ದೇಶ-ವಿದೇಶ

ಸಂಪೂರ್ಣ ಸುರಕ್ಷಿತ ಆರೋಗ್ಯ ಸೇತು ಆ್ಯಪ್ ಸರ್ಕಾರ ಸ್ಪಷ್ಟನೆ

ನವದೆಹಲಿ: ಆರೋಗ್ಯ ಸೇತು ಅಪ್ಲಿಕೇಶನ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಅತ್ಯಂತ ಪಾರದರ್ಶಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಕೋವಿಡ್ ಸಮಯದಲ್ಲಿ ನಿಯಂತ್ರಣ‌ಕ್ಕೆ ಸಹಕಾರಿಯಾಗುವ ಈ ಆ್ಯಪ್ ಸಂಪೂರ್ಣ ಸುರಕ್ಷಿತ ಹಾಗೂ ಇದನ್ನು ಅತ್ಯಂತ ಪಾರದರ್ಶಕ ರೀತಿಯಲ್ಲಿ‌ಯೇ ಅಭಿವೃದ್ಧಿ ಮಾಡಲಾಗಿದೆ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.

ಹಾಗೆಯೇ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐ‌ಸಿ) ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದ ಸ್ವಯಂಸೇವಕರ ಸಹಯೋಗದಲ್ಲಿ ಈ ಆ್ಯಪ್ ಅಭಿವೃದ್ಧಿ ಆಗಿದೆ ಎಂದೂ ಅವರು ಹೇಳಿದ್ದಾರೆ.

ಈ ಆ್ಯಪ್ ಯಾವುದೇ ಖಾಸಗಿ ವಿಚಾರಗಳಿಗೂ ಸಮಸ್ಯೆ ಮಾಡುವುದಿಲ್ಲ. ಇದು ಸಂಪೂರ್ಣವಾಗಿ ಸುರಕ್ಷಿತ‌ವಾಗಿದೆ. ಜೊತೆಗೆ ಹೆಚ್ಚು ಪಾರದರ್ಶಕ ರೀತಿಯಲ್ಲಿ ಈ ಆ್ಯಪ್ ಅನ್ನು ಅಭಿವೃದ್ಧಿ ಮಾಡಲಾಗಿರುವುದಾಗಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಇಲಾಖೆ ಸ್ಪಷ್ಟೀಕರಣ ನೀಡಿದೆ.

ಹಾಗೆಯೇ ಇದೀಗ ಈ ಆ್ಯಪ್‌ನ ಸೃಷ್ಟಿಕರ್ತರು ಯಾರು, ಅದರ ದಾಖಲೆಗಳು, ಅನುಮತಿ ವಿವರ, ಈ ಆ್ಯಪ್‌ಗೆ ಸಂಬಂಧಿಸಿದಂತೆ ಇರುವ ವ್ಯಕ್ತಿಗಳು, ಸಂಸ್ಥೆಗಳು, ಸರ್ಕಾರಿ ಇಲಾಖೆಗಳಿಗೆ ಸಂಬಂಧ ಪಟ್ಟಂತೆ ನವೆಂಬರ್ 24 ರಂದು ಇದಕ್ಕೆ ಸಂಬಂಧಿಸಿದಂತೆ ಇರುವ ಇಲಾಖೆ ವಿವರಣೆ ನೀಡಬೇಕು ಎಂದು ರಾಷ್ಟ್ರೀಯ ಮಾಹಿತಿ ಆಯೋಗ ತಿಳಿಸಿದೆ.

Related posts

ಅಗರಬತ್ತಿ ತಯಾರಿಕೆಯ ಕುಶಲಕರ್ಮಿಗಳಿಗೆ ಕೇಂದ್ರ ಸರ್ಕಾರದಿಂದ ಮತ್ತಷ್ಟು ಪ್ರೋತ್ಸಾಹ

Upayuktha News Network

ಸ್ವಚ್ಛ ಭಾರತ ಅಭಿಯಾನ: ಪ್ರಧಾನಿ ಮೋದಿಗೆ ಜಾಗತಿಕ ಗೋಲ್ ಕೀಪರ್ ಪ್ರಶಸ್ತಿ

Upayuktha

ಪೇಜಾವರ ಶ್ರೀ, ಸುಷ್ಮಾ, ಜೇಟ್ಲಿ, ಜಾರ್ಜ್‌ ಫರ್ನಾಂಡಿಸ್‌ಗೆ ಪದ್ಮವಿಭೂಷಣ

Upayuktha

Leave a Comment