ರಾಜ್ಯ

ಶ್ರೀಗಳ ಪಾರ್ಥಿವ ಶರೀರದ ಫೋಟೋಗೆ ಬಹುಮಾನ: ಭಕ್ತರ ಆಕ್ರೋಶಕ್ಕೆ ಮಣಿದು ರದ್ದು ಪಡಿಸಿದ ಆಂಧ್ರ ಪತ್ರಿಕಾ ಛಾಯಾಗ್ರಾಹಕರ ಸಂಘ

ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪಾರ್ಥಿವ ಶರೀರದ ಅಂತ್ಯಕ್ರಿಯೆಯ ಛಾಯಾಚಿತ್ರವೊಂದನ್ನು ಈ ಬಾರಿಯ 5ನೇ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯ ಬಹುಮಾನಕ್ಕೆ ಆಯ್ಕೆ ಮಾಡಿದ್ದ ಆಂಧ್ರಪ್ರದೇಶ ಪತ್ರಿಕಾ ಛಾಯಾಗ್ರಾಹಕರ ಸಂಘ ಶ್ರೀಗಳ ಭಕ್ತರು ಶಿಷ್ಯವರ್ಗದವರ ಬೇಸರ ಆಕ್ರೋಶಕ್ಕೆ ಮಣಿದು ರದ್ದುಪಡಿಸಿದೆ.

ಉಡುಪಿಯ ಛಾಯಾಗ್ರಾಹಕರೊಬ್ಬರು ತೆಗೆದ ಆ ಚಿತ್ರವನ್ನು ರಾಷ್ಟ್ರೀಯ ಸ್ಪರ್ಧೆಯ ಬಹುಮಾನಕ್ಕೆ ಆಯ್ಕೆ ಮಾಡಲಾಗಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಉಡುಪಿ ಕೃಷ್ಣ ಭಕ್ತರು, ಪೇಜಾವರ ಶ್ರೀಗಳ ಅಭಿಮಾನಿಗಳು, ಶಿಷ್ಯರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿ ಶ್ರೀಗಳ ಮೃತದೇಹದ ಚಿತ್ರವನ್ನು ಸ್ಪರ್ಧೆಗಾಗಿ ದುರುಪಯೋಗಪಡಿಸಿಕೊಂಡ ಬಗ್ಗೆ ಖಂಡಿಸಿದ್ದರು.

ಸಾಮಾಜಿಕ ಕಾರ್ಯಕರ್ತ ಜಿ. ವಾಸುದೇವ ಭಟ್ ಪೆರಂಪಳ್ಳಿ ಅವರು, ಸ್ಪರ್ಧೆಯ ಸಂಯೋಜಕರನ್ನು ಸೋಮವಾರ ಸಂಪರ್ಕಿಸಿ , ಆಗಿರುವ ಪ್ರಮಾದನ್ನು ವಿವರಿಸಿ ತಕ್ಷಣವೇ ಆ ಚಿತ್ರಕ್ಕೆ ಘೋಷಿಸಲಾಗಿರುವ ಬಹುಮಾನವನ್ನು ರದ್ದುಪಡಿಸಬೇಕು , ಪೇಜಾವರ ಶ್ರೀಗಳ ಅಸಂಖ್ಯ ಭಕ್ತರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು, ಮುಂದೆಂದೂ ಯಾವುದೇ ವ್ಯಕ್ತಿಯ ಮೃತಶರೀರ ಮತ್ತು ಅಂತ್ಯಕ್ರಿಯೆಯ ಛಾಯಾಚಿತ್ರಗಳನ್ನು ಯಾವುದೇ ಸ್ಪರ್ಧೆಗೆ ಪರಿಗಣಿಸಬಾರದೆಂದು ಆಗ್ರಹಿಸಿ ಇದಕ್ಕೆ ಒಪ್ಪದಿದ್ದಲ್ಲಿ ಸಂಸ್ಥೆಯ ವಿರುದ್ಧ ಕಾನೂನು ಮೊಕದ್ದೆಮೆ ಹೂಡುವ ಬಗ್ಗೆ ಯೋಚಿಸಬೇಕಾಗುತ್ತದೆ ಎಂದೂ ಎಚ್ಚರಿಸಿದ್ದರು.

ಈ ಬಗ್ಗೆ ತ್ವರಿತವಾಗಿ ಸ್ಪಂದಿಸಿದ ಆಂಧ್ರಪ್ರದೇಶ ಪತ್ರಿಕಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ವಿಜಯ ಭಾಸ್ಕರ್ ಲಿಖಿತ ಸಂದೇಶವನ್ನು ಕಳಿಸಿ ಸಕಾಲದಲ್ಲಿ ಪ್ರಮಾದವನ್ನು ಗಮನಕ್ಕೆ ತಂದ ಬಗ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ತಕ್ಷಣವೇ ಮಂಗಳವಾರ ನಡೆಯಲಿದ್ದ ಬಹುಮಾನ ವಿತರಣೆ ಸಮಾರಂಭವನ್ನು ರದ್ದುಪಡಿಸಿರುವುದಾಗಿಯೂ ತಿಳಿಸಿದ್ದಾರೆ; ಈ ಘಟನೆಯಿಂದ ನೊಂದಿರುವ ಶ್ರೀಗಳ ಭಕ್ತರಲ್ಲಿ ಕ್ಷಮೆಯನ್ನೂ ಯಾಚಿಸಿದ್ದಾರೆ. ಮುಂದೆಂದೂ ತಮ್ಮ ಸಂಸ್ಥೆಯಿಂದ ಇಂತಹ ಪ್ರಮಾದಗಳು ನಡೆಯದಂತೆ ಎಚ್ಚರವಹಿಸುವುದಾಗಿ ತಿಳಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕರ್ನಾಟಕದಲ್ಲಿ ಇಂದು 100 ಕೊರೊನಾ ಪ್ರಕರಣಗಳು ಪತ್ತೆ; ಉಡುಪಿ-3, ದ.ಕ-3

Upayuktha

ಸುಧಾ ಮೂರ್ತಿ ಯವರಿಗೆ ಮೈಸೂರು ವಿವಿ ಗೌರವ ಡಾಕ್ಟರೇಟ್

Harshitha Harish

ಗೋಕರ್ಣ ಮಹಾಬಲೇಶ್ವರನ ದರ್ಶನಕ್ಕೆ ನಾಳೆಯಿಂದ (ಅ.5) ಅವಕಾಶ

Upayuktha

Leave a Comment