ಕ್ಷೇತ್ರಗಳ ವಿಶೇಷ ನಗರ ಸ್ಥಳೀಯ

ಉಡುಪಿ: ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಅಥರ್ವಶೀರ್ಷ ಗಣಯಾಗ

ಉಡುಪಿ: ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನಃ ಪ್ರತಿಷ್ಠಾಪೂರ್ವಕ ಬ್ರಹ್ಮಕಲಶೋತ್ಸವದ ಅಂಗವಾಗಿ ಮಂಗಳವಾರ ಪಾಡಿಗಾರು ವಾಸುದೇವ ತಂತ್ರಿ ಮತ್ತು ವಿದ್ವಾನ್ ಪಂಜ ಭಾಸ್ಕರ ಭಟ್ಟರ ಹಿರಿತನದಲ್ಲಿ ಅಥರ್ವಶೀರ್ಷ ಗಣಯಾಗ ನೆರವೇರಿತು.

ಶಾಸಕ ಅರವಿಂದ ಲಿಂಬಾವಳಿ ಮಂಗಳವಾರ ಉಡುಪಿಯಲ್ಲಿ ಶ್ರೀ ಪೇಜಾವರ ಶ್ರೀಪಾದರನ್ನು ಭೇಟಿ ನೀಡಿ ಭಕ್ತಿ ಗೌರವ ಸಮರ್ಪಿಸಿ ಆಶೀರ್ವಾದ ಪಡೆದರು.

ಗ್ರಾಮೀಣಾಭಿವೃದ್ಧಿ ಮಂತ್ರಿ ಕೆ ಎಸ್ ಈಶ್ವರಪ್ಪ ಹಾಗೂ ಶಾಸಕ ಅರವಿಂದ ಲಿಂಬಾವಳಿ ಮಂಗಳವಾರ ಕರಂಬಳ್ಳಿ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ‌ನೀಡಿ ದೇವರ‌ ದರ್ಶನ‌ಪಡೆದು ಪ್ರಸಾದ ಸ್ವೀಕರಿಸಿದರು.

‌ಶಾಸಕ‌ ಕೆ ರಘುಪತಿ ಭಟ್ಟರ ನೇತೃತ್ವದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವಕ್ಕೆ ಶುಭ ಕೋರಿದರು. ಶಾಸಕ ಭಟ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಗಿರಿಧರ ಆಚಾರ್ಯ, ಯಶ್ಪಾಲ್ ಸುವರ್ಣ ಪಾಡಿಗಾರು ವಾಸುದೇವ ತಂತ್ರಿ, ಪಂಜ ಭಾಸ್ಕರ ಭಟ್, ದಿವಾಕರ ಐತಾಳ್ ರಮೇಶ ಬಾರಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.

ವಿಧಾನ ಪರಿಷತ್ ಸದಸ್ಯ, ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಕುಮಾರ್ ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕಾರ್ಮಿಕರಿಂದ ಬಾಡಿಗೆ ವಸೂಲಿ ಮಾಡಿದಲ್ಲಿ ಪರವಾನಗಿ ರದ್ದು: ಉಡುಪಿ ಡಿಸಿ ಎಚ್ಚರಿಕೆ

Upayuktha

ಹಿಂದಿ ಜಾಗತಿಕ ಭಾಷೆಯಾಗಿ ಹೊರಹೊಮ್ಮಿದೆ: ಡಾ. ಮಂಗಲ್‌ ದೇಸಾಯಿ

Upayuktha

ಮಂಗಳೂರಿನಲ್ಲಿ ‘ನರೇಂದ್ರ ವಿಜಯ’ ಯಕ್ಷಗಾನ ಪ್ರದರ್ಶನ

Upayuktha