ರಾಜ್ಯ ವ್ಯಾಪಾರ- ವ್ಯವಹಾರ

ಪವರ್ ಆಫ್ ಅಟಾರ್ನಿ ದುರ್ಬಳಕೆ, ನಕಲಿ ಸೃಷ್ಟಿಸಿ ಕಂಪನಿ ಅಧಿಕಾರಿಗಳಿಂದ ವಂಚನೆ: ಉದ್ಯಮಿ ಬಿ.ಆರ್‌. ಶೆಟ್ಟಿ ಸ್ಪಷ್ಟನೆ

ಮಂಗಳೂರು: ಕರಾವಳಿ ಮೂಲದ ದುಬೈನ ಖ್ಯಾತ ಉದ್ಯಮಿ ಬಿ.ಆರ್‌ ಶೆಟ್ಟಿ ಅವರು ತಮ್ಮ ಮಾಲೀಕತ್ವದ ಎನ್‌ಎಂಸಿ ಹೆಲ್ತ್‌ ಸಮೂಹ ಸಂಸ್ಥೆಗಳಲ್ಲಿ ವಂಚನೆಗಳು ನಡೆದಿವೆ ಎಂಬ ಆರೋಪಗಳ ಕುರಿತು ಸ್ವತಃ ಸ್ಪಷ್ಟನೆ ನೀಡಿದ್ದಾರೆ.

ಕಳೆದ ಕೆಲವು ವಾರಗಳಿಂದ ದುಬೈನ ಪ್ರತಿಷ್ಠಿತ ಎನ್‌ಎಂಸಿ ಸಮೂಹ ಸಂಸ್ಥೆಗಳಲ್ಲಿ ಕೋಟ್ಯಂತರ ದಿರ್‌ಹಂಗಳ ವಂಚನೆ ನಡೆದಿದೆ ಎಂದು ಆರೋಪಿಸಿ ಅಲ್ಲಿನ ಕೇಂದ್ರ ಬ್ಯಾಂಕ್‌ ಬಿ.ಆರ್‌ ಶೆಟ್ಟಿ ಮಾಲೀಕತ್ವದ ಕಂಪನಿಗಳ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಸ್ವತಃ ಸ್ಪಷ್ಟೀಕರಣ ನೀಡಿರುವ ಅವರು, ನಮ್ಮ ಕಂಪನಿಗಳಲ್ಲಿ ಕೆಲವು ಪ್ರಮಾದ ಮತ್ತು ವಂಚನೆಗಳು ನಡೆದಿರುವುದು ನಿಜ. ನನ್ನ ಖಾಸಗಿ ಕಂಪನಿಗಳಲ್ಲಿ ವೈಯಕ್ತಿಕವಾಗಿ ನಾನೂ ಈ ವಂಚನೆಗಳಿಗೆ ಒಳಗಾಗಿದ್ದೇನೆ. ಕಂಪನಿಗಳ ಈಗಿನ ಮತ್ತು ಮಾಜಿ ಉನ್ನತಾಧಿಕಾರಿಗಳ ಒಂದು ಸಣ್ಣ ಗುಂಪಿನಿಂದ ಇವೆಲ್ಲ ನಡೆದಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಎನ್‌ಎಂಸಿ ಹೆಲ್ತ್‌, ಫಿನಾಬ್ಲರ್ ಪಿಎಲ್‌ಸಿಯಲ್ಲಿ ನಡೆದ ಅವ್ಯವಹಾರಗಳ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

‘ನನ್ನ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ಹಲವು ಮೋಸದ ವ್ಯವಹಾರಗಳನ್ನು ಮಾಡಲಾಗಿದೆ. ಅಲ್ಲದೆ ನಕಲಿ ಸಾಲ ಖಾತೆಗಳನ್ನೂ ಸೃಷ್ಟಿಸಲಾಗಿದೆ. ವೈಯಕ್ತಿಕ ಜಾಂಈನು, ಚೆಕ್‌ ಮತ್ತು ಬ್ಯಾಂಕ್‌ ಹಣ ವರ್ಗಾವಣೆಯನ್ನು ನನ್ನ ಹೆಸರಿನಲ್ಲಿ ನಡೆಸಲಾಗಿದೆ. ಇದೆಲ್ಲದಕ್ಕೂ ನನ್ನ ಸಹಿಯನ್ನು ನಕಲು ಮಾಡಲಾಗಿದೆ’ ಎಂದು ಅವರು ದೂರಿದ್ದಾರೆ.

‘ನಾನು ಕೊಟ್ಟಿರುವ ಪವರ್ ಆಫ್ ಅಟಾರ್ನಿಯನ್ನು ದುರುಪಯೋಗ ಮಾಡಿಕೊಂಡು ಮತ್ತೊಂದು ಪವರ್ ಆಫ್‌ ಅಟಾರ್ನಿಯನ್ನು ನಕಲಿಯಾಗಿ ಸೃಷ್ಟಿಸಲಾಗಿದೆ. ಅದನ್ನು ಬಳಸಿ ಕೆಲವು ಕಂಪನಿಗಳನ್ನು ನನ್ನ ಹೆಸರಿನಲ್ಲೇ ಆರಂಭಿಸಿರುವುದೂ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದು ಬಿ.ಆರ್ ಶೆಟ್ಟಿ ತಿಳಿಸಿದ್ದಾರೆ.

‘ನನ್ನ ಆಡಳಿತ ಮಂದಳಿಯ ಸದಸ್ಯರ ಹೂಡಿಕೆ ಬಗ್ಗೆ ಸುಳ್ಳು ಹಾಗೂ ತಪ್ಪುದಾರಿಗೆಳೆಯುವಂತಹ ಹಣಕಾಸು ಮಾಹಿತಿ ಮತ್ತು ಹೇಳಿಕೆಗಳನ್ನು ನೀಡಲಾಗಿದೆ. ನನ್ನ ಖಾಸಗಿ ಕಂಪನಿಗಳನ್ನು ಹಾಗೂ ವೈಯಕ್ತಿಕ ಖಾತೆಗಳನ್ನು ಬಳಸಿಕೊಂಡು ವೆಚ್ಚವನ್ನು ಪಾವತಿಸಲಾಗಿದೆ. ಜತೆಗೆ ಪಬ್ಲಿಕ್ ಕಂಪನಿಗಳ ನೈಜ ಲೆಕ್ಕಾಚಾರವನ್ನು ಮುಚ್ಚಿಡಲಾಗಿದೆ ಎಂಬುದು ನನ್ನ ಸಂದೇಹ’ ಎಂದು ಶೆಟ್ಟಿ ವಿವರಿಸಿದ್ದಾರೆ.

‘ಯುಎಇ ಮತ್ತು ಬ್ರಿಟನ್‌ನ ಎಲ್ಲ ಸಂಬಂಧಿತ ಅಧಿಕಾರಿಗಳ ತನಿಖೆಗೆ ಸಂಪೂರ್ಣ ಸಹಕರಿಸಲಿದ್ದೇನೆ. ಎಲ್ಲ ಹಕ್ಕುದಾರರಿಗೆ ವಾಸ್ತವಿಕ ಮಾಹಿತಿಯನ್ನು ಸಮಗ್ರವಾಗಿ ಅರ್ಥ ಮಾಡಿಸುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳುತ್ತೇನೆ’ ಎಂದು ಬಿ.ಆರ್. ಶೆಟ್ಟಿ ತಿಳಿಸಿದ್ದಾರೆ.

ನನ್ನ ಗೌರವಕ್ಕೆ ಚ್ಯುತಿ ತಂದಿದ್ದಾರೆ:
ಕಾನೂನನ್ಉ ಗೌರವಿಸಿ ಯುಎಇ ಹಾಗೂ ಬ್ರಟಿನ್‌ ಅಧಿಕಾರಿಗಳ ತನಿಖೆಗೆ ಸಹಕರಿಸುವ ದೃಷ್ಟಿಯಿಂದ ಈ ವರೆಗೆ ಯಾವುದೇ ಹೇಳಿಕೆ ನೀಡಿರಲಿಲ್ಲ. ಇದೇ ನನಗೆ ದುಬಾರಿಯಾಗಿ ಪರಿಣಮಿಸಿತು. ನನ್ನ ಗೌರಕ್ಕೆ ಚ್ಯುತಿ ತರಲಾಗಿದೆ. ಇದೀಗ ಶಾಸನಾತ್ಮಕ ಹಾಗೂ ವಿಧಿವಿಜ್ಞಾನ ತನಿಖೆಗಳಿಂದ ಆರಂಭಿಕ ಫಲಿತಾಂಶಗಳು ದೊರೆತಿದ್ದು, ನನ್ನ ವಿರುದ್ಧ ತಪ್ಪುದಾರಿಗೆಳೆಯುವ ಹಾಗೂ ಸಮರ್ಪಕವಲ್ಲದ ಆರೋಪಗಳ ಬಗ್ಗೆ ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ಬಿ.ಆರ್ ಶೆಟ್ಟಿ ತಿಳಿಸಿದ್ದಾರೆ.

ವಂಚಕರ ವಿರುದ್ಧ ಕಾನೂನು ಕ್ರಮ:
ನನ್ನ ವ್ಯವಹಾರ ಮತ್ತು ಸ್ವತಃ ನನಗೆ ವಂಚಿಸಿದ ಎಲ್ಲರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಾನು ಹಾಗೂ ನನ್ನ ಕುಟುಂಬ ಯುಎಇ ಮತ್ತು ಇತರ ಕಡೆಗಳಲ್ಲಿ ಆರಂಭಿಸಿರುವ ವ್ಯವಹಾರಗಳು ಕಠಿಣ ಪರಿಶ್ರಮ, ಬದ್ಧತೆ, ಸಭ್ಯತೆ ಮತ್ತು ವಿಶ್ವಾಸಾರ್ಹತೆಯ ಬುನಾದಿ ಹೊಂದಿವೆ ಎಂದು ಶೆಟ್ಟರು ತಿಳಿಸಿದ್ದಾರೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಕೊರೊನಾ ಅಪ್‌ಡೇಟ್: ರಾಜ್ಯದಲ್ಲಿ ಸತತ ಎರಡನೇ ದಿನ ನಾಲ್ಕೂವರೆ ಶತಕ ಸಮೀಪಿದ ಸೋಂಕಿತರ ಸಂಖ್ಯೆ

Upayuktha

ಆ. 5ರಂದು ರಾಜ್ಯದ ಎಲ್ಲ ದೇವಳಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ: ಸಚಿವ ಕೋಟ

Upayuktha

ಎಚ್. ಡಿ. ರೇವಣ್ಣರಿಗೆ ಕೋವಿಡ್ ಪಾಸಿಟಿವ್

Harshitha Harish

Leave a Comment