ಸಮುದಾಯ ಸುದ್ದಿ

ಚೆನ್ನೈ ಹವ್ಯಕದ ವಾರ್ಷಿಕ ಸಭೆ ಸಂಪನ್ನ

ಚೆನ್ನೈ: ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಇರುವ ಹವ್ಯಕ ಮಹಾ ಮಂಡಲದ ಚೆನ್ನೈ ಹವ್ಯಕದ ವಾರ್ಷಿಕ ಸಭೆ ಚೆನ್ನೈ ಇ ಸಿ ಆರ್ ನಲ್ಲಿರುವ ವುಡ್ ಲ್ಯಾಂಡ್ಸ್ ಶಂಕರ್ ಹಾಲ್ ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆಯನ್ನು ನಡೆಸಲಾಯಿತು. ಚೆನ್ನೈ ಹವ್ಯಕದ ಹಿರಿಯರಾದ ಶ್ರೀಯುತ ಡಾ|| ಗೋವಿಂದ ಭಟ್ ದಂಪತಿಗಳನ್ನು ಅವರ ಸಾರ್ವಜನಿಕ ವಿಶೇಷ ಸೇವೆಗೆ ಅಭಿನಂದಿಸಲಾಯಿತು. ಚೆನ್ನೈ ಹವ್ಯಕದ ವಿವಿಧ ಕ್ಷೇತ್ರದ ಪ್ರತಿಭಾವಂತರನ್ನು ಗುರುತಿಸಿ ಗೌರವಿಸಲಾಯಿತು.

ಶ್ರೀಮತಿ ಚಿತ್ರಾ ಕೃಷ್ಣಭಟ್, ಶ್ರೀಯುತ ಮಿತ್ತೂರು ಭೀಮ ಭಟ್ (ಕಾರ್ಯದರ್ಶಿ) , ಅರುಣ್ ಕುಮಾರ್, ಶೇಷಾದ್ರಿ ಜೋಯಿಸ್, ಸುಬ್ರಹ್ಮಣ್ಯ ಭಟ್ ,, ರಾಮಚಂದ್ರ ಭಟ್ ಮೊದಲಾದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಂದ ವಿವಿಧ ಪ್ರತಿಭಾ ಕಾರ್ಯಕ್ರಮವೂ ನಡೆಯಿತು.

ವೃತ್ತಿಯೊಂದಿಗೆ ಪ್ರವೃತ್ತಿಯಾಗಿ ವೈದಿಕ ಹಾಗೂ ಸಂಸ್ಕೃತ ಭಾರತೀ ಮೂಲಕ ಸಂಸ್ಕೃತ ಪಾಠದಲ್ಲಿ ತೊಡಗಿಸಿಕೊಂಡಿರುವ ರಾಮಕೃಷ್ಣ ಭಟ್, ನಾಟ್ಯ – ವಾಣಿ ರವಿಶಂಕರ್, ಸಂಗೀತ – ಶ್ರುತಿ ಭಟ್, ಮಾಹಿತಿ ತಂತ್ರಜ್ಞಾನ – ಸತೀಶ್ ಅಮ್ಮುಂಜೆ, ಫೇಸ್ ಬುಕ್ ಯುವ ಕವಿಯತ್ರಿ – ಪಲ್ಲವಿ ಭಟ್ , ಮುಂತಾದವರನ್ನು ಗುರುತಿಸಿ ಅಭಿನಂದಿಸಲಾಯಿತು.

✍🏻 ಚಿತ್ರ ವರದಿ : ರಾಮಕೃಷ್ಣ ಭಟ್

Related posts

ಡಿಸಿಎಂ ಡಾ ಅಶ್ವತ್ಥ್ ನಾರಾಯಣಗೆ ಹವ್ಯಕ ಮಹಾಸಭಾದಿಂದ ಅಭಿನಂದನಾ ಸಮಾರಂಭ ಸೆ. 21ಕ್ಕೆ

Upayuktha

ಯಶ್‌ಪಾಲ್‌ ಸುವರ್ಣ ಅವರಿಂದ ದತ್ತುನಿಧಿ ಸ್ಮರಣ ಸಂಚಿಕೆಯ ಮನವಿ ಪತ್ರ ಬಿಡುಗಡೆ

Upayuktha

ಅರ್ಚಕರ ಮೇಲೆ ಹಲ್ಲೆಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಖಂಡನೆ

Upayuktha

Leave a Comment