ಮಂಗಳೂರು: ಜಿಲ್ಲಾ ಗೃಹರಕ್ಷಕ ದಳದ ಕಛೇರಿ ಮೇರಿಹಿಲ್, ಮಂಗಳೂರು ಇಲ್ಲಿ ಈ ಕೆಳಕಂಡ ಹುದ್ದೆಗಳಿಗಾಗಿ ಅರ್ಜಿಯನ್ನು ಕರೆಯಲಾಗಿದೆ. ಇದು ಗೌರವ ಹುದ್ದೆಯಾಗಿದ್ದು, ಯಾವುದೇ ವೇತನವಿರುವುದಿಲ್ಲ. ಅಭ್ಯರ್ಥಿಗಳು ದೈಹಿಕವಾಗಿ ಸದೃಢರಾಗಿದ್ದು, ಪದವಿಯನ್ನು ಹೊಂದಿರಬೇಕು, ಕನ್ನಡ ಭಾಷೆ ಬಲ್ಲವರಾಗಿದ್ದು, ಮಂಗಳೂರಿನ ನಿವಾಸಿಯಾಗಿರಬೇಕು. ಹುದ್ದೆಗೆ ಅರ್ಹವಾದ ಕೌಶಲ್ಯವನ್ನು ಹೊಂದಿರಬೇಕು ಮತ್ತು ಪೊಲೀಸ್ ಇಲಾಖೆಯಲ್ಲಿ ಯಾವುದೇ ಅಪರಾಧ ದಾಖಲಾಗಿರಬಾರದು. ವಯೋಮಿತಿ 20 ವರ್ಷ ಮೇಲ್ಪಟ್ಟು 50 ವರ್ಷದೊಳಗಿರಬೇಕು.
ಜಿಲ್ಲಾ ಗೃಹರಕ್ಷಕ ದಳ ಮೇರಿಹಿಲ್, ಮಂಗಳೂರು, ದೂರವಾಣಿ ಸಂಖ್ಯೆ 0824-2220562 ಇಲ್ಲಿಗೆ ತಮ್ಮ ಭಾವಚಿತ್ರ, ಪದವಿ ಪ್ರಮಾಣ ಪತ್ರ, ಜನನ ದಾಖಲೆಗಳೊಂದಿಗೆ ಸಮಯ: ಬೆಳಗ್ಗೆ 10.00 ಗಂಟೆಯಿಂದ 5.30 ರೊಳಗೆ ಅರ್ಜಿಯನ್ನು ಪಡೆಯಬಹುದು ಎಂದು ದಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರ ಪ್ರಕಟಣೆ ತಿಳಿಸಿದೆ.
ಹುದ್ದೆಗಳ ವಿವರ: ಅಡ್ಚುಟೆಂಟ್, ಸ್ಟಾಫ್ ಆಫೀಸರ್ ತರಬೇತಿ, ಸ್ಟಾಫ್ ಆಫೀಸರ್ ಲೆಕ್ಕಪತ್ರ, ಸ್ಟಾಫ್ ಆಫೀಸರ್ ಪ್ರಚಾರ, ಸ್ಟಾಫ್ ಆಫೀಸರ್ ವೈದ್ಯಕೀಯ, ಸ್ಟಾಫ್ ಆಫೀಸರ್ ವಾಹನ ವಿಭಾಗ, ಸ್ಟಾಫ್ ಆಫೀಸರ್ ಕಾನೂನು.
(ಉಪಯುಕ್ತ ನ್ಯೂಸ್)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ