ಕಿರುತೆರೆ- ಟಿವಿ

‘ಅರ್ಧ ರೊಟ್ಟಿ’ ಕನ್ನಡ ಕಿರುಚಿತ್ರ ಬಿಡುಗಡೆ

ಕಾಸರಗೋಡು: ರಂಗಚೇತನ ಕಾಸರಗೋಡು ನಿರ್ಮಾಣದ ರಿದಮ್ ಮೀಡಿಯಾ ಕ್ರಿಯೇಷನ್ಸ್ ಕಾಸರಗೋಡು ಇವರ “ಅರ್ಧ ರೊಟ್ಟಿ” ಕನ್ನಡ ಕಿರುಚಿತ್ರ ಬುಧವಾರ ಸಂಜೆ ರಿದಂ ಮೀಡಿಯಾ ಕ್ರಿಯೇಷನ್ಸ್ ಇವರ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಂಡಿದೆ.

ಈ ಕಿರು ಚಿತ್ರದ ಚಿತ್ರಕಥೆ ನಿರ್ದೇಶನವನ್ನು ಸದಾಶಿವ ಬಾಲಮಿತ್ರ ಅವರು ನಿರ್ವಹಿಸಿದ್ದು, ಕೆಮರಾ, ಎಡಿಟಿಂಗ್ ಮತ್ತು ಸಂಗೀತವನ್ನು ಮೆಲ್ವಿನ್ ಮಾಸ್ಟರ್ ಪೆರ್ಮುದೆ ನಿರ್ವಹಿಸಿದ್ದಾರೆ.

ಚಲನಚಿತ್ರ ನಟ ಬಾಲಕೃಷ್ಣ ಮಾಸ್ಟರ್ ಅಡೂರು, ಕುಮಾರಿ ಸ್ವರ್ಣ, ಬಾಲ ನಟರಾದ ಚೇತನ ಎಡಕ್ಕಾನ, ನೂತನ ಎಡಕ್ಕಾನ ಮತ್ತು ವಿಜಯಕುಮಾರ್ ಪಾವಳ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಉಳಿದಂತೆ ಶಿವಪ್ರಸಾದ್ ಚೆರುಗೋಳಿ, ರಾಜ್ ಕುಮಾರ್ ಕಾಟುಕುಕ್ಕೆ, ಪ್ರಶಾಂತ್ ಹೊಳ್ಳ ಮಧೂರು, ಕೇಶವಪ್ರಸಾದ್ ಎಡಕ್ಕಾನ, ದಿನೇಶ್ ಕಾಪು, ಜಯಪ್ರಸಾದ್ ಯಸ್, ಸುಜಿತ್ ಚೇವಾರು, ದೇವಾನಂದ ಕಾಡೂರು, ಮಹಮ್ಮದ್ ಆಲಿ ಮಾಣಿ ಮೊದಲಾದವರು ಅಭಿನಯಿಸಿರುವ ಈ ಕಿರುಚಿತ್ರಕ್ಕೆ ಸಂಪೂರ್ಣ ಸಲಹೆ ಸಹಕಾರವನ್ನು ರಂಗಚೇತನದ ಕಾರ್ಯದರ್ಶಿ ಅಶೋಕ್ ಕುಮಾರ್ ಕೊಡ್ಲಾಮೊಗರು ವಸಂತ ಮಾಸ್ಟರ್ ಮೂಡಂಬೈಲು ನೀಡಿರುತ್ತಾರೆ.

 

ರಂಗಚೇತನ ಕಾಸರಗೋಡು ಇದರ ಗೌರವ ಅಧ್ಯಕ್ಷರು, ಹಾಗೂ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಯತೀಶ್ ಕುಮಾರ್ ಮುಳ್ಳೇರಿಯ ಅವರು ಚಿತ್ರವನ್ನು ಬಿಡುಗಡೆಗೊಳಿಸಿದರು.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ರಾಮಾಯಣದ ಭರತ- ಸಂಜಯ್ ಜೋಗ್

Upayuktha

ಕನ್ನಡ ಕೋಗಿಲೆ ಖ್ಯಾತಿಯ ಗಣೇಶ್ ಕಾರಂತ್

Upayuktha

ಡ್ಯಾನ್ಸಿಂಗ್ ಸ್ಟಾರ್ ಸೋನಾಲಿ ಭದೋರಿಯಾ

Upayuktha

Leave a Comment

error: Copying Content is Prohibited !!