ಆರೋಗ್ಯ ಪ್ರಮುಖ ಸ್ಥಳೀಯ

ಗಾಳಿಯಿಂದ ಹರಡುವ ಸಾಂಕ್ರಾಮಿಕ ರೋಗ ತಡೆಗೆ ಕರವಸ್ತ್ರ ಬಳಸಿ: ಡಾ. ನಾರಾಯಣ ಪ್ರದೀಪ

  • ಬದಿಯಡ್ಕ ನವಜೀವನ ಹೈಸ್ಕೂಲ್‌ನಲ್ಲಿ ಕ್ಷಯರೋಗ ಜಾಗೃತಿ ಕಾರ್ಯಕ್ರಮ
  • ಶಾಲಾ ಮಕ್ಕಳಿಗೆ ಕರವಸ್ತ್ರ ವಿತರಣೆ, ಆರೋಗ್ಯ ಸಲಹೆ ಕಾರ್ಯಕ್ರಮ

 

ಬದಿಯಡ್ಕ: ರೋಗವು ನಮ್ಮನ್ನು ಆಕ್ರಮಿಸಿಕೊಂಡ ಮೇಲೆ ಅದನ್ನು ನಿಯಂತ್ರಿಸಲು ನಾವು ಹರಸಾಹಸ ಪಡಬೇಕಾಗುತ್ತದೆ. ಕೆಲವೊಂದು ಸಾಂಕ್ರಾಮಿಕ ರೋಗಗಳು ಗಾಳಿಯ ಮೂಲಕ ಹರಡುತ್ತವೆ. ಇಂತಹ ಸಂದರ್ಭಗಳಲ್ಲಿ ಒಂದು ಕರವಸ್ತ್ರವೂ ರೋಗವನ್ನು ತಡೆಗಟ್ಟುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಎಂದು ಕಾಸರಗೋಡು ಜಿಲ್ಲಾ ಕ್ಷಯರೋಗ ವಿಭಾಗದ ತಜ್ಞ ವೈದ್ಯ ಡಾ. ನಾರಾಯಣ ಪ್ರದೀಪ ಹೇಳಿದರು.

ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಸಾಂಕ್ರಾಮಿಕ ರೋಗಗಳ ಹತೋಟಿಯ ಸುಲಭೋಪಾಯಗಳ ಕುರಿತು ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಬದಿಯಡ್ಕ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಪರಿವೀಕ್ಷಕ ದೇವಿದಾಕ್ಷನ್ ಕಾರ್ಯಕ್ರಮಕ್ಕೆ ಸಹಕರಿಸಿದರು.

ಜಿಲ್ಲಾ ಕ್ಷಯರೋಗ ಚಿಕಿತ್ಸಾ ಕೇಂದ್ರದ ಹಿರಿಯ ಚಿಕಿತ್ಸಾ ಸಂಘಟಕರಾದ ರಾಜೇಂದ್ರ ಅವರು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ತರಗತಿ ನಡೆಸಿದರು.

ಜಿಲ್ಲಾ ಟಿ.ಬಿ ಸೆಂಟರ್‌ನ ಬಾಲನ್‌ ಅವರು ಎಲ್ಲ ವಿದ್ಯಾರ್ಥಿಗಳಿಗೆ ಕರವಸ್ತ್ರ ವಿತರಿಸಿದರು. ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ಹದಿಹರೆಯದ ಮಕ್ಕಳ ಆರೋಗ್ಯ ಸಲಹೆಗಾರ್ತಿ ಅಜಿತಾ ಪಿ.ಎಸ್ ವಂದಿಸಿದರು.

Related posts

ಉಜಿರೆ: 13 ದಿನಗಳ ಗ್ರಾಮೀಣ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಗೆ ಚಾಲನೆ

Upayuktha

ಮಹಿಳೆಯರ ರಕ್ಷಣೆಗಿರುವ ಕಾನೂನುಗಳು ಸದ್ಬಳಕೆಯಾಗಲಿ: ಶ್ಯಾಮಲಾ ಎಸ್ ಕುಂದರ್

Upayuktha

ಅಜ್ಜಿಯ ಜತೆ ಹಳಿ ದಾಟುತ್ತಿದ್ದ ಬಾಲಕಿ ಆಕಸ್ಮಿಕವಾಗಿ ರೈಲಿನಡಿಗೆ ಬಿದ್ದು ದಾರುಣ ಸಾವು

Upayuktha

Leave a Comment

error: Copying Content is Prohibited !!