ಕಲೆ-ಸಾಹಿತ್ಯ ಚಂದನವನ- ಸ್ಯಾಂಡಲ್‌ವುಡ್

ಖ್ಯಾತ ಸಾಹಿತಿ ಡಾ|| ಕೆ. ರಮಾನಂದರವರ ‘ಬಯೋಪಿಕ್’ ಶೀಘ್ರ ತೆರೆಗೆ

ಬೆಂಗಳೂರು: ಕನ್ನಡ ಪ್ರಾಧ್ಯಾಪಕರೂ, ಖ್ಯಾತ ಕಾದಂಬರಿಕಾರರೂ, 65 ಪುಸ್ತಕಗಳನ್ನು 200 ಹಾಡುಗಳನ್ನು ಬರೆದು, ಕನ್ನಡ ಸಾಹಿತ್ಯದಲ್ಲಿ- ಇತಿಹಾಸದಲ್ಲಿ ಪ್ರಖ್ಯಾತರಾದ ಡಾ|| ಕೆ. ರಮಾನಂದರವರ `ಬಯೋಪಿಕ್’ ಇದೀಗ ತೆರೆಗೆ ಬರಲಿದೆ.

ವಿದ್ಯಾವಾರಿಧಿ, ಕರ್ನಾಟಕ ಕುಲತಿಲಕ, ಕಾದಂಬರಿರತ್ನ ಕಾದಂಬರಿ, ಕಾವ್ಯಶ್ರೀ, ರಜತಸೂರ್ಯ, ಕಾದಂಬರಿ ಸಾರ್ವಭೌಮ, ಶಾರದಾ ಸುಪುತ್ರ, ಕಲಾ ತಪಸ್ವಿ ಮೊದಲಾದ ಬಿರುದುಗಳನ್ನು ಪಡೆದು ಜೀವಮಾನ ಸಾಧನೆ ಪ್ರಶಸ್ತಿ ಪಡೆದಿರುವ ಡಾ|| ಕೆ. ರಮಾನಂದರನ್ನು ಇದುವರೆಗೂ ಕರ್ನಾಟಕದಾದ್ಯಂತ 970ಕ್ಕೂ ಹೆಚ್ಚು ಸಂಘಸಂಸ್ಥೆಗಳು ಸನ್ಮಾನಿಸಿದ್ದು, ಅವರ ಸಾಧನೆಯ ಏಳು ಬೀಳುಗಳ ಕತೆ ಒಳಗೊಂಡ ಬಯೋಪಿಕ್ ತೆಗೆಯಲು ಮಾತುಕತೆಗಳು ನಡೆದಿದ್ದು ಚಿತ್ರಕತೆ ಸಿದ್ಧವಾಗಿದೆ.

ಖ್ಯಾತ ನಿರ್ದೇಶಕ ವಿಷ್ಣುಪ್ರಿಯನ್ ಈ ಚಿತ್ರದ ನಿರ್ದೇಶನ ಮಾಡಲಿದ್ದು ಸರೋಜಿನಿ ಸಂಸ್ಥೆಯ ನಿರ್ಮಾಪಕ ಶ್ರೀ ಕೆಂಪೇಗೌಡರು ನಿರ್ಮಾಪಕರಾಗಿದ್ದಾರೆ. ಸಂಗೀತ ನಿರ್ದೇಶನ ವೀರಣ್ಣ ಮಾಡಲಿದ್ದಾರೆ. ಶೀಘ್ರವೇ ಚಿಕ್ಕಮಗಳೂರು, ಮೈಸೂರು, ಬೆಂಗಳೂರು, ಶ್ರೀರಂಗಪಟ್ಟಣ, ಶಿಂಷಾಗಳಲ್ಲಿ 45 ದಿನಗಳು ಚಿತ್ರೀಕರಣ ಮಾಡಲಾಗುವುದೆಂದು ನಿರ್ದೇಶಕ ವಿಷ್ಣುಪ್ರಿಯನ್ ತಿಳಿಸಿದ್ದಾರೆ.

ಕಲಾವಿದರ ಆಯ್ಕೆ ಬಹುತೇಕ ಮುಗಿದಿದ್ದು ಡಾ|| ಕೆ. ರಮಾನಂದ ಪಾತ್ರದಲ್ಲಿ ಸುನೀಲ್ ಅಭಿನಯಿಸಲಿದ್ದಾರೆ. ಇತರ ತಾರಾಗಣದಲ್ಲಿ ರಾಜೇಶ್ವರಿ, ರಾಜೇಂದ್ರ, ಶಿವು, ರಮಾನಂದ್, ಶ್ರುತಿ, ಕೆಂಪೇಗೌಡ ಮೊದಲಾದವರಿದ್ದಾರೆ. ಇದು ಡಾ. ಕೆ. ರಮಾನಂದರ `ತ್ರಿಕಾಲ’ ಕಾದಂಬರಿ ಆಧರಿಸಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ನಟಿ ಸಂಜನಾ, ರಾಗಿಣಿ ಗೆ 14 ದಿನ ನ್ಯಾಯಾಂಗ ಬಂಧನ

Harshitha Harish

ಸುದೀಪ್ ಎಂಬ ಸಾಲುದೀಪಗಳ ಮೆರೆವಣಿಗೆ!

Upayuktha

ಜಗದೀಶ್ ಆಚಾರ್ಯ ರವರಿಗೆ “ತುಳುನಾಡ ಗಾನ ಗಂಧರ್ವ” ಪ್ರಶಸ್ತಿ ಪ್ರದಾನ

Harshitha Harish

Leave a Comment

error: Copying Content is Prohibited !!