ಕೃಷಿ ಪ್ರಮುಖ ರಾಜ್ಯ ವಾಣಿಜ್ಯ

ಪೇಟೆಂಟ್‌ ಮಾಹಿತಿಗಳು ಜನಸಾಮಾನ್ಯರಿಗೆ ತಲುಪಲಿ: ಶ್ರೀನಿವಾಸನ್

ಅನ್ವೇಷಣಾ-2019 ರಾಜ್ಯ ಮಟ್ಟದ ಅಗ್ರಿಟಿಂಕರಿಂಗ್ ಫೆಸ್ಟ್


‘ಬೌದ್ಧಿಕ ಆಸ್ತಿ ಹಕ್ಕುಗಳು’ ವಿಷಯದ ಕುರಿತು ಕೃಷಿ ವಿಚಾರಗೋಷ್ಠಿ

ಪುತ್ತೂರು: ಅನ್ವೇಷಣಾ 2019 ಅಗ್ರಿ ಟಿಂಕರಿಂಗ್ ಫೆಸ್ಟ್‍ನ ಮೊದಲ ದಿನದ ದ್ವಿತೀಯ ಕೃಷಿ ವಿಚಾರ ಗೋಷ್ಠಿಯು ‘ಬೌದ್ಧಿಕ ಆಸ್ತಿ ಹಕ್ಕುಗಳು (ಪೇಟೆಂಟ್) ವಿಷಯದ ಕುರಿತು ನಡೆಯಿತು.

ಕರ್ನಾಟಕ ಲಘು ಉದ್ಯೋಗ ಭಾರತಿ ಇದರ ಉಪಾಧ್ಯಕ್ಷ ಬಿ.ಎಸ್. ಶ್ರೀನಿವಾಸನ್ ಅವರು ನಡೆಸಿ, ಪೇಟೆಂಟ್ ಬಗ್ಗೆ ತಿಳುವಳಿಕೆ ಅಗತ್ಯವಿದ್ದು ಇದು ಜನ ಸಾಮಾನ್ಯರಿಗೆ ತಲುಪಬೇಕು. ಜೊತೆಗೆ ಈ ವಿಷಯವನ್ನು ಶಾಲೆ-ಕಾಲೇಜುಗಳಲ್ಲೇ ಮಕ್ಕಳಿಗೆ ತಿಳಿಸುವ ಅಗತ್ಯವಿದೆ. ನಮ್ಮ ಹೊಸ ಆವಿಷ್ಕಾರಗಳಿಗೆ ಬೌದ್ಧಿಕ ಆಸ್ತಿ ಹಕ್ಕಿನ ಅಗತ್ಯವಿದ್ದು, ನಮ್ಮ ಬುದ್ಧಿ ಶಕ್ತಿಯಿಂದ ಸಾಧಿಸಿದಂತಹ ಹೊಸ ಅನ್ವೇಷಣೆಯು ಇನ್ಯಾರದೋ ಪಾಲಾಗದಂತೆ ಪೇಟೆಂಟ್ ಸಂರಕ್ಷಿಸುತ್ತದೆ. ಈ ನಿಟ್ಟಿನಲ್ಲಿ ಲಘು ಉದ್ಯೋಗ ಭಾರತಿಯು ಇದಕ್ಕೆ ಸಹಕಾರ ನೀಡುತ್ತದೆ. ಮಾತ್ರವಲ್ಲದೇ ಮಾರ್ಗದರ್ಶನವನ್ನು ನೀಡುತ್ತದೆ ಎಂದು ತಿಳಿಸಿದರು.

ಲಘು ಉದ್ಯೋಗ ಭಾರತಿ ಕರ್ನಾಟಕ ಇದರ ಇಸಿ ಸದಸ್ಯ ರವೀಂದ್ರನಾಥ್ ಕೌಶಿಕ್ ಮಾತನಾಡಿ, ಭಾರತದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತಾದ ಮಾಹಿತಿಯ ಕೊರತೆ ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ಪ್ರವೃತರಾಗಬೇಕು ಎಂದು ಹೇಳಿದರು.

ಲಘು ಉದ್ಯೋಗ ಭಾರತಿ ಕರ್ನಾಟಕದ ಕಾರ್ಯದರ್ಶಿ ನಾರಾಯಣ ಪ್ರಸನ್ನ ಅವರು ಮಾತನಾಡಿ, ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತಾಗಿ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಭಾರತದ ಪ್ರತಿಯೊಂದು ಅನ್ವೇಷಣೆಯೂ ಪೇಟೆಂಟ್ ಪಡೆಯುವಂತಾದರೆ ಅಖಂಡ ಭಾರತದ ನಿರ್ಮಾಣ ಶತ ಸಿದ್ಧ ಎಂಬುದಾಗಿ ತಿಳಿಸಿದರು. ಈ ನಿಟ್ಟಿನಲ್ಲಿ ಅನ್ವೇಷಣಾ 2019ರ ಮುಖಾಂತರ ಹೊಸ ಅನ್ವೇಷಣಕ್ಕೆ ದಾರಿ ಇದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲಘು ಉದ್ಯೋಗ ಭಾರತಿ ಕರ್ನಾಟಕದ ಅಧ್ಯಕ್ಷ ಶ್ರೀ ಪಿ.ಎಸ್ ಶ್ರೀಕಂಠ ದತ್ತ ಅವರು ಉಪಸ್ಥಿತರಿದ್ದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕನ್ನಡ ಶಿಕ್ಷಕಿ ಸಾಯಿ ಗೀತಾ ಎಸ್.ರಾವ್ ಸ್ವಾಗತಿಸಿದರು. ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಭರತ್ ಪೈ ವಂದಿಸಿದರು. ಶಿಕ್ಷಕಿ ಪದ್ಮಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

(ಉಪಯುಕ್ತ ನ್ಯೂಸ್ ಸುದ್ದಿಜಾಲ)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ದಕ ಜಿಲ್ಲೆಯಲ್ಲಿ ಜು.16ರಿಂದ ಒಂದು ವಾರ ಸಂಪೂರ್ಣ ಲಾಕ್‌ಡೌನ್‌: ಉಸ್ತುವಾರಿ ಸಚಿವರ ಘೋಷಣೆ

Upayuktha

ಬಿಗ್ ಶಾಕ್! ರಾಜ್ಯದಲ್ಲಿ ಆಸ್ತಿ ತೆರಿಗೆ ಶೇ.15ರಿಂದ 30ರಷ್ಟು ಹೆಚ್ಚಳ

Upayuktha

ತುಮಕೂರು ಸಿದ್ದಗಂಗೆಯ ಶಿವಕುಮಾರ ಶ್ರೀಗಳ ಎರಡನೇ ಪುಣ್ಯಸ್ಮರಣೆ; ದಾಸೋಹ ದಿನ ಘೋಷಣೆ- ಬಿಎಸ್ ವೈ

Harshitha Harish