ಕ್ಷೇತ್ರಗಳ ವಿಶೇಷ ಗ್ರಾಮಾಂತರ ಸ್ಥಳೀಯ

ಅರ್ಕುಳ: ಮಾರ್ಚ್ 5 ಮತ್ತು 6 ರಂದು ವರ್ಷಾವಧಿ ಜಾತ್ರೆ

ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಸಾಣದಲ್ಲಿ ವರ್ಷಾವಧಿ ಬಂಡಿ ಉತ್ಸವ

ಮಂಗಳೂರು: ಫರಂಗಿಪೇಟೆ ಸಮೀಪದ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ವರ್ಷಾವಧಿ ಸಾಣದ ಜಾತ್ರೆಯು ಫೆಬ್ರವರಿ 28 ಭಾನುವಾರದಿಂದ ಮಾರ್ಚ್ 6 ಶನಿವಾರದವರೆಗೆ ನಡೆಯಲಿದೆ.

ಫೆಬ್ರವರಿ 28ರ ಭಾನುವಾರದಂದು ಮುಂಜಾನೆ ತೋರಣ ಮುಹೂರ್ತ ಹಾಗೂ ಸಂಜೆ ಪ್ರಥಮ ಚೆಂಡು, ದಿನಾಂಕ 4ರ ಗುರುವಾರದಂದು ಕೊನೆ ಚೆಂಡು, ರಾತ್ರಿ ಅರ್ಕುಳ ಬೀಡಿನಿಂದ ಶ್ರೀ ದೈವಗಳ ಭಂಡಾರ ಆಗಮಿಸಿ, ಧ್ವಜಾರೋಹಣ ಹಾಗೂ ಕಂಚಿಲು ಸೇವೆ ನಡೆಯಲಿದೆ.

ಮಾರ್ಚ್ 5ರ ಶುಕ್ರವಾರದಂದು ಪೂರ್ವಾಹ್ನ ಬಸದಿಯಲ್ಲಿ ಶ್ರೀ ಪದ್ಮಾವತೀ ದೇವಿ ಪ್ರತಿಷ್ಠೆ, ಸಾಣದಲ್ಲಿ ಮಡಸ್ತಾನ ಸೇವೆ, ನವಕ ಕಲಶಾಭಿಷೇಕ, ಅನ್ನ ಸಂತರ್ಪಣೆ, ಸಂಜೆ 6.30 ಕ್ಕೆ ಶ್ರೀ ಉಳ್ಳಾಕ್ಲು ಧರ್ಮದೇವತೆಗಳ ನೇಮ ಹಾಗೂ ಬಂಡಿ ಉತ್ಸವ ನಡೆಯಲಿದೆ.

ಮಾರ್ಚ್ 6ರ ಶನಿವಾರದಂದು ಪೂರ್ವಾಹ್ನ ಸಾಣದಲ್ಲಿ ಚಂಡಿಕಾಯಾಗ, ಮಧ್ಯಾಹ್ನ ಪಂಚಾಮೃತ ಅಭಿಷೇಕ, ನಂದಿ ಪೂಜೆ, ಅನ್ನ ಸಂತರ್ಪಣೆ, ಸಂಜೆ ಅರ್ಕುಳ ಬಸದಿಯಲ್ಲಿ ಮಹಾಮಾತೆ ಪದ್ಮಾವತೀ ದೇವಿಗೆ ಪುಷ್ಪಾಲಂಕಾರ ಪೂಜೆ, ಸಂಜೆ 6.30ರಿಂದ ಶ್ರೀ ಮಗೃಂತಾಯಿ ಧರ್ಮದೈವದ ನೇಮ, ಬಂಡಿ ಉತ್ಸವಗಳು ಸಂಪನ್ನಗೊಳ್ಳಲಿದೆ ಎಂದು ಶ್ರೀ ಕ್ಷೇತ್ರ ಅರ್ಕುಳದ ಧರ್ಮದರ್ಶಿ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಆಲಂಕಾರು ಶ್ರೀಭಾರತಿ ಶಾಲೆಯ ರಜತ ಸಂಭ್ರಮ ಸಮಾರೋಪ, ಶ್ರೀನಿವಾಸ ಕಲ್ಯಾಣೋತ್ಸವ ಇಂದು

Upayuktha

ಪುಂಜಾಲಕಟ್ಟೆ: ಹೂಡಿಕೆದಾರರ ಅರಿವು- ಆನ್‌ಲೈನ್ ಕಾರ್ಯಕ್ರಮ

Upayuktha

ಆಳ್ವಾಸ್‌ ಕ್ಯಾಂಪಸ್‌ನಲ್ಲಿ ಸೂರ್ಯಗ್ರಹಣ ವೀಕ್ಷಣೆ

Upayuktha