ನಗರ ಸ್ಥಳೀಯ

ಉಡುಪಿಯಲ್ಲಿ ಇಂದು ಮತ್ತೊಂದು ಅಸ್ವಸ್ಥ ಹದ್ದು ಪತ್ತೆ

ಗಂಟಲು ದ್ರವ ಪ್ರಯೋಗಾಲಯಕ್ಕೆ ರವಾನೆ

ಉಡುಪಿ: ಬ್ರಹ್ಮಗಿರಿ ಇಲ್ಲಿಯ ಖಾಸಗಿಯವರ ಸ್ಥಳದಲ್ಲಿ ಅಸ್ವಸ್ಥಗೊಂಡು ಹಾರಲಾಗದೆ, ಅಸಹಾಯಕ ಸ್ಥಿತಿಯಲ್ಲಿದ್ದ, ಹದ್ದು ಪಕ್ಷಿಯೊಂದು ಬುಧವಾರ ಕಂಡುಬಂದಿತು. ಹಕ್ಕಿಜ್ವರದ ಭೀತಿಯಿಂದ ಪರಿಸರದಲ್ಲಿ ಆತಂಕದ ವಾತವರಣ ಸೃಷ್ಟಿಯಾಯಿತು.

ಮಾಹಿತಿ ತಿಳಿದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು, ಸ್ಥಳಕ್ಕೆ ಧಾವಿಸಿ ಬಂದು, ಹದ್ದು ಪಕ್ಷಿಯನ್ನು ರಕ್ಷಿಸಿ, ಬೈಲೂರು ಪಶು ಚಿಕಿತ್ಸಾಲಯದಲ್ಲಿ ಚಿಕಿತ್ಸೆಗೆ ಒಳಪಡಿಸಿ, ಅರಣ್ಯ ರಕ್ಷಕ ಕೇಶವ ಪೂಜಾರಿ ಅವರಿಗೆ ಹಸ್ತಾಂತರಿಸಿದರು.

ಹದ್ದಿಗೆ ಹಕ್ಕಿಜ್ವರದ ಯಾವುದೇ ಲಕ್ಷಣಗಳಿಲ್ಲ. ರೆಕ್ಕೆಗಾದ ಗಾಯದಿಂದ ಹಾರಲಾಗದೆ ಇರುವುದರಿಂದ, ಆಹಾರ ಬೇಟೆಗೆ ಅವಕಾಶ ಸಿಗದೆ, ನಿತ್ರಾಣಗೊಂಡು ಅಸ್ವಸ್ಥಗೊಂಡಿದೆ. ಮುನ್ನೆಚ್ಚರಿಕೆಗಾಗಿ ಹದ್ದಿನ ಗಂಟಲು ದ್ರವವನ್ನು ಮಂಗಳೂರು ಪ್ರಯೋಗಲಾಯಕ್ಕೆ ರವಾನಿಸಲಾಗುವುದೆಂದು ಪಶುವೈದ್ಯ ಡಾ. ಮಹೇಶ್ ಶೆಟ್ಟಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಗಳವಾರವೂ ಕುಕ್ಕಿಕಟ್ಟೆ ಭಾಗ್ಯಮಂದಿರದ ಬಳಿ ಅಸ್ವಸ್ಥಗೊಂಡು ಹಾರಲಾಗದೆ, ಅಸಹಾಯಕ ಸ್ಥಿತಿಯಲ್ಲಿದ್ದ, ಹದ್ದು ಪಕ್ಷಿಯೊಂದು ಕಂಡುಬಂದಿತ್ತು.

ಸ್ಥಳಕ್ಕಾಗಿಮಿಸಿದ ಪಶುವೈದ್ಯ ಡಾ. ಸಂದೀಪ್ ಕುಮಾರ್ ಅವರು, ಹದ್ದು ಪಕ್ಷಿ ವಿದ್ಯುತ್ ತಂತಿಯ ಸ್ಪರ್ಶಗೊಳಗಾಗಿ ನೆಲಕ್ಕೆ ಉರುಳಿದೆ. ಹಾರಲು ಆಗದೆ ಇರುವುದರಿಂದ, ಆಹಾರ ಸೇವನೆಗೆ ಅವಕಾಶ ಸಿಗದೆ, ನಿತ್ರಾಣಗೊಂಡು ಅಸ್ವಸ್ಥಗೊಂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹದ್ದನ್ನು ಪರೀಕ್ಷಿಸಿದ ವೈದ್ಯರು ಹಕ್ಕಿಜ್ವರದ ಯಾವುದೇ ಲಕ್ಷಣಗಳಿಲ್ಲ ಎಂದು ಹೇಳಿ, ಆತಂಕಕ್ಕೆ ತೆರೆ ಎಳೆದರು. ನಂತರ ಹದ್ದಿಗೆ ಚಿಕಿತ್ಸೆ ನೀಡಿ, ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಯಿತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ದ.ಕ. ಜಿಲ್ಲೆಯಲ್ಲಿ ಸತತ ನಾಲ್ಕು ದಿನಗಳಿಂದ ಕೊರೊನಾ ಪಾಸಿಟಿವ್ ಇಲ್ಲ

Upayuktha

ಹಿರಿಯ ವಿದ್ವಾಂಸ, ನಿವೃತ್ತ ಪ್ರಾಧ್ಯಾಪಕ ಡಾ. ಕಾನತ್ತಿಲ ಮಹಾಲಿಂಗ ಭಟ್ ನಿಧನ

Upayuktha

ಬಂಟ್ವಾಳ ತಾಲೂಕಿನಲ್ಲಿ ಹೆಚ್ಚಿದ ಕೊರೊನಾ ಸೋಂಕಿತರು, ಇಂದು ಒಂದೇ ದಿನ 32 ಮಂದಿಗೆ ಪಾಸಿಟಿವ್

Harshitha Harish