ಮಂಗಳೂರು: ವಿನೂತನ ಮಾರುತಿ ಸುಜುಕಿ ಸ್ವಿಫ್ಟ್ 2021 ಅನ್ನು ಮಂಗಳೂರಿನ ಮಾಂಡೋವಿ ಮೋಟರ್ಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಮಾರುತಿ ಸುಜುಕಿ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕರಾದ ವಿಶಾಲ್ ಆಮ್ಲ ಬಿಡುಗಡೆ ಮಾಡಿದರು.
ಮಾಂಡೋವಿ ಮೋಟರ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾದ ಆರೂರ್ ಸಂಜಯ್ ರಾವ್, ಮಾರುತಿ ಸುಜುಕಿಯ ಏರಿಯಾ ಮ್ಯಾನೇಜರ್ ದೀಪಕ್ ಶರ್ಮಾ, ಟೆರಿಟರಿ ಮ್ಯಾನೇಜರ್ ಪಾರಸ್, ಸಿಜಿಎಂ ನೇರಂಕಿ ಪಾರ್ಶ್ವನಾಥ್ ಜೈನ್ ಮತ್ತು ಡಿಜಿಎಂ ಶಶಿಧರ್ ಟಿ ಕಾರಂತ್ ಮತ್ತು ಸೀನಿಯರ್ ಮ್ಯಾನೇಜರ್ ಕಿಶನ್ ಕೆ ಶೆಟ್ಟಿ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.
ವಿನೂತನ ಸ್ವಿಫ್ಟ್ನ 2021ನ 14 ವೈಶಿಷ್ಟ್ಯಗಳು:
* ತನ್ನ ಶ್ರೇಣಿಯಲ್ಲೇ ಅತ್ಯುತ್ತಮ ಇಂಧನ ಕ್ಷಮತೆ ಹೊಂದಿರುವ ಹೊಸ ತಲೆಮಾರಿನ ಕೆ ಸಿರೀಸ್ ಡ್ಯುಯಲ್ ಜೆಟ್ ಎಂಜಿನ್.
* ಬೋಲ್ಡ್ ಕ್ರೋಮ್ ಅಸೆಂಟ್ ಜತೆಗೆ ಸ್ಪೋರ್ಟಿ ಕ್ರಾಸ್ ಮೆಶ್ ಗ್ರಿಲ್
* ಡ್ಯುಯಲ್ ಟೋನ್ ಹೊರಭಾಗಗಳು
* ವರ್ಣಮಯ ಬಹು ಮಾಹಿತಿ ಪ್ರದರ್ಶಕ
* ಕೀ ಸಿಂಕ್ರನೈಸ್ ಮಾಡಲಾದ ಆಟೋ ಫೋಲ್ಡೆಬಲ್ ಓಆರ್ವಿಎಂಗಳು
* ಸ್ಟೀರಿಂಗ್ ರಿಟರ್ನಬಿಲಿಟಿ ಮೆಕ್ಯಾನಿಸಮ್
* ಸುಧಾರಿತ ಬ್ರೇಕಿಂಗ್ ಕ್ಷಮತೆ ಮತ್ತು ಬ್ರೇಕ್ ಬಾಳಿಕೆ
* ಸುಧಾರಿತ ಏರೋಡ್ರೋಮಿಕ್ ಕ್ಷಮತೆ
* ಡ್ಯುಯಲ್ ವಿವಿಟಿ
* ಐಡಲ್ ಸ್ಟಾರ್ಟ್ ಸ್ಟಾಪ್ ಫಂಕ್ಷನ್
* 17.78 ಸೆಂಮೀ ಟಚ್ಸ್ಕ್ರೀನ್ ಸ್ಮಾರ್ಟ್ ಪ್ಲೇ ಸ್ಟುಡಿಯೋ
* ಇಎಸ್ಪಿ ಮತ್ತು ಹಿಲ್ ಹೋಲ್ಡ್ ಫಂಕ್ಷನ್
* ಪರಿಷ್ಕೃತ ಇನ್ಸ್ಟ್ರುಮೆಂಟ್ ಪ್ಯಾನೆಲ್
ನೂತನ ಸ್ವಿಫ್ಟ್ ನೆಕ್ಟ್ ಜನರೇಶನ್ ಕೆ ಸಿರೀಸ್ ನ ಡ್ಯುಯಲ್ ಎಂಜಿನ್ 66 ಕಿಲೋವ್ಯಾಟ್ ಶಕ್ತಿಯನ್ನು ಉತ್ಪಾದಿಸುತ್ತಿದ್ದು, 113 ಎಂಎಂ ಟಾರ್ಕ್ ಮತ್ತು ತನ್ನ ಶ್ರೇಣಿಯಲ್ಲೇ ಅತ್ಯುತ್ತಮ ಮೈಲೇಜ್ -ಅಂದರೆ ಮ್ಯಾನ್ಯುಯಲ್ ಟ್ರಾನ್ಸ್ಮಿಷನ್ ಮೂಲಕ 23.2 kmpl ಹಾಗೂ ಆಟೋ ಗೇರ್ ಶಿಫ್ಟ್ ಮೂಲಕ 23.7 kmpl ಮೈಲೇಜ್ ನೀಡುತ್ತದೆ.
ಆಟೋಮೊಬೈಲ್ ಉದ್ಯಮದ ಗ್ರಾಹಕ ಸೇವೆಯಲ್ಲಿ ಮಾಂಡೋವಿ ಮೋಟರ್ಸ್ 36ನೇ ವರ್ಷಾಚರಣೆಯಲ್ಲಿದ್ದು, ಹಸಿರು ಮಂಗಳೂರಿನ ಉತ್ತೇಜನಕ್ಕಾಗಿ ಪರಿಸರ ಸ್ನೇಹಿ ಎಸ್-ಸಿಎನ್ಜಿ ಕಾರುಗಳನ್ನು ಉತ್ತೇಜಿಸಲು ಹೊಸ ಉಪಕ್ರಮಗಳನ್ನು ಕೈಗೊಳ್ಳಲಿದೆ. ಹೆಚ್ಚಿನ ವಿವರಗಳಿಗಾಗಿ ಮಾಂಡೋವಿ ಮೋಟರ್ಸ್ ಶೋರೂಂ ಗೆ ಭೇಟಿ ನೀಡಿ ಅಥವಾ 9972072084 ಗೆ ಕರೆ ಮಾಡಬಹುದು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಉಪಯುಕ್ತ ನ್ಯೂಸ್ ಸಿಗ್ನಲ್ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್ ಬಳಸಿ