ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಆಳ್ವಾಸ್ ಸಂಗೀತ ತಂಡದ ಲಾಕ್‍ಡೌನ್ ‘ಲಹರಿ’

ಮೂಡುಬಿದಿರೆ: ಲಾಕ್‍ಡೌನ್ ಅನೇಕ ಯುವ ಪ್ರತಿಭೆಗಳನ್ನು ಹೊಸ ಪ್ರಯತ್ನಕ್ಕೆ ಪ್ರೇರೇಪಿಸುವತ್ತ ಸಫಲವಾಗಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಎಂದರೆ ಲಾಕ್‍ಡೌನ್ ಲಹರಿ. ಕೆಲವು ದಿನಗಳ ಹಿಂದೆ ಆಳ್ವಾಸ್‍ನ ಭರತನಾಟ್ಯ ವಿದ್ಯಾರ್ಥಿಗಳು ನೃತ್ಯಂಟೈನ್ ಎಂಬ ನೃತ್ಯ ರೂಪವನ್ನು ತಾವು ಇದ್ದ ಸ್ಥಳಗಳಿಂದಲೇ ವಿಡಿಯೋ ಮಾಡಿ ಜನರನ್ನು ರಂಜಿಸಿದ್ದರು.

ನೃತ್ಯಂಟೈನ್‍ನಿಂದ ಸ್ಪೂರ್ತಿ ಪಡೆದ ಆಳ್ವಾಸ್ ಧೀಂಕಿಟ ಯಕ್ಷಗಾನ ತಂಡ ಯಕ್ಷಂಟೈನ್‍ನ ಪರದೆಯ ಮೇಲೆ ರಂಜಿಸಿತ್ತು. ಇವೆರಡರಿಂದ ಸ್ಪೂರ್ತಿ ಪಡೆದ ಆಳ್ವಾಸ್ ಸಂಗೀತ ತಂಡವು 5.19 ನಿಮಿಷದ ‘ಲಾಕ್‍ಡೌನ್ ಲಹರಿ’ ವಿಡಿಯೋವನ್ನು ಬಿಡುಗಡೆಗೊಳಿಸಿದೆ.

ಲಾಕ್‍ಡೌನ್ ಲಹರಿಯು ಕೃಷúರಾಜ್ ಭಟ್ ಸಾಹಿತ್ಯದಲ್ಲಿ, ಪ್ರವೀಣ್ ಡಿ ರಾವ್ ರವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡನ್ನು ಮಯುರ್ ಅಂಬೆಕಲ್ಲು ಅವರ ನೇತೃತ್ವದಲ್ಲಿ ವಿಡಿಯೋ ರೂಪ ತಾಳಿದೆ.

ವರ್ಷಾ ಆಚಾರ್ಯ, ಮಯೂರ್ ಅಂಬೆಕಲ್ಲು, ಪವಿತ್ರ ಆಚಾರ್ಯ, ಸೌರವ್ ಪಾಪ್ತಿ, ಅನುಷ ಜಿ ಆಚಾರ್ಯ, ಮಾನಸ ಹೆಗ್ಡೆ, ಶ್ವೇತ ಎಸ್, ಭುಮಿಕಾ ನಾಯಕ್, ಮಧುಶ್ರಿ, ಮನೋಜ್, ನಿಕಿಲ್ ಪೈ, ಶೃತಿ ಪ್ರಭು ಸೇರಿ ಒಟ್ಟು ಹನ್ನೆರಡು ಜನ ಭಾಗವಹಿಸಿದ್ದಾರೆ. ಸುಪ್ರೀತ್ ಬಿಕೆ ವಿಡಿಯೋ ಎಡಿಟಿಂಗ್ ಮಾಡುವಲ್ಲಿ ಸಹಕರಿಸಿದ್ದಾರೆ.

****
ನೃತ್ಯ ಪ್ರಕಾರಗಳಿಗೆ ಹೋಲಿಸಿದರೆ ಸಂಗೀತವನ್ನು ಒಂದೇ ಪರದೆಯಲ್ಲಿ ತರುವುದು ತುಂಬಾ ಚಾಲೆಂಜಿಂಗ್ ಕೆಲಸ. ಆದರೂ ನಮ್ಮ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಲಾಕ್‍ಡೌನ್ ಸಮಯದಲ್ಲಿ ಇಂತಹ ವಿಡಿಯೋ ಮಾಡುವ ಮೂಲಕ ಹೇರಳ ಅನುಭವ ಲಭಿಸಿತು ಎನ್ನುತ್ತಾರೆ ವಿಡಿಯೋದ ಹಿಂದಿನ ರೂವಾರಿ ಮಯೂರ್ ಅಂಬೆಕಲ್ಲು.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಟೆಲಿಗ್ರಾಂ ಬ್ರಾಡ್‌ಕಾಸ್ಟ್‌ ಮೂಲಕ ಉಪಯುಕ್ತ ನ್ಯೂಸ್‌ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ.

Related posts

ವಿಟ್ಲ: ವಿಕಲಚೇತನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

Upayuktha News Network

ಪ್ರಣಬ್ ಮುಖರ್ಜಿ ನಿಧನಕ್ಕೆ ಡಾ. ಡಿ ವೀರೇಂದ್ರ ಹೆಗ್ಗಡೆ ಸಂತಾಪ

Upayuktha

ಬಡತನ ನಿರ್ಮೂಲನೆಗೆ ಜಾಗೃತಿ, ಸಶಕ್ತೀಕರಣವೇ ಮಾರ್ಗ: ಡಾ. ರಾಧಾಕೃಷ್ಣ .ಕೆ

Upayuktha