ದೇಶ-ವಿದೇಶ ಪ್ರಮುಖ

ಮೇ 3ರ ವರೆಗೆ ಎಲ್ಲ ಪ್ರಯಾಣಿಕ ರೈಲುಗಳ ಸಂಚಾರ ಪೂರ್ಣ ರದ್ದು

ಹೊಸದಿಲ್ಲಿ: ಕೊರೊನಾ ಮಹಾಮಾರಿಯ ವಿರುದ್ಧ ಎರಡನೇ ಹಂತದ ಸಮರ ಘೋಷಿಸಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲ ಪ್ರಯಾಣಿಕ ರೈಲುಗಳ ಸಂಚಾರವನ್ನು ಮೇ 3ರ ವರೆಗೆ ರದ್ದುಪಡಿಸಲಾಗಿದೆ.

ಪ್ರಯಾಣಿಕರ ದಟ್ಟಣೆ ನಿವಾರಿಸಲು ಯಾವುದೇ ವಿಶೇಷ ರೈಲು ಓಡಿಸುವ ಯೋಜನೆಯಿಲ್ಲ ಎಂದು ರೈಲ್ವೇ ಇಲಾಖೆ ಸ್ಪಷ್ಟಪಡಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ರೈಲ್ವೆ ಸಚಿವಾಲಯ, ಎಲ್ಲ ರೈಲುಗಳ ಸಂಚಾರವನ್ನೂ ರದ್ದುಪಡಿಸಲಾಗಿದೆ; ಈ ವಿಷಯದಲ್ಲಿ ಯಾವುದೇ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ತಿಳಿಸಿದೆ.

ಕೆಲವು ಪ್ರಾದೇಶಿಕ ಟಿವಿ ಚಾನೆಲ್‌ಗಳು, ಮುಂಬಯಿನಿಂದ ಪ್ರಯಾಣಿಕರ ದಟ್ಟಣೆ ನಿವಾರಿಸಲು ಇಲಾಖೆ ವಿಶೇಷ ರೈಲುಗಳನ್ನು ಓಡಿಸಲಿದೆ ಎಂದು ವರದಿ ಮಾಡಿದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ.

 

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಎಡನೀರು ಶ್ರೀಗಳ ಅಂತ್ಯಕ್ರಿಯೆ ಸಂಪನ್ನ: ವೃಂದಾವನಸ್ಥರಾದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ

Upayuktha

ಮುಂಬೈ : ನಟಿ ಅಭಿಲಾಶಾ ಪಾಟೀಲ್ ನಿಧನ

Harshitha Harish

ಕಾಶ್ಮೀರ ವಿಚಾರದಲ್ಲಿ ಸೋಲೊಪ್ಪಿಕೊಂಡ ಪಾಕ್: ಮೋದಿ ಇರುವ ವರೆಗೂ ನಾವೇನೂ ಮಾಡಲಾಗದು ಎಂದ ಇಮ್ರಾನ್ ಖಾನ್

Upayuktha