ಪುತ್ತೂರು: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗವು ಮಂಗಳೂರು ವಿವಿ ಮಟ್ಟದಲ್ಲಿ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಮಾರ್ಚ್ 4ರಂದು ಆಯೋಜಿಸಿದ ವಾಣಿಜ್ಯಶಾಸ್ತ್ರ ಸ್ಪರ್ಧೋತ್ಸವ ‘ಎನೊಹೆಪ್ 2020′- ಕಾನ್ಫ್ಲುಯೆನ್ಸ್’ ಇದರಲ್ಲಿ ಭಾಗವಹಿಸಿದ ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ತಂಡವು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
‘ಬೆಸ್ಟ್ ಮ್ಯಾನೇಜೆಮೆಂಟ್’ ತಂಡ ಸ್ಪರ್ಧೆಯಲ್ಲಿ ದೀಪಾ ಸಿ ಭಟ್, ಋತು ಕಿರಣ್ ಮತ್ತು ಶ್ರೀದೇವಿ ಕೆ (ಪ್ರ), ‘ಮಾರ್ಕೆಟಿಂಗ್’ ಸ್ಪರ್ಧೆಯಲ್ಲಿ ನಿತಿನ್ ಎಚ್ ಆರ್ ಮತ್ತು ಪೃಥ್ವಿ ಎಚ್ ಸಿ (ಪ್ರ), ಕ್ವಿಜ್ನಲ್ಲಿ ಅನ್ವಿತ್ ನಾಯ್ಕ್ ಅಂಜನ್ ಕುಮಾರ್, ಡ್ಯಾನ್ಸ್ ಹಾಗೂ ಟ್ರೆಜರ್ ಹಂಟ್ ಸರ್ಧೆಗಳಲ್ಲಿ ವೈಭವಿ ರೈ, ವೈಷ್ಣವಿ ರೈ, ಲಹರಿ ಆಚಾರ್ಯ, ಪೂಜಾ, ಆಶ್ರಿತಾ ಎಸ್, ಮಹಾಲಸಾ ಪೈ, ಧನ್ಯಶ್ರೀ, ತೇಜಸ್ವಿ ಇವರು ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿರುತ್ತಾರೆ.
ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಚಾರ್ಯ ಪ್ರೊ. ಅಲೆಕ್ಸ್ ಐವನ್ ಸಿಕ್ವೇರಾ, ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಪಾವನಾ ರೈ, ಸ್ಟಾಫ್ ಕನ್ವೀನರ್ ನೆಲ್ಸನ್ ಮೋನಿಸ್ ಮೊದಲಾದವರು ಸಮಾರೋಪ ಸಮರಂಭದಲ್ಲಿ ಪ್ರಶಸ್ತಿ ಫಲಕ ನೀಡಿ, ವಿಜೇತರನ್ನು ಅಭಿನಂದಿಸಿದರು.
ಈ ಸ್ಪರ್ಧಾ ತಂಡಕ್ಕೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಪ್ರೇಮಲತಾ ಕೆ ಇವರ ಮಾರ್ಗದರ್ಶನದಲ್ಲಿ ಸಹಾಯ ಪ್ರಾಧ್ಯಾಪಕರಾದ ಲಕ್ಷ್ಮಣ ಕೆ ಮತ್ತು ನಿಲೇಶ್ ಜಾಯ್ ಡಾಯಸ್ ಇವರು ತರಬೇತಿ ನೀಡಿರುತ್ತಾರೆ.
(ಉಪಯುಕ್ತ ನ್ಯೂಸ್)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ