ಕ್ಷೇತ್ರಗಳ ವಿಶೇಷ ಜಿಲ್ಲಾ ಸುದ್ದಿಗಳು

ಇಡಗುಂದಿ ಶ್ರೀ ರಾಮಲಿಂಗ ದೇವಸ್ಥಾನದಲ್ಲಿ ಫೆ 15ರಿಂದ 20ರ ವರೆಗೆ ಅತಿರುದ್ರ ಮಹಾಯಾಗ

ಯಲ್ಲಾಪುರ: ಯಲ್ಲಾಪುರ ಸೀಮೆಯ ಇಡಗುಂದಿಯ ಶ್ರೀ ರಾಮಲಿಂಗ ದೇವಸ್ಥಾನದಲ್ಲಿ ಫೆ 15ರಿಂದ 20ರ ವರೆಗೆ ಅಥರ್ವಶೀರ್ಷಹವನ- ಚಂಡಿಕಾಯಾಗ ಹಾಗೂ ಪುರಶ್ಚರಣರೀತ್ಯಾ ಅತಿರುದ್ರ ಮಹಾಯಾಗ ಮತ್ತು ಇತರ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಶ್ರೀ ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಪರಮಪೂಜ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹದೊಂದಿಗೆ ಸ್ವಸ್ತಿ ಶಾರ್ವರಿ ಸಂವತ್ಸರದ ಮಾಘ ಮಾಸದ ಶುಕ್ಲಪಕ್ಷ ಚತುರ್ಥಿ ಸೋಮವಾರದಿಂದ ಅಷ್ಟಮಿ ಶನಿವಾರದ ವರೆಗೆ ಈ ಎಲ್ಲ ಕಾರ್ಯಕ್ರಮಗಳು ಜರಗಲಿವೆ.

ಫೆ 20ರಂದು ಪೂರ್ನಾಹುತಿ- ಮಂಗಲ ಸಮಾರಂಭ ನಡೆಯಲಿದೆ. ಅಂದು ಪೂಜ್ಯ ಶ್ರೀಗಳವರ ಪಾದಪೂಜೆ ಹಾಗೂ ಭಿಕ್ಷೆ ನೆರವೇರಲಿದೆ.

ರಾಜ್ಯದ ಕಾರ್ಮಿಕ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ ಎಲ್ಲ ಉತ್ಸವಗಳ ಗೌರವಾಧ್ಯಕ್ಷರಾಗಿರುತ್ತಾರೆ.

ಮಹಾಯಾಗದ ಪ್ರಧಾನ ಆಚಾರ್ಯತ್ವವನ್ನು ವೇ|ಮೂ| ಶ್ರೀ ಮಂಜುನಾಥ ಭಟ್ರು, ಭಟ್ರಕೇರಿ, ಆಚಾರ್ಯತ್ವವನ್ನು ವೇ| ಮೂ| ಶ್ರೀ ರಾಮಚಂದ್ರ ಭಟ್ರು, ಹಿತ್ತಲಕಾರಗದ್ದೆ ಹಾಗೂ ಬ್ರಹ್ಮತ್ವವನ್ನು ಅಗ್ನಿಹೋತ್ರಿ ವೇ| ಮೂ| ಶ್ರೀ ನರಸಿಂಹ ಭಟ್ರು, ನಡಗೋಡ ಇವರು ವಹಿಸಲಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಜ್ವರ ತಪಾಸಣಾ ಕೇಂದ್ರದಲ್ಲಿ ಪರೀಕ್ಷಿಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

Upayuktha

ಕೋವಿಡ್ ಚಿಕಿತ್ಸೆಗಾಗಿ ದ.ಕ. ಜಿಲ್ಲೆಯಲ್ಲಿ 3500 ಹಾಸಿಗೆ ಸಿದ್ಧ

Upayuktha

ಜಿಲ್ಲೆಯಲ್ಲಿ ಕಾನೂನು ಸುವ್ಯಸ್ಥೆಯನ್ನು ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಪಾಲಿಸಿ- ಕೋಟ ಶ್ರೀನಿವಾಸ ಪೂಜಾರಿ

Upayuktha