ತು 12.10 ಮೀಟರ್ ಹಾರಿದ ಅನುಷಾ ಜಿ. ಗೆ ಕಂಚಿನ ಪದಕ ಲಭಿಸಿದೆ.ಪುರುಷರ ವಿಭಾಗದ 200 ಮೀಟರ್‌ ಡ್ಯಾಶ್ ವಿಭಾಗವನ್ನು 21.75 ಸೆಕೆಂಡ್‍ಗಳಲ್ಲಿ ಮುಗಿಸಿದ ವಿಘ್ನೇಶ್ ಎ. ಗೆ ಕಂಚಿನ ಪದಕ ಲಭಿಸಿದೆ.

ವಿವಿಧ ವಿಭಾಗಳಲ್ಲಿ ಸಾಧನೆ ಮೆರೆದ ಎಲ್ಲಾ ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಾಗಿದ್ದಾರೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಮ್ಯಾನೇಜ್ ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ತುಲಾ ಸಂಕ್ರಮಣ: ಮುಜುಂಗಾವು ಕ್ಷೇತ್ರದಲ್ಲಿ ನಾಳೆ ಕಾವೇರಿ ತೀರ್ಥಸ್ನಾನ

Upayuktha

ಕೋವಿಡ್ 19 ಲಾಕ್‌ಡೌನ್‌: ಇಂದಿನ ವಾಣಿಜ್ಯ ಸುದ್ದಿ ಮುಖ್ಯಾಂಶಗಳು

Upayuktha

ಶೇ 70ರಷ್ಟು ಜೀವನಶೈಲಿ ರೋಗಗಳು ನಿಸರ್ಗೋಪಚಾರದಿಂದ ನಿವಾರಣೆ: ಡಾ | ಬಿ.ಎಂ ಹೆಗ್ಡೆ

Upayuktha