ದೇಶ-ವಿದೇಶ

ಉ. ಪ್ರದೇಶದಲ್ಲಿ ಫಿಲಂ ಸಿಟಿ ನಿರ್ಮಿಸಲು ಸಜ್ಜು – ಸಿಎಂ ಯೋಗಿ

ಲಕ್ನೋ: ಉತ್ತರ ಪ್ರದೇಶ ದ ನೋಯ್ಡಾದಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ದೇಶಕ್ಕೆ ಒಂದು ಉತ್ತಮವಾದ ಫಿಲಂ ಸಿಟಿ ಅವಶ್ಯಕತೆಯಿದ್ದು, ಅದನ್ನು ಉತ್ತರ ಪ್ರದೇಶದಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.

ಹಾಗೆಯೇ ಅತ್ಯದ್ಭುತವಾದ ಫಿಲಂ ಸಿಟಿ ಸ್ಥಾಪನೆಗೆ ಸರ್ಕಾರ ಬದ್ಧವಾಗಿದ್ದು, ಗ್ರೇಟರ್ ನೋಯ್ಡಾ ಅಥವಾ ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.

ಈಗಾಗಲೇ ಇಲ್ಲಿ ನಿರ್ಮಾಪಕರಿಗೆ ಫಿಲಂ ಸಿಟಿ ಉತ್ತಮ ಅವಕಾಶ ಕಲ್ಪಿಸಲಿದ್ದು, ಇದರಿಂದಾಗಿ ಹಲವು ಮಂದಿಗೆ ಉದ್ಯೋವಕಾಶ ಸಿಗಲಿದೆ, ಇದಕ್ಕಾಗಿ ಶೀಘ್ರವೇ ನೀಲ ನಕ್ಷೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದ್ದಾರೆ.

Related posts

ಹಾಕಿ ದಂತಕಥೆ ಬಲಬೀರ್ ಸಿಂಗ್‌ ಸರ್ದಾರ್‌ಗೆ ಹೃದಯಾಘಾತ; ಸ್ಥಿತಿ ಗಂಭೀರ

Upayuktha

ರಫೇಲ್‌ ಡೀಲ್: ತನಿಖೆ ನಡೆಸಲು ಯಾವುದೇ ಆಧಾರವಿಲ್ಲ ಎಂದ ಸುಪ್ರೀಂ ಕೋರ್ಟ್, ಎಲ್ಲ ಅರ್ಜಿಗಳ ವಜಾ

Upayuktha

ಸಿನಿಮಾ, ಧಾರಾವಾಹಿಗಳ ಚಿತ್ರೀಕರಣ ಪುನರಾರಂಭಕ್ಕೆ ಮಾರ್ಗಸೂಚಿ

Harshitha Harish

Leave a Comment