ರಾಜ್ಯ

ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಆರ್ ಎಸ್ ಎಸ್ ಸಂಘದ ವಾರ್ಷಿಕ ಸಭೆ

ಬೆಂಗಳೂರು: ಬೆಂಗಳೂರಿ ನಲ್ಲಿ ಎರಡು ದಿನಗಳ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕ ಸಭೆ ಮಾರ್ಚ್ 19 ಮತ್ತು 20 ರಂದು ನಡೆಯಲಿದೆ. ಈ ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಯ ಚುನಾವಣೆ ನಡೆಯುವ ಸಾಧ್ಯತೆ ಯಿದೆ.

ಈ ಬಾರಿ ನಾಗಪುರದಲ್ಲಿ ಸಭೆ ನಡೆಯಬೇಕಿತ್ತು. ಆದರೆ, ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ಕಾರಣ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಆರ್ ಎಸ್ ಎಸ್ ಕರ್ನಾಟಕದ ಮಾಧ್ಯಮ ಉಸ್ತುವಾರಿ ಇ.ಎಸ್. ಪ್ರದೀಪ್ ಹೇಳಿಕೆಯಲ್ಲಿ ಮಂಗಳವಾರ ತಿಳಿಸಿದ್ದಾರೆ.

ಆರ್ ಎಸ್ ಎಸ್ ಸರ ಸಂಘ ಸಂಚಾಲಕ ಡಾ.ಮೋಹನ್ ಭಾಗವತ್,  ಸರ್ ಕಾರ್ಯವಾಹ ಭಯ್ಯಾಜಿ ಜೋಷಿ, ದತ್ತಾತ್ರೇಯ ಹೊಸಬಾಳೆ, ಡಾ. ಮೋಹನ್ ವೈದ್ಯ, ಡಾ. ಕೃಷ್ಣಕುಮಾರ್, ಸುರೇಶ್ ಸೊನಿ, ಸಿ.ಆರ್. ಮುಕುಂದ ಸೇರಿದಂತೆ ಹಲವು ಸಂಘದ ಹಿರಿಯರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

 

Related posts

ಪೇಜಾವರ ಶ್ರೀ ಭೇಟಿ ಮಾಡಿದ ಆಂಧ್ರ ಪ್ರದೇಶ ಧಾರ್ಮಿಕ ದತ್ತಿ ಮಂತ್ರಿ

Upayuktha

ಜಾರಕಿಹೊಳೆ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು

Sushmitha Jain

ಡ್ರಗ್ಸ್ ಪ್ರಕರಣ ; ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಮಗ ದರ್ಶನ್ ಕುಮಾರ್ ಲಮಾಣಿ ಬಂಧನ

Harshitha Harish