ಇತರ ಕ್ರೀಡೆಗಳು ರಾಜ್ಯ

ರಾಜ್ಯ ಜ್ಯೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಮುನ್ನಡೆ ಸಾಧಿಸಿದ ಆಳ್ವಾಸ್

ಮೂಡುಬಿದಿರೆ: ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ 36ನೇ ರಾಜ್ಯ ಜ್ಯೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ 2020-21 ನಡೆಯುತ್ತಿದ್ದು, ಎರಡನೇ ದಿನವೂ ಅಥ್ಲೀಟ್‌ಗಳು ವಿಶೇಷ ಸಾಧನೆ ಮೆರೆದಿದ್ದಾರೆ.

ಎರಡನೇ ದಿನ ವಿವಿಧ ಕೂಟ ದಾಖಲೆಗಳಿಗೆ ಮೂಡುಬಿದಿರೆಯ ಸ್ವರಾಜ್ ಮೈದಾನ ಸಾಕ್ಷಿಯಾಗಿದೆ. 16 ವರ್ಷದ ಒಳಗಿನ ಬಾಲಕರ ಶಾಟ್ ಪುಟ್ ವಿಭಾಗದಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಗಣೇಶ್ ಎಚ್ ಒಡೆಯರ್ 15.68 ಮೀ., 18 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಬಿ.ಎಂ. ಮರ್ಯ ಗಣಪತಿ 17.81 ಮೀ ದೂರ ಗುಂಡು ಎಸೆದು ದಾಖಲೆ ನಿರ್ಮಿಸಿದ್ದಾರೆ.

20 ವರ್ಷದ ಒಳಗಿನ ಪುರುಷರ ಡಿಸ್ಕಸ್ ಥ್ರೋ ವಿಭಾಗದಲ್ಲಿ ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಮೋಹಿತ್ ಎನ್ ರಾಜ್ 48.06 ಮೀ. ದೂರ ಚಕ್ರ ಎಸೆದು ದಾಖಲೆ ನಿರ್ಮಿಸಿದ್ದಾರೆ. 20 ವರ್ಷದೊಳಗಿನ ಮಹಿಳೆಯರ ಹೈಜಂಪ್ ವಿಭಾಗದಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಎಸ್.ಬಿ.ಸುಪ್ರಿಯಾ 1.75 ಮೀ. ಎತ್ತರ ಜಿಗಿದು ಸಾಧನೆ ಮಾಡಿದ್ದಾರೆ. 18 ವರ್ಷದೊಳಗಿನ ಬಾಲಕಿಯರ ವಿಭಾಗದ ಹ್ಯಾಮರ್ ಥ್ರೋನಲ್ಲಿ ಬಳ್ಳಾರಿಯ ಕೀರ್ತಿ 46.57 ಮೀ. ದೂರ ಹ್ಯಾಮರ್ ಎಸೆದು ಹೊಸ ಕೂಟ ದಾಖಲೆ ನಿರ್ಮಿಸಿದ್ದಾರೆ.

ಎರಡನೇ ದಿನ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ 16 ಚಿನ್ನ, 12 ಬೆಳ್ಳಿ, 18 ಕಂಚಿನ ಪದಕಗಳನ್ನು ಗಳಿಸಿ 231 ಅಂಕಗಳೊಂದಿಗೆ ಮುನ್ನಡೆ ಸಾಧಿಸಿದೆ. ಉಡುಪಿ ಜಿಲ್ಲೆಯು 74 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

14 ವರ್ಷದೊಳಗಿನ ವಿಭಾಗ:
ಬಾಲಕಿಯರ ವಿಭಾಗದ 600 ಮೀ. ಓಟದಲ್ಲಿ ಅರ್ನಿಕಾ ವರ್ಷ (1:45.1.), ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ರೀತುಶ್ರೀ (1:45.3), ಬೆಳಗಾವಿಯ ಸ್ವರಾ ಶಿಂಧೆ (1:49.0), ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಹರ್ಷಿತಾಶ್ರೀ (1.49.6), ಚಿಕ್ಕಮಗಳೂರಿನ ಮೌಲ್ಯ (1:56.9), ಬೆಳಗಾವಿಯ ಸಂಚಿತಾ ಪಾಟೀಲ್ (1:57.0)

ಬಾಲಕರ ವಿಭಾಗದ 600 ಮೀ. ಓಟದಲ್ಲಿ ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ ಅಸೋಸಿಯೇಶನ್‌ನ ಪುಷ್ಯ ಎ.ಪಿ. (1:29.3), ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಶಿವಾನಂದ್ ಕೆ.ಪೂಜಾರಿ (1:29.4), ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಸುನಿಲ್ ನಾಯ್ಕೋಡಿ (1:33.6), ಧಾರವಾಡದ ಸೈಯದ್ ಸಬೀರ್ (1:35.7), ಬೆಂಗಳೂರು ಗ್ರಾಮಾಂತರ ಸ್ಪೋರ್ಟ್ಸ್ ಕ್ಲಬ್‌ನ ನಿತಿನ್ ಗೌಡ (1:37.1), ಉಡುಪಿಯ ತನೀಶ್ ವಿಎಚ್ (1:41.7)

16 ವರ್ಷದೊಳಗಿನ ವಿಭಾಗ:
ಬಾಲಕಿಯರ ವಿಭಾಗದ 2000 ಮೀ. ಓಟದಲ್ಲಿ ಬೆಂಗಳೂರು ಸ್ಪೋರ್ಟ್ಸ್‌ ಕ್ಲಬ್‌ನ ಶರಣ್ಯ ವಿಜಯರಾಘವನ್ (7:18.0), ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ರೂಪಶ್ರೀ ಎನ್.ಎಸ್. (7:21.1), ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ಸ್ಪಂದನಾ ಪಿ.ಎಸ್. (7:23.7), ನಿಟ್ಟೆ ಸ್ಪೋರ್ಟ್ಸ್‌ ಕ್ಲಬ್‌ನ ನಂದಿನಿ ಜಿ. (7:36.0), ಚಿಕ್ಕಮಗಳೂರಿನ ಅಮೃತಾ ಟಿಟಿ (7:48.9), ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ಶಾಂಭವಿ ಎನ್.ಬಿ (7:54.2)

ಬಾಲಕರ ವಿಭಾಗದ 2000 ಮೀ. ಓಟದಲ್ಲಿ ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ಸ್ ಸ್ಪೋರ್ಟ್ಸ್ ಅಸೋಸಿಯೇಶನ್‌ನ ವೇದವರುಣ್ ಎಸ್. (6:22.4), ಶಿವಮೊಗ್ಗದ ನಿತೀಶ್‌ ಕುಮಾರ್ ಎಂ. (6:28.3), ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ಪರಶುರಾಮ್ ಉಪ್ಪಾರ (6:28.3), ಧಾರವಾಡದ ಚೇತನ್ಚಂದ್ರ ಪೂಜಾರಿ (6:49.3), ಕೋಲಾರದ ವಿನೋದ್‌ ಕುಮಾರ್ (6:51.8), ಬೆಂಗಳೂರಿನ ಜೇಸು ಅಥ್ಲೆಟಿಕ್‌ನ ನಿಖಿಲ್ ಸಿ. (6:52.6)

ಬಾಲಕರ ವಿಭಾಗದ ಶಾಟ್‌ಪುಟ್‌ನಲ್ಲಿ ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ಗಣೇಶ್ ಎಚ್ ಒಡೆಯರ್ (15.68 ಮೀ.), ದಕ್ಷಿಣ ಕನ್ನಡದ ಪ್ರಥಮ್ ಬಂಗೇರ (14.54 ಮೀ.), ಉಡುಪಿಯ ಸುಶಾಂತ್ ಎ. (13.61ಮೀ.), ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ರಿತೇಶ್ ಕೆ. (12.98 ಮೀ.) ಉಡುಪಿಯ ಆರ್ಯ (12.58 ಮೀ), ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ಸೌರಭ್ ಎಸ್. ಪಾಟೀಲ್ (12.47 ಮೀ.)

18 ವರ್ಷದೊಳಗಿನ ವಿಭಾಗ
ಬಾಲಕರ ವಿಭಾಗದ ಹ್ಯಾಮರ್ ಥ್ರೋನಲ್ಲಿ ಕೊಪ್ಪಳದ ಸಚಿನ್ (54.49 ಮೀ), ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ಪರಶುರಾಮ್ ಎಂ. (50.60 ಮೀ), ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ಸಾಗರ್‌ದೀಪ್ ದೊಡ್ಡಮನಿ (47.58 ಮೀ). ಉಡುಪಿಯ ಧೀರಜ್ (46.66 ಮೀ.), ಬೆಂಗಳೂರಿನ ಡೈಸ್ ಸ್ಪೋರ್ಟ್ಸ್ ಹಾಸ್ಟೆಲ್‌ನ ಉಮೇಶ್ (45.30ಮೀ), ಉಡುಪಿಯ ಪ್ರಜ್ವಲ್ ಎಸ್. ಸನಿಲ್ (36.96 ಮೀ.)

ಬಾಲಕರ ವಿಭಾಗದ 1500ಮೀ. ಓಟದಲ್ಲಿ ಬೆಳಗಾವಿಯ ತುಷಾರ್ ಭೇಕಣೆ (4:12.2), ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಭರತ್ ಎನ್. (4:16.7), ತುಮಕೂರಿನ ದರ್ಶನ್ ಎನ್. (4:17.4), ಧಾರವಾಡದ ಆನಂದ್ ಕೌಲಗೇರಿ (4:24.5), ಪಾಂಡವಪುರ ಅಥ್ಲೆಟಿಕ್ ಅಸೋಸಿಯೇಶನ್‌ನ ಚಿರಂಜೀವಿ ಗೌಡ (4:31.0), ಬೆಂಗಳೂರಿನ ಡೈಸ್ ಸ್ಪೋರ್ಟ್ಸ್ ಹಾಸ್ಟೆಲ್‌ನ ಮುತ್ತಣ್ಣ (4:40.2)

ಬಾಲಕಿಯರ ವಿಭಾಗದ 1500 ಮೀ. ಓಟದಲ್ಲಿ ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ರೇಖಾ ಫಿರೋಜಿ (5:3.7), ಬೆಂಗಳೂರಿನ ಜೇಸು ಅಥ್ಲೆಟಿಕ್ಸ್‌ನ ಪ್ರಿಯಾಂಕಾ ಸಿ. (5:05.1), ನಿಟ್ಟೆ ಸ್ಪೋರ್ಟ್ಸ್‌ ಕ್ಲಬ್‌ನ ಪ್ರತೀಕ್ಷಾ (5:37.5), ಬಾಗಲಕೋಟೆಯ ಕೇತನಾ (5:57.8), ಧಾರವಾಡದ ಅಂಜನಾ ಶೆಣೈ (6:07.1), ಹಾಸನದ ಕಾಶಿಫಸೋನಿಯಾ ಖಾನುಮ್ (6:19.0)
ಬಾಲಕಿಯರ ವಿಭಾಗದ 5000 ಮೀ. ಓಟದಲ್ಲಿ ಜೇಸು ಅಥ್ಲೆಟಿಕ್ಸ್ ಬೆಂಗಳೂರಿನ ಗೌತಮಿ ಪಿ. (31:55.7), ಬೆಳಗಾವಿಯ ಟೀನಾ ವಾಂಖಡೆ (33:29.8), ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ಮೇರಿ ಪ್ರಿಯಾ (45:46.5)

ಬಾಲಕರ ವಿಭಾಗದ 10 ಕಿಮೀ ನಡಿಗೆಯಲ್ಲಿ ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ಸಂಜು ಕೇಂದ್ರಿ (55:21.7), ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ ಅಸೋಸಿಯೇಶನ್‌ನ ಸುಶಾಂತ್ (1:11.4), ಚಿಕ್ಕಬಳ್ಳಾಪುರದ ಗಗನ್ (1:11.5)
ಬಾಲಕಿಯರ ವಿಭಾಗದ 100ಮೀ. ಹರ್ಡಲ್ಸ್‌ನಲ್ಲಿ ದಕ್ಷಿಣ ಕನ್ನಡದ ರಿತಿಕಾ (16.7ಸೆ.), ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ದೀಕ್ಷಿತಾ ಗೌಡ (16.9ಸೆ.), ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ಎಂ.ಎಸ್. ಚೈತನ್ಯ (17.6ಸೆ.), ಬೆಂಗಳೂರು ಸ್ಪೋರ್ಟ್ಸ್ ಕ್ಲಬ್‌ನ ತಾರಾ ಪರಮಾರ್ (18.4ಸೆ.), ಬೆಳಗಾವಿಯ ವೈಷ್ಣವಿ ಬದ್ರುಕ್ (18.8ಸೆ.), ಶಿವಮೊಗ್ಗದ ದೀಪಾ ಎಸ್ .(19.9ಸೆ.)
ಬಾಲಕರ ವಿಭಾಗದ ಶಾಟ್ಪುಟ್‌ನಲ್ಲಿ ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ ಅಸೋಸಿಯೇಶನ್‌ನ ಬಿ.ಎಂ.ಮರ್ಯ ಗಣಪತಿ (17.81 ಮೀ), ದಕ್ಷಿಣ ಕನ್ನಡದ ಅಭಿನಂದನ್ ನಾಯಕ್ (14.55ಮೀ.), ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ರವಿ ಹೆಬ್ಬಾಳ್ (13.36ಮೀ.), ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ನ ಶಿವನಂದನ್ ಖಾಡ್ಗಿ (12.73ಮೀ.), ಉಡುಪಿಯ ಸಜ್ಜನ್ (12.41ಮೀ.)

ಬಾಲಕಿಯರ ವಿಭಾಗದ 3000ಮೀ. ಓಟದಲ್ಲಿ ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಪ್ರಿಯಾಂಕಾ ಗೋಪಿ (11:48.7), ಬೆಳಗಾವಿಯ ಶುಭಾಂಗಿ (12:03.4), ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಅಂಜಲಿ (12:04.0), ಹಾಸನದ ಕಾಶಿಫಸೋನಿಯಾ ಖಾನುಮ್ (13:19.0), ಆರ್‌ಎಂವಿ ಅಥ್ಲೆಟಿಕ್ ಕ್ಲಬ್‌ನ ಸಾತ್ವಿ ಧೀರಜ್ (13:49.1), ಧಾರವಾಡದ ಶ್ರುತಿ ಸವಣೂರು (14:05.3)
ಬಾಲಕಿಯರ ವಿಭಾಗದ ಪೋಲ್ವಾಲ್ಟ್‌ನಲ್ಲಿ ಸಾಯ್ ಬೆಂಗಳೂರಿನ ವಿಭಾ ಶ್ರೀನಿವಾಸ್ (2.70 ಮೀ.), ಬೆಂಗಳೂರು ನಗರದ ಅನನ್ಯ ಗೌಡ (2.60ಮೀ.), ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ರಂಜಿತಾ ಎಸ್. (2.30ಮೀ.)

20 ವರ್ಷದೊಳಗಿನ ವಿಭಾಗ:
ಬಾಲಕಿಯರ ವಿಭಾಗದ ಪೋಲ್ವಾಲ್ಟ್ಸ್‌ನಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಪ್ರೀತಿ (2.60 ಮೀ.), ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಭವಿತಾ ಶೆಟ್ಟಿ (2.50ಮೀ.)
ಬಾಲಕರ ವಿಭಾಗದ 1500 ಮೀ. ಓಟದಲ್ಲಿ ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಸತೀಶ್ ಎಚ್.ಎಂ .(4:07.1), ಧಾರವಾಡದ ಮಣಿಕಂಠ (4:16.1), ಬಾಗಲಕೋಟೆಯ ಸಂಗಮೇಶ್ ಎ. ಮಾಲಿ (4:16.9), ಹಾವೇರಿಯ ಚೇತನ್‌ಕುಮಾರ್ ನಾಯಕ್ (4:17.4), ಬೆಂಗಳೂರಿನ ಡೈಸ್ ಸ್ಪೋರ್ಟ್ಸ್ ಹಾಸ್ಟೆಲ್‌ನ ಸನ್ಮೇಶ್ ಕುರಿ (4:23.0), ಬೆಂಗಳೂರಿನ ಅರ್ಜುನ್ ಟ್ರ್ಯಾಕ್ ಆ್ಯಂಡ್ ಫೀಲ್ಡ್ಸ್‌ನ ಅಶುತೋಶ್ (4:24.9)

ಬಾಲಕಿಯರ ವಿಭಾಗದ 1500 ಮೀ. ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಓಟದಲ್ಲಿ ಚೈತ್ರಾ ಪಿ. (5:03.7), ಬೆಳಗಾವಿಯ ಶ್ರುತಿ ಗೋಜೆಕಾರ್ (5:03.8), ಸಾಯ್ ಬೆಂಗಳೂರಿನ ರಾಶಿ ಸಿ.ಎಂ. (5:18.7), ಧಾರವಾಡದ ಶ್ವೇತಾ ಎ.ಎ. (5:55.1), ಹಾಸನದ ಸಂಧ್ಯಾ ಕೆ.ಆರ್. (6:45.0)

ಬಾಲಕಿಯರ ವಿಭಾಗದ 100 ಮೀ. ಬೆಂಗಳೂರು ನಗರದ ಹರ್ಡಲ್ಸ್‌ನಲ್ಲಿ ಇವ್ಯಾಂಜೆಲಿನ್ ಭುವನ್ (15.7 ಸೆ.), ಕ್ಯಾಪ್ಟನ್ಸ್ ಟ್ರ್ಯಾಕ್ ಆ್ಯಂಡ್ ಫೀಲ್ಡ್ಸ್‌ನ ಚೈತ್ರಾ ದಾಸ್ ಕೆಕೆ (16.1ಸೆ.), ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಸಿಂಧು ಆರ್ (16.3ಸೆ.), ಇಂಡಿಯನ್ ಅಥ್ಲೆಟಿಕ್ ಅಕಾಡೆಮಿಯ ಮಹಾಲಕ್ಷ್ಮಿ ಎಂ (17.4ಸೆ), ಬೆಳಗಾವಿಯ ಪಲ್ಲವಿ ಧಾಮ್ನೆಕರ್ (17.9ಸೆ.)

ಬಾಲಕರ ವಿಭಾಗದ 110 ಮೀ. ಹರ್ಡಲ್ಸ್‌ನಲ್ಲಿ ದಕ್ಷಿಣ ಕನ್ನಡದ ಅದ್ವಿತ್ ಶೆಟ್ಟಿ (14.4ಸೆ), ಉಡುಪಿಯ ಸುಶಾಂತ್ (14.6ಸೆ.), ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ದಿಶಾಂತ್ ನಾಯಕ್ (14.6 ಸೆ.), ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ವರುಣ್ ವೈ. ಭಂಡಾರಿ (15.9ಸೆ.), ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ ಅಸೋಸಿಯೇಶನ್‌ನ ಶಾರೋನ್ ಪೀಟರ್ ಬಿ. (16.1ಸೆ.), ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ನಿಶಾಂತ್ ಬಿ.ಎಂ (16..2 ಸೆ.),

ಬಾಲಕಿಯರ ವಿಭಾಗದ ಟ್ರಿಪಲ್ ಜಂಪ್‌ನಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಅಂಕಿತಾ ಎಂಎಸ್. (11.68ಮೀ.), ಕ್ಯಾಪ್ಟನ್ಸ್ ಟ್ರ್ಯಾಕ್ ಆ್ಯಂಡ್ ಫೀಲ್ಡ್ ರೋಹಿತಾ ಚೌಧರಿ ಪಿ. (11.40ಮೀ), ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಪಲ್ಲವಿ ಪಾಟೀಲ್ (10.71 ಮೀ.), ಇಂಡಿಯನ್ ಅಥ್ಲೆಟಿಕ್ ಅಕಾಡೆಮಿಯ ಮಹಾಲಕ್ಷ್ಮಿ ಎಂ. (10.68 ಮೀ.), ಎಸ್‌ಡಿಎಂ ಸ್ಪೋರ್ಟ್ಸ್‌ ಕ್ಲಬ್‌ನ ಜ್ಞಾನವಿ ಶೆಟ್ಟಿ (9.66 ಮೀ.)

ಬಾಲಕರ ವಿಭಾಗದ ಹೈಜಂಪ್‌ನಲ್ಲಿ ಶಿವಮೊಗ್ಗದ ಯಶಸ್ ಪಿ. (1.98 ಮೀ.), ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ ಅಸೋಸಿಯೇಶನ್‌ನ ರಾಥೋಡ್ ದಾಮು (1.90 ಮೀ.), ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ ಅಸೋಸಿಯೇಶನ್‌ನ ವರುಣ್ (1.90 ಮೀ.), ಬೆಂಗಳೂರಿನ ನ್ಯಾಶನಲ್ ಅಕಾಡೆಮಿಯ ಅಜಿತ್ ಎ. (1.85ಮೀ.), ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ ಅಸೋಸಿಯೇಶನ್‌ನ ಸಜನ್ ಜನಾರ್ದನ್ (1.80 ಮೀ.)

ಬಾಲಕರ ವಿಭಾಗದ ಹ್ಯಾಮರ್ ಥ್ರೋನಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಮುತ್ತಪ್ಪ (58.86 ಮೀ.), ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ರಾಹುಲ್ ಆರ್ ಟಿ (56.89 ಮೀ.), ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಸುದೀಪ್ ಎಸ್.ಎಂ. (53.10 ಮೀ.) ಬೆಂಗಳೂರಿನ ನೇಶನ್ಸ್ ಅಕಾಡೆಮಿಯ ಅರ್ಜುನ್ (47.98 ಮೀ.), ಉಡುಪಿಯ ವಿಶ್ವೇಶ ಆರ್ (38.60 ಮೀ.) ನಿಟ್ಟೆ ಸ್ಪೋರ್ಟ್ಸ್ ಕ್ಲಬ್‌ನ ಸುವಿನ್ ವಿ.ಕೆ (35.32 ಮೀ)

ಬಾಲಕರ ವಿಭಾಗದ ಡಿಸ್ಕಸ್ ಥ್ರೋನಲ್ಲಿ ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ಸ್ ಸ್ಪೋರ್ಟ್ಸ್ ಅಸೋಸಿಯೇಶನ್ ಮೋಹಿತ್ ಎನ್ ರಾಜ್ (48.06 ಮೀ.), ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ನಾಗೇಂದ್ರ ನಾಯಕ್ (47.41 ಮೀ.), ಉಡುಪಿಯ ಪ್ರಜ್ವಲ್ ಎಂ.ಶೆಟ್ಟಿ (43.17 ಮೀ.), ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ಸ್ ಸ್ಪೋರ್ಟ್ಸ್ ಅಸೋಸಿಯೇಶನ್ ಸಚಿತ್ ವೈ (43.01 ಮೀ.), ಉಡುಪಿಯ ಶಿಶಿರ್ ಶೆಟ್ಟಿ (34.80 ಮೀ.), ಚಿಕ್ಕಬಳ್ಳಾಪುರದ ಅಜಯ್‌ ಕುಮಾರ್ ಡಿ. (25.36 ಮೀ.)

ಬಾಲಕಿಯರ ವಿಭಾಗದ ಹೈಜಂಪ್‌ನಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಎಸ್.ಬಿ. ಸುಪ್ರಿಯಾ (1.75 ಮೀ.), ದಕ್ಷಿಣ ಕನ್ನಡದ ಫ್ಲರ್ವಿಶಾ (1.55 ಮೀ.), ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಪಲ್ಲವಿ ಪಾಟೀಲ್ (1.50 ಮೀ.)

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸಾಲು ಮರದ ತಿಮ್ಮಕ್ಕಗೆ ಗೌರವ ಡಾಕ್ಟರೇಟ್

Harshitha Harish

ಎಪ್ಪತ್ತರ ಸಂಭ್ರಮದಲ್ಲಿ ಸುಧಾಮೂರ್ತಿ

Harshitha Harish

ಮಾಜಿ ಸಿಎಂ ಸಿದ್ದರಾಮಯ್ಯಗೆ ಕೊರೋನಾ ಪಾಸಿಟಿವ್

Harshitha Harish