ಚಾಮರಾಜನಗರ: ಬಿಳಿಗಿರಿ ರಂಗನಾಥಕ್ಕೆ ಒಳಪಟ್ಟ ಅರಣ್ಯದ ವ್ಯಾಪ್ತಿಗೆ ರಿಸರ್ವ್ ಫಾರೆಸ್ಟ್ನ ಹಂಗಲವಾಡಿ ಗ್ರಾಮದಲ್ಲಿ 61 ವರ್ಷದ ವ್ಯಕ್ತಿಯೊಬ್ಬರು ಕಾಡಾನೆ ತುಳಿತಕ್ಕೆ ಸಿಲುಕಿ ಸಾವಿಗೀಡಾಗಿರುವುದು ವರದಿಯಾಗಿದೆ

ಮೃತನನ್ನು ಗುರುಸ್ವಾಮಿ ಎಂದು ಪತ್ತೆ ಹಚ್ಚಲಾಗಿದೆ. ಜಾನುವಾರುಗಳನ್ನು ಮೇಯಿಸಲು ಕಾಡಿಗೆ ಹೋಗಿದ್ದ ಅವರು ರಾತ್ರಿಯಾದರೂ ಹಿಂದಿರುಗಿ ಬರಲಿಲ್ಲ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಈ ಕಾರಣದಿಂದ ಬೆಳಿಗ್ಗೆ ಗ್ರಾಮಸ್ಥರು ಮತ್ತು ಕುಟುಂಬ ಸದಸ್ಯರು ಆತನನ್ನು ಹುಡುಕಿಕೊಂಡು ಹೋದಾಗ ವ್ಯಕ್ತಿ ಯ
ಶವವನ್ನು ನೋಡಿ ಗಾಬರಿಯಾಗಿದ್ದಾರೆ.
ಈ ಮೃತದೇಹ ಗುರು ಸ್ವಾಮಿಯಾದಾಗಿದ್ದು ,ಕಳೆದ ಸಂಜೆ ತಡವಾಗಿ ನಡೆದಿರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.