ಅಪರಾಧ ನಗರ ಪ್ರಮುಖ ಸ್ಥಳೀಯ

ಮಂಗಳೂರು: ಮತ್ತೆ ದುಷ್ಕರ್ಮಿಗಳಿಂದ ಪ್ರಚೋದನಕಾರಿ ಗೋಡೆ ಬರಹ, ಈ ಬಾರಿ ಕೋರ್ಟ್‌ ಆವರಣದ ಗೋಡೆಯ ಮೇಲೆ

ಮಂಗಳೂರು: ಎರಡು ದಿನಗಳ ಹಿಂದಷ್ಟೇ ಕದ್ರಿ ಸರ್ಕ್ಯೂಟ್ ಹೌಸ್ ಸಮೀಪದ ಕಾಂಪೌಂಡ್‌ ಗೋಡೆಯೊಂದರ ಮೇಲೆ ಉಗ್ರರನ್ನು ಕರೆಸುವುದಾಗಿ ಬೆದರಿಕೆ ಹಾಕಿದ ದೇಶದ್ರೋಹಿ ಬರಹವೊಂದು ಕಾಣಿಸಿಕೊಂಡ ಘಟನೆಯ ಬೆನ್ನಲ್ಲೇ ಇಂದು ಬೆಳಗ್ಗೆ ಇಂತಹದೇ ಇನ್ನೊಂದು ಕೃತ್ಯ ಬೆಳಕಿಗೆ ಬಂದಿದೆ.

ನಗರದ ಕೋರ್ಟ್‌ ಆವರಣದ ಪೊಲೀಸ್ ಹೊರಠಾಣೆಯ ಗೋಡೆಯ ಮೇಲೆ ಇಂಗ್ಲಿಷ್‌ ಅಕ್ಷರದಲ್ಲಿ ಬರೆದ ಉರ್ದು ಘೋಷಣೆಯೊಂದು ಕಾಣಿಸಿಕೊಂಡಿದೆ.

ಶನಿವಾರ ರಾತ್ರಿ (ನ.28) ಈ ಗೋಡೆ ಬರಹವನ್ನು ಬರೆದಿರಬೇಕು ಎಂದು ನಂಬಲಾಗಿದ್ದು, ಭಾನುವಾರ ಬೆಳಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಿದೆ.

‘ಗುಸ್ತಕ್‌ ಕಿ ಏಕ್‌ ಹೈ ಸಜಾ, ಸರ್‌ ತನ್‌ ಸೇ ಜುಡಾ’ (ಪ್ರವಾದಿಯನ್ನು ಅವಮಾನಿಸುವವರಿಗೆ ಒಂದೇ ಶಿಕ್ಷೆ, ದೇಹದಿಂದ ತಲೆಯನ್ನು ಕತ್ತರಿಸುವುದು) ಎಂದು ಬರೆಯಲಾಗಿದೆ.

ಶುಕ್ರವಾರ ಬೆಳಗ್ಗೆ ಕದ್ರಿ ಸಮೀಪದ ಅಪಾರ್ಟ್‌ಮೆಂಟ್‌ ಕಾಂಪೌಂಡ್‌ ಮೇಲೆ ‘ಸಂಘಪರಿವಾರದ ನಾಯಕರನ್ನು ಮಟ್ಟಹಾಕಲು ಲಷ್ಕರೆ ತಯ್ಬಾ ಉಗ್ರರನ್ನು ಕರೆಸಬೇಕಾದೀತು’ ಎಂಬ ಭಯೋತ್ಪಾದಕರ ಪರ ಘೋಷಣೆ ಪತ್ತೆಯಾಗಿತ್ತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

ಯಕ್ಷಾಭಿನಯ ಬಳಗ ಮಂಗಳೂರು ಉದ್ಘಾಟನೆ, ನಗೆಹಬ್ಬ ನಾಳೆ ( ಜ.18)

Upayuktha

ನೈಸರ್ಗಿಕ ರಾಖಿಗಳನ್ನು ಬಳಸಿ; ಈ ಬಾರಿಯ ರಕ್ಷಾಬಂಧನ ಪರಿಸರ ಸ್ನೇಹಿಯಾಗಿರಲಿ

Upayuktha

ದಿಲ್ಲಿಯಲ್ಲಿ ಸತತ 3ನೇ ಬಾರಿ ಆಪ್ ಸರಕಾರ; ಬಿಜೆಪಿ-8, ಕಾಂಗ್ರೆಸ್ ಶೂನ್ಯ

Upayuktha