ನಿಧನ ಸುದ್ದಿ

ಚಿತ್ರ ಕಲಾವಿದ, ಛಾಯಾಗ್ರಾಹಕ ಕೆ. ವಾಸುದೇವ ರಾವ್ ನಿಧನ

ಮಂಗಳೂರು: ಚಿತ್ರ ಕಲಾವಿದ, ಫೋಟೊಗ್ರಾಫರ್ ಆಗಿದ್ದ ಕೆ.ವಾಸುದೇವ ರಾವ್(73) ಹೃದಯಾಘಾತದಿಂದ ಬುಧವಾರ ರಾತ್ರಿ ತಮ್ಮ ಹೊಸಬೆಟ್ಟಿನ ನಿವಾಸದಲ್ಲಿ ನಿಧನರಾದರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಲಾವಿದ ಹಾಗೂ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದ ಅವರು ಪ್ರಸಾದ್ ಆರ್ಟ್ ಗ್ಯಾಲರಿಯ ಮಾಜಿ ಸದಸ್ಯರು. ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಪುತ್ರ ವೆಂಕಟೇಶ ರಾವ್, ಪತ್ನಿ ಶ್ರೀಮತಿ, ಮಗಳು ವಸುಧಾ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಫಿಲ್ಮ್‌ ಕ್ಯಾಮೆರಾ ಇದ್ದ ಕಾಲದಲ್ಲಿ ಫಿಲ್ಮ್‌ ಡೆವಲಪ್‌ ಮಾಡುವ ಬಗ್ಗೆ ಡಾರ್ಕ್‌ ರೂಂ ಟೆಕ್ನಿಕ್ಸ್‌ ಬಗ್ಗೆ ಅವರು ತರಬೇತಿ ನೀಡುತ್ತಿದ್ದರು. ಕತ್ತಲೆಯಲ್ಲಿ ವಿದ್ಯಾರ್ಥಿಗಳು ಮಾಡುವ ಕೀಟಲೆ ಸಹಿಸಿಕೊಂಡು ಪ್ರೀತಿಯಿಂದ ಹೇಳಿಕೊಡುತ್ತಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಹಳೆ ವಿದ್ಯಾರ್ಥಿಗಳ ಸಂಘಟನೆ ‘ಮ್ಯಾಮ್’ 2014ರಲ್ಲಿ ಕೆ. ವಾಸುದೇವ ರಾವ್ ಅವರನ್ನು ಸನ್ಮಾನಿಸಿ ಗೌರವಿಸಿತ್ತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಹಿರಿಯ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ವಿಧಿವಶ

Upayuktha

ಕನ್ನಡದ ಪ್ರಸಿದ್ಧ ಹಾಸ್ಯನಟ ರಾಕ್‌ಲೈನ್ ಸುಧಾಕರ್ ವಿಧಿವಶ

Harshitha Harish

ಖ್ಯಾತ ವಿಜ್ಞಾನ ಶಿಕ್ಷಕ ಇಂದುಹಾಸ ರಾಮರಾವ್ ಜೇವೂರ (81) ನಿಧನ

Upayuktha