ನಗರ ಸ್ಥಳೀಯ

ಅಂಬಲಪಾಡಿ: ಗುರು ರಾಘವೇಂದ್ರ ಸನ್ನಿಧಿ ನವೀಕರಣಕ್ಕೆ ಶಿಲಾನ್ಯಾಸ

ಉಡುಪಿ: ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಪೂರ್ವಜರು ಅಂಬಲಪಾಡಿಯ ಸ್ವಗೃಹ ಈಶಾವಾಸ್ಯಮ್‌ನಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಶಿಲಾವೃಂದಾವನವನ್ನು ಆಚಾರ್ಯರ ಕುಟುಂಬಸ್ಥರು ನವೀಕರಣಗೊಳಿಸಲು ಉದ್ದೇಶಿಸಿದ್ದು ಈ ಪ್ರಯುಕ್ತ ಭಾನುವಾರ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು.

ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿ, “ನೂತನ ಗುಡಿ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರಿ ನವೀಕೃತ ಗುಡಿಯಲ್ಲಿ ಪುನಃ ಪ್ರತಿಷ್ಠೆಗೊಳ್ಳುವ ವೃಂದಾವನದಲ್ಲಿ ಗುರುರಾಯರು ಸನ್ನಿಹಿತರಾಗಿದ್ದುಕೊಂಡು ನಮ್ಮೆಲ್ಲರನ್ನು ನಿರಂತರವಾಗಿ ಅನುಗ್ರಹಿಸಲಿ ಎಂದು ಸಂದೇಶ ನೀಡಿದರು.

ಜ್ಯೋತಿರ್ವಿದ್ವಾನ್ ಪಾವಂಜೆ ವಾಸುದೇವ ಭಟ್ಟರ ಮಾರ್ಗದರ್ಶನದಲ್ಲಿ ವಿದ್ವಾನ್ ವೇಣುಗೋಪಾಲಕೃಷ್ಣ ಸಾಮಗರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಗುಡಿ ನಿರ್ಮಾಣದ ಉಸ್ತುವಾರಿ, ಎಂಜಿನಿಯರ್ ರಮೇಶ್ ರಾವ್ ಬೀಡು ಉಪಸ್ಥಿತರಿದ್ದರು.

ಬನ್ನಂಜೆ ಆಚಾರ್ಯರ ಸುಪುತ್ರ ವಿನಯಭೂಷಣ ಆಚಾರ್ಯ ಮತ್ತು ರಮಾ ಆಚಾರ್ಯ ದಂಪತಿ ಸಂಕಲ್ಪ ನೆರವೇರಿಸಿ ಶ್ರೀಗಳ ಗುರುಪೂಜೆ ನೆರವೇರಿಸಿದರು.

Home

ನೂತನ ಗುಡಿಯ ಮೇಲ್ಭಾಗದಲ್ಲಿ ಬನ್ನಂಜೆ ಆಚಾರ್ಯರ ಅಭಿಮಾನಿಗಳು ಮತ್ತು ಹಿತೈಷಿಗಳ ಅಪೇಕ್ಷೆಯಂತೆ ಬನ್ನಂಜೆಯವರ ಸಾಹಿತ್ಯ ಕೃತಿಗಳ ಅಧ್ಯಯನ ಮತ್ತು ಪ್ರವಚನ ಮಾಲಿಕೆಗಳ ಶ್ರವಣಕ್ಕೆ ಅನುಕೂಲವಾಗುವಂತೆ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಮೂಲಕ ಪರಮಜ್ಞಾನಿಗಳಾದ ಗುರು ರಾಯರ ಸೇವೆ ಮತ್ತು ಆಚಾರ್ಯರ ಆಧ್ಯಾತ್ಮ ಮತ್ತು ಸಾಹಿತ್ಯ ಕೈಂಕರ್ಯಗಳೂ ನಿರಂತರವಾಗಿ ನಡೆಸುವ ಅವಕಾಶ ಲಭಿಸಲಿದೆ. ಬನ್ನಂಜೆಯವರಿಂದಲೇ ಸ್ಥಾಪನೆಗೊಂಡ ಈಶಾವಾಸ್ಯ ಪ್ರತಿಷ್ಠಾನದ ವತಿಯಿಂದಲೇ ಈ ನಿರ್ಮಾಣಗಳು ನಡೆಯಲಿವೆ ಎಂದು ಪ್ರತಿಷ್ಠಾನದ ವಿಶ್ವಸ್ಥರಾದ ಉದ್ಯಮಿ ಬಾಲಾಜಿ ರಾಘವೇಂದ್ರ ಆಚಾರ್ಯ ತಿಳಿಸಿದ್ದಾರೆ.

ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿ ವಂದನಾರ್ಪಣೆಗೈದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

GUIDE CLOTH STORES- Manipal

 

Related posts

‘ಸದಾ ಸನ್ನಡತೆಯ ಹೊಳಪು ಹರಿಯುತ್ತಿರಲಿ’

Upayuktha

‘ಮಣಿಕರ್ಣಿಕ’ ಮತ್ತಷ್ಟು ಮಾತುಗಾರರನ್ನು ಬೆಳೆಸಲಿ: ಡಾ. ಎಚ್. ಜಿ. ಶ್ರೀಧರ್

Upayuktha

ಅಳದಂಗಡಿ ಬಸದಿಯಲ್ಲಿ ಫೆ.13ರಿಂದ 17ರ ವರೆಗೆ ಪಂಚಕಲ್ಯಾಣ, ಪ್ರತಿಷ್ಠಾ ಮಹೋತ್ಸವ

Upayuktha