ದೇಶ-ವಿದೇಶ ಪ್ರಮುಖ

ಪಿಓಕೆ ಮರು ವಶಕ್ಕೆ ಸೇನೆ ಸಿದ್ಧ, ಆದರೆ ಸರಕಾರ ಆದೇಶ ನೀಡಬೇಕಷ್ಟೆ: ಜನರಲ್ ನರವಣೆ

ಹೊಸದಿಲ್ಲಿ: ಸಮಗ್ರ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದು ಸಂಸತ್ತಿನ ನಿರ್ಣಯ. ಹೀಗಾಗಿ ಪಾಕ್ ಆಕ್ರಮಿತ ಕಾಶ್ಮೀರವೂ ಭಾರತಕ್ಕೇ ಸೇರಬೇಕು. ಸರಕಾರ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡರೆ ಪಿಓಕೆಯನ್ನು ಮರಳಿ ಪಡೆಯಲು ಭಾರತೀಯ ಸೇನೆ ಸಿದ್ಧವಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಹೇಳಿದ್ದಾರೆ.

ದಿಲ್ಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಂಸತ್ ಬಯಸಿದರೆ ಪಾಕ್ ಆಕ್ರಮಿತ ಕಾಶ್ಮೀರವೂ ನಮಗೆ ಸೇರುತ್ತದೆ. ಈ ದಿಸೆಯಲ್ಲಿ ಸರಕಾರ ಆದೇಶ ನೀಡಿದರೆ ಕ್ರಮ ಕೈಗೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಜನರಲ್ ನರವಣೆ ಹೇಳಿದ್ದಾರೆ.

ಸುದ್ದಿ ಸಂಸ್ಥೆ ಈ ವಿಷಯವನ್ನು ವರದಿ ಮಾಡಿದೆ.

ಭೂಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇತ್ತೀಚೆಗೆ ನೀಡಿದ್ದ ಸಂದರ್ಶನದಲ್ಲೂ ಜನರಲ್ ನರವಣೆ ಇದೇ ಮಾತು ಹೇಳಿದ್ದರು. ಸರಕಾರ ಆದೇಶ ನೀಡಿದಲ್ಲಿ ಪಿಓಕೆಯನ್ನು ಮರಳಿ ವಶಪಡಿಸಿಕೊಳ್ಳುವುದು ಕಷ್ಟವಲ್ಲ ಎಂದು ತಿಳಿಸಿದ್ದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ರಾಜ್ಯದಲ್ಲಿ ಕೊರೊನಾ ತಡೆಗೆ ವ್ಯಾಪಕ ಮುನ್ನೆಚ್ಚರಿಕೆ: ಸಿಎಂ ಬಿಎಸ್‌ವೈ

Upayuktha

ಬಾಲಿವುಡ್ ನಟ ಹೃತಿಕ್ ರೋಷನ್ ತಾಯಿಗೆ ಕೋವಿಡ್ ಪಾಸಿಟಿವ್

Harshitha Harish

ಬೆಂಗಳೂರು: ಗಿರಿನಗರದಲ್ಲಿ ನಾಳೆಯಿಂದ ರಾಮಾಶ್ರಮ ಪ್ರತಿಷ್ಠಾ ವಾರ್ಷಿಕೋತ್ಸವ

Upayuktha

Leave a Comment