ದೇಶ-ವಿದೇಶ ಪ್ರಮುಖ

ಪಂಚರಾಜ್ಯಗಳ ಮತ ಎಣಿಕೆ ಪ್ರಗತಿಯಲ್ಲಿ: ಬಂಗಾಳದಲ್ಲಿ ಬಿಜೆಪಿ ಭಾರೀ ಮುನ್ನಡೆ

ಹೊಸದಿಲ್ಲಿ: ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗಳ ಮತ ಎಣಿಕೆ ಪ್ರಗತಿಯಲ್ಲಿದ್ದು, ಆರಂಭಿಕ ಟ್ರೆಂಡ್‌ಗಳ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಭಾರೀ ಮುನ್ನಡೆ ಸಾಧಿಸುತ್ತಿದೆ. ಆಡಳಿತಾರೂಢ ಟಿಎಂಸಿಯನ್ನು ಕೆಳಗಿಳಿಸಿ ಅಧಿಕಾರಕ್ಕೇರುವ ಮಹಾ ನಿರೀಕ್ಷೆಯನ್ನು ಬಿಜೆಪಿ ಜಾರಿಯಲ್ಲಿಟ್ಟಿದೆ.

ಅಸ್ಸಾಂನಲ್ಲಿ 36 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುವ ನಿರೀಕ್ಷೆಯಿದೆ.

ಕೇರಳದಲ್ಲಿ ಒಟ್ಟು 140 ಸ್ಥಾನಗಳ ಪೈಕಿ 76 ಸ್ಥಾನಗಳ ಟ್ರೆಂಡ್ ವ್ಯಕ್ತವಾಗುತ್ತಿದ್ದು, 42 ಸೀಟುಗಳಲ್ಲಿ ಎಲ್‌ಡಿಎಫ್‌, 32 ಸ್ಥಾನಗಳಲ್ಲಿ ಯುಡಿಎಫ್‌ ಮತ್ತು ಐದು ಸ್ಥಾನಗಳಲ್ಲಿ ಎನ್‌ಡಿಎ ಮುನ್ನಡೆ ವ್ಯಕ್ತವಾಗುತ್ತಿದೆ.

ತಮಿಳುನಾಡಿನಲ್ಲಿ 234 ಸೀಟುಗಳ ಪೈಕಿ 100 ಸ್ಥಾನಗಳ ಟ್ರೆಂಡ್ ಪ್ರಕಟವಾಗುತ್ತಿದ್ದು, ಎಐಎಡಿಎಂ 34 ಹಾಗೂ ಡಿಎಂಕೆ 65 ಸೀಟುಗಳಲ್ಲಿ ಮುನ್ನಡೆ ಗಳಿಸಿವೆ.

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ 7 ಸ್ಥಾನಗಳಲ್ಲಿ ಎನ್‌ಡಿಎ ಮುನ್ನಡೆ ಗಳಿಸಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಮನರಂಜಿಸಿದ ಎಕ್ಸ್‌ಪರ್ಟ್‌ ಟೈಮ್ಸ್‌ಸ್ಕ್ವೇರ್ ಮ್ಯೂಸಿಕ್ ಫೆಸ್ಟಿವಲ್

Upayuktha

ರಾಜ್ಯದಲ್ಲಿ ಕೊರೊನಾ ತಡೆಗೆ ವ್ಯಾಪಕ ಮುನ್ನೆಚ್ಚರಿಕೆ: ಸಿಎಂ ಬಿಎಸ್‌ವೈ

Upayuktha

ಮಂಗಳೂರು- ಬೆಂಗಳೂರು ನಡುವೆ 2 ದಸರಾ ವಿಶೇಷ ರೈಲುಗಳ ಓಡಾಟ

Upayuktha