ಗ್ರಾಮಾಂತರ ವಾಣಿಜ್ಯ ಸ್ಥಳೀಯ

ಸಾರಡ್ಕ: ಆರಾಧನಾ ಕಲಾಭವನ ಇಂದು ಲೋಕಾರ್ಪಣೆ

ಅಡ್ಯನಡ್ಕ: ಆರಾಧನಾ ಕಲಾಭವನ ಸಾರಡ್ಕ ಇದರ ಲೋಕಾರ್ಪಣೆ ಇಂದು ನಡೆಯಲಿದೆ. ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಡಾ. ಜಿ. ಭೀಮೇಶ್ವರ ಜೋಷಿ ಅವರು ಕಲಾಭವನವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಶ್ರೀ ಕ್ಷೇತ್ರ ಮಲ್ಲದ ಆಡಳಿತ ಮೊಕ್ತೇಸರ ವಿಷ್ಣು ಭಟ್‌ ಆನೆಮಜಲು ಸಭಾಧ್ಯಕ್ಷತೆ ವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಆರಾಧನಾ ಸಂಗೀತ ಶಾಲೆ ಸಾರಡ್ಕ ಇದರ ವಿದ್ಯಾರ್ಥಿಗಳಿಂದ ಭಕ್ತಿ ಭಾವ ಗಾನ ಲಹರಿ, ಯಕ್ಷವೇದಿಕೆ ಪಡಿಬಾಗಿಲು ವತಿಯಿಂದ ಯಕ್ಷಗಾನ ತಾಳಮದ್ದಳೆ ‘ರುಕ್ಮಿಣೀ ಸ್ವಯಂವರ’ ನಡೆಯಲಿದೆ. ಜ್ಯೋತಿಷ ರತ್ನ ವಳಕ್ಕುಂಜ ವೆಂಕಟ್ರಮಣ ಭಟ್ ಅವರಿಗೆ ಗೌರವಾರ್ಪಣೆ ನಡೆಯಲಿದೆ.

ಸಮಾರಂಭದಲ್ಲಿ ಕೇಪು ಗ್ರಾ.ಪಂ. ಅಧ್ಯಕ್ಷ ತಾರಾನಾಥ ಆಳ್ವ ಕುಕ್ಕೆಬೆಟ್ಟು, ಉಪಾಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ನೆಕ್ಕರೆ, ನವಜೀವನ ಹೈಯರ್‌ ಸೆಕೆಂಡರಿ ಸ್ಕೂಲ್ ಪೆರಡಾಲ ಇದರ ಅಧ್ಯಕ್ಷರಾದ ನ್ಯಾಯವಾದಿ ಐ.ವಿ ಭಟ್‌ ಕಾಸರಗೋಡು, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಿತ್ರ ಕಲಾವಿದ ಪಿ.ಎಸ್‌. ಪುಣಿಂಚಿತ್ತಾಯ, ಕಲಾಭವನದ ತಾಂತ್ರಿಕ ಸಲಹೆಗಾರ ಪುತ್ತೂರು ಕನ್‌ಸ್ಟ್ರಕ್ಷನ್ ಸಂಸ್ಥೆಯ ವಸಂತ ಭಟ್‌, ಕರ್ನಾಟಕ ಬ್ಯಾಂಕ್‌ ಮಂಗಳೂರು ಪ್ರಾದೇಶಿಕ ವ್ಯವಸ್ಥಾಪಕ ಚಂದ್ರಶೇಖರ್‌, ಖ್ಯಾತ ಯಕ್ಷಗಾನ ಅರ್ಥಧಾರಿ ಹರೀಶ ಬಳಂತಿಮೊಗರು, ಕಲಾಭವನದ ಮಾಲಕರಾದ ಗೀತಾ ಸಾರಡ್ಕ ಮತ್ತು ಪಾಲುದಾರರಾದ ಚಿಂತನ್ ಸಾರಡ್ಕ, ಚೇತನ್ ಸಾರಡ್ಕ ಉಪಸ್ಥಿತರಿರುವರು.

ನಿವೃತ್ತ ಅಧ್ಯಾಪಕ ಹಾಗೂ ಪತ್ರಕರ್ತ ಶಂಕರ್ ಸಾರಡ್ಕ ಅವರು ಆರಾಧನಾ ಕಲಾಭವನದ ವ್ಯವಸ್ಥಾಪಕರಾಗಿದ್ದಾರೆ.

ವಾಸ್ತು ಪ್ರಕಾರ, ಪೂರ್ವಾಭಿಮುಖವಾಗಿ ಪ್ರಕೃತಿಯ ಮಡಿಲಿನಲ್ಲಿ ಏಕತಲದಲ್ಲಿ ತಂಪಾದ ಹವೆ ಇರುವಂತೆ ವಿಶೇಷ ವಿನ್ಯಾಸದಲ್ಲಿ ಈ ಸಭಾವವನವನ್ನು ನಿರ್ಮಿಸಲಾಗಿದೆ. ವಿಶಾಲವಾದ ಓಪನ್ ಯಾರ್ಡ್ ಸಭಾಂಗಣ ಇದಾಗಿದ್ದು, ಮರಗಳ ನೆರಳಿನಲ್ಲಿ ವಿಶಾಲವಾದ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಡಾ.ಭರತ್ ಶೆಟ್ಟಿ

Upayuktha

ಮಂಗಳೂರು: ನೂತನ ನೋಂದಾಯಿತ ಪೌರ ರಕ್ಷಕರಿಗೆ ಜೀವ ರಕ್ಷಣಾ ತರಬೇತಿ ಶಿಬಿರ

Upayuktha

ಕಲ್ಯಾಣ್ ಜ್ಯುವೆಲ್ಲರ್ಸ್ ಚಿನ್ನ-ಬೆಳ್ಳಿ ದರ (ಮಾ.20)

Upayuktha