ಅರಮನೆಯ ಕನಸ
ಕಂಡವನು ನಾನಲ್ಲ
ನಿನ್ನ ಮುಗುಳುನಗೆಯ
ಮತ್ತಿನಲ್ಲಿ ತೇಲಿ ಹೋದವನು ನಾನು
ನಿನ್ನ ಮುಂಗುರುಳಲಿ
ಜಾಲಿಯಾಗಿ ಮುತ್ತನಿಡುವಾಸೆ
ಜಾಯಮಾನದಲ್ಲೂ ಜಾರದ ನಾನು
ಜಾರಿ ಕಾರಿಗೆ ಹೋದೆ ನಿನ್ನ ಕಣ್ಣಿನಲ್ಲಿ
ಆಕಾಶಕೆ ಹಾರುವ ಬಯಕೆ ನನ್ನದಲ್ಲ
ಕೇಳಿದ್ದನ್ನು ನಿನ್ನಡಿಯಲ್ಲಿ ಇಡುವೆ
ಎಂಬ ಜಂಭ ನನ್ನದಲ್ಲ
ಆದರೂ ನೀ ನನ್ನ ದೂರುವುದು ಸಲ್ಲ
ನಿನ್ನ ಕಣ್ಣಿನಲ್ಲಿ ಬಿಂಬವಾಗುವಾಸೆ
ನಿನ್ನ ಕಂಡೊಡನೆ ಸ್ತಬ್ಧನಾಗುವೆ ಏಕೆ
ಬದುಕಲಿ ಭರವಸೆಗಳ ಇರಿಸಿಕೊಂಡವನಲ್ಲ
ನನ್ನ ಬಯಕೆಯೊಂದೇ ನಿನ್ನ ಹೃದಯದಲಿ ಪುಟ್ಟ ಮನೆಮಾಡುವಾಸೆ .
*ಡಾ.ಅನಪು*