ನಿಧನ ಸುದ್ದಿ

ಕತೆಗಾರ ಎನ್ ಪ್ರಕಾಶ್ ಹೃದಯಾಘಾತದಿಂದ ನಿಧನ

ಮೈಸೂರು: ಕವಿ ಹಾಗೂ ಕತೆಗಾರ ಎನ್ ಪ್ರಕಾಶ್ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಿನವರಾಗಿದ್ದರು.

ಪ್ರಕಾಶ್ ರವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಹಾಗೂ ಎಂಟು ಜನ ಸಹೋದರ-ಸಹೋದರಿಯರನ್ನು ಅಗಲಿದ್ದಾರೆ.

 

ಇವರು ಮೂಲತಃ ದಾವಣಗೆರೆಯವರಾದ ಪ್ರಕಾಶ್ ಅಲ್ಲಿನ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮಾಡಿ ನಂತರ ಕೆಪಿಟಿಸಿಎಲ್ ನಲ್ಲಿ ಎಕ್ಸಿ ಕ್ಯೂಟಿವ್ ಎಂಜಿನಿಯರಾಗಿ ರಾಜ್ಯದ ವಿವಿಧ ನಗರಗಳಲ್ಲಿ ಕಾರ್ಯನಿರ್ವಹಿಸಿದ್ದರು. ಹಾಗೆಯೇ ನಿವೃತ್ತಿಯ ನಂತರ ಮೈಸೂರಿನ ರಾಮಕೃಷ್ಣನಗರದ ಎಚ್ ಬ್ಲಾಕ್ ನಲ್ಲಿ ನೆಲೆಸಿದ್ದರು.

ದಾವಣಗೆರೆ ಹೊಸ ಸಂವೇದನೆಯ ಸಾಹಿತ್ಯ, ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಂದ ಕೀರ್ತಿಗೆ ಹೆಸರಾಗಿರುವ ಪ್ರತಿಭಾ ಸಭಾ ಎಂಬ ಸಾಂಸ್ಕೃತಿಕ ಸಂಸ್ಥೆಯನ್ನು ಸ್ಥಾಪಿಸಿದವರಲ್ಲಿ ಎನ್.ಪ್ರಕಾಶ್ ಮುಖ್ಯರಾದವರು.

ಹಾಗೆಯೇ 1970 ಮತ್ತು 1980ರ ದಶಕಗಳಲ್ಲಿ ಪ್ರತಿಭಾ ಸಭಾ ಬಹಳ ಕ್ರಿಯಾಶೀಲವಾಗಿ, ಸ್ವತಃ ಕವಿ ಮನಸ್ಸಿನ ಪ್ರಕಾಶ್ ಕವಿತೆಗಳನ್ನು ಹಾಗೂ ಕತೆಗಳನ್ನು ಬರೆದು ಪ್ರಕಟಿಸಿದ್ದರು.

Related posts

ಬರ್ತ್ ಡೇ ದಿನವೇ ಇಹಲೋಕ ತ್ಯಜಿಸಿದ ಹಿರಿಯ ನಟ

Harshitha Harish

ಹಿರಿಯ ರಂಗಭೂಮಿ ಕಲಾವಿದ ಕೊಡಗನೂರು ಜಯಕುಮಾರ್ ನಿಧನ

Harshitha Harish

ಪ್ರಸಿದ್ಧ ಮೂತ್ರಶಾಸ್ತ್ರಜ್ಞ ಡಾ.ವಿ.ಎನ್.ಭಟ್ ಮುಳಿಯಾಲ ನಿಧನ

Upayuktha News Network

Leave a Comment