ಪ್ರಮುಖ ರಾಜ್ಯ

ಆ. 5ರಂದು ರಾಜ್ಯದ ಎಲ್ಲ ದೇವಳಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ: ಸಚಿವ ಕೋಟ

(ಚಿತ್ರ ಕೃಪೆ: ಝೀ ನ್ಯೂಸ್)
ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರುವಂತೆ ಪ್ರಾರ್ಥನೆ

ಉಡುಪಿ: ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಭವ್ಯ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸುತ್ತಿರುವುದು ಚಾರಿತ್ರಿಕ ಘಟನೆಯಾಗಿದೆ.

ಮಂದಿರ ನಿರ್ಮಾಣ ಕಾರ್ಯ ಅತ್ಯಂತ ಸುಸೂತ್ರವಾಗಿ ಯಶಸ್ವಿಯಾಗಿ ನೆರವೇರುವಂತೆ ಪ್ರಾರ್ಥಿಸಿ ರಾಜ್ಯದ ಮುಜರಾಯಿ ಇಲಾಖಾ ವ್ಯಾಪ್ತಿಯ ಎಲ್ಲ ದೇವಳಗಳಲ್ಲಿ ಆಗಸ್ಟ್ 5 ರಂದು ಬೆಳಿಗ್ಗೆ ಅರ್ಚಕರುಗಳು ಆಡಳಿತ ಮಂಡಳಿ ಪ್ರಮುಖರ ಉಪಸ್ಥಿತಿಯಲ್ಲಿ ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸುವಂತೆ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ.

ನೀಲಾವರ ಗೋಶಾಲೆಯಲ್ಲಿರುವ ಶಾಖಾ ಮಠದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಅಯೋಧ್ಯೆ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಭಾನುವಾರ ಭೇಟಿಯಾಗಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಈ ಸೂಚನೆ ಪ್ರಕಟಿಸಿದರು.

ಅಯೋಧ್ಯೆ ಮಂದಿರಕ್ಕೆ ಹನುಮನ ನಾಡು ಕರ್ನಾಟಕದ ಕೊಡುಗೆ:

ಈ ಸಂದರ್ಭದಲ್ಲಿ ಸಚಿವರೊಂದಿಗೆ ಮಾತನಾಡಿದ ಶ್ರೀಗಳು ರಾಮಮಂದಿರದ ಗೋಪುರಕ್ಕೆ ಹನುಮ ಅವತರಿಸಿದ ಕರ್ನಾಟಕದ ಕೋಟ್ಯಂತರ ಭಕ್ತರ ಕೊಡುಗೆಯಾಗಿ ಸುವರ್ಣ ಶಿಖರ ಅರ್ಪಣೆ ಮಾಡಬಹುದೆಂದೂ ಅದರ ಜೊತೆಗೆ ಭವಿಷ್ಯದಲ್ಲಿ ಅಯೋಧ್ಯೆಯು ಅತ್ಯಂತ ಪ್ರಸಿದ್ಧ ತೀರ್ಥ ಕ್ಷೇತ್ರವಾಗಲಿದ್ದು ಅಲ್ಲಿಗೆ ರಾಜ್ಯದಿಂದ ಭೇಟಿ ನೀಡುವ ಭಕ್ತಾದಿಗಳ ಸೌಕರ್ಯಕ್ಕಾಗಿ ಸುಸಜ್ಜಿತ ಯಾತ್ರಿ ಭವನ ನಿರ್ಮಾಣ ಮಾಡಬೇಕು ಆ ಉದ್ದೇಶಕ್ಕಾಗಿ ಈಗಲೇ ಅಲ್ಲಿನ ಸರಕಾರದೊಂದಿಗೆ ವ್ಯವಹರಿಸಿ ಮಂದಿರ ನಿವೇಶನದ ಆಸುಪಾಸಿನಲ್ಲಿ ಮೂರರಿಂದ ಐದು ಎಕ್ರೆ ಭೂಮಿಯನ್ನು ಒದಗಿಸುವಂತೆ ವಿನಂತಿಸಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀಗಳ ಈ ಎರಡೂ ಅಪೇಕ್ಷೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಶ್ರೀಗಳ ಮಾರ್ಗದರ್ಶನ‌ ನಮಗೆ ಅವಶ್ಯ. ಅವರ ಎರಡೂ ಅಪೇಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶೀಘ್ರವೇ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನಿಸುವುದಾಗಿ ತಿಳಿಸಿದರು.

ಗೋಶಾಲೆಗಳಿಗೆ ಅಗತ್ಯ ನೆರವು:
ಇದೇ ಸಂದರ್ಭದಲ್ಲಿ ಗೋಶಾಲೆಗಳ ನಿರ್ವಹಣೆಯ ಕುರಿತಾಗಿಯೂ ಶ್ರೀಗಳೊಂದಿಗೆ ಚರ್ಚಿಸಿದ ಸಚಿವ ಕೋಟ, ರಾಜ್ಯದಲ್ಲಿ ಅತ್ಯಂತ ಸಾಹಸದ ಗೋರಕ್ಷಣೆಯ ಕಾರ್ಯವನ್ನು ಶ್ರೀಗಳು ಮತ್ತು ಅನೇಕ ಮಠ ಮಾನ್ಯರು ನಡೆಸುತ್ತಿದ್ದು ಅವುಗಳ ಸುಸೂತ್ರ ನಿರ್ವಹಣೆಗೆ ಸಹಕರಿಸುವುದು ಸರಕಾರಗಳ ಕರ್ತವ್ಯವೂ ಆಗಿದೆ. ಈ ಬಗ್ಗೆಯೂ ಉತ್ತಮ‌ ತೀರ್ಮಾನಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಅರ್ಜೆಂಟೀನಾದ ಫುಟ್ ಬಾಲ್ ದಂತಕಥೆ ಡೀಗೋ ಮರಡೋನಾ ನಿಧನ

Upayuktha

ಕನ್ನಡ ಖ್ಯಾತ ಹಾಸ್ಯನಟ ಬುಲೆಟ್‌ ಪ್ರಕಾಶ್‌ ನಿಧನ

Upayuktha

ಶ್ರೀ ಕ್ಷೇತ್ರ‌ ಮಧೂರು: ಇಂದಿನಿಂದ ಸಾರ್ವಜನಿಕ ದರ್ಶನಕ್ಕೆ ಷರತ್ತುಬದ್ಧ ಅವಕಾಶ

Upayuktha

Leave a Comment