Others ದೇಶ-ವಿದೇಶ

ಕುರ್ತಾ, ಪಂಚೆ ತೊಟ್ಟು ಅಯೋಧ್ಯೆಯತ್ತ ಧಾವಿಸಿದ ಪ್ರಧಾನಿ ಮೋದಿ

ನವದೆಹಲಿ: ಈಗಾಗಲೇ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯಿಂದ ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ್ದಾರೆ. ರಾಮಮಂದಿರ ನಿರ್ಮಾಣದ ಭೂಮಿಪೂಜೆಯಲ್ಲಿ ಪಾಲ್ಗೊಳ್ಳಲು ಕುರ್ತಾ ಮತ್ತು ಪಂಚೆ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದರು.

ಅವರ ಇಂದಿನ‌ ಕಾರ್ಯಕ್ರಮದ ವಿವರಗಳು ಇಂತಿವೆ….

10.30ಕ್ಕೆ ಲಖನೌ ವಿಮಾನ ನಿಲ್ದಾಣ ತಲುಪಲಿರುವ ಮೋದಿ

11.30ಕ್ಕೆ ಅಯೋಧ್ಯೆಯ ಸಾಕೇತ್ ಕಾಲನಿಗೆ ಆಗಮನ

11.45ಕ್ಕೆ ಹನುಮಾನ್​ ಗಡಿಯಲ್ಲಿ ಪ್ರಾರ್ಥನೆ

ಹನುಮಾನ್ ಪೂಜೆ ಬಳಿಕ ಸರಯೂ ನದಿಗೆ ಪೂಜೆ

ಮಧ್ಯಾಹ್ನ 12 ಗಂಟೆಗೆ ರಾಮಜನ್ಮಭೂಮಿಗೆ ಆಗಮನ

12.30ಕ್ಕೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗಿ

12.40ಕ್ಕೆ ರಾಮಮಂದಿರಕ್ಕೆ ಅಡಿಗಲ್ಲು ಹಾಕಲಿರುವ ಮೋದಿ

ಶಿಲಾನ್ಯಾಸದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿ

1.10ಕ್ಕೆ ರಾಮಜನ್ಮಭೂಮಿ ಸಂಕೀರ್ಣ ವೀಕ್ಷಿಸಲಿರುವ ಮೋದಿ

ಶ್ರೀರಾಮ ಮಂದಿರ ತೀರ್ಥ ಕ್ಷೇತ್ರ ‌ಟ್ರಸ್ಟ್ ಅಧ್ಯಕ್ಷ ನೃತ್ಯ ಗೋಪಾಲದಾಸ್ ಮತ್ತಿತರ ಜೊತೆ ಸಮಾಲೋಚನೆ

ಮಧ್ಯಾಹ್ನ 02:05ಕ್ಕೆ ಅಯೋಧ್ಯೆಯಿಂದ ಹೆಲಿಕಾಪ್ಟರ್ ಮೂಲಕ ಲಕ್ನೋಗೆ ಪ್ರಯಾಣ

ದಶಕಗಳ ಹಿಂದಿನ ರಾಮ ಜನ್ಮಭೂಮಿ ವಿವಾದಕ್ಕೆ ತೆರೆ ಬಿದ್ದಿದೆ. ಈ ಬೆನ್ನಲ್ಲೀಗ ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಬಹುದಿನದ ಕನಸೊಂದು ನೆರೆವೇರುವ ಈ ಕ್ಷಣ. ಈ ಭೂಮಿ ಪೂಜೆ ಕಾರ್ಯಕ್ರಮವನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ. ಹಾಗೆಯೇ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಜತೆಗೆ ವಿವಿಧ ಕ್ಷೇತ್ರಗಳ 175 ಮಂದಿ ಗಣ್ಯರು ಸಹ ಜೊತೆ ಭಾಗವಹಿಸಲಿದ್ದಾರೆ.

Related posts

ಮರಾಠಿ ಖ್ಯಾತ ಚಿತ್ರ ನಿರ್ದೇಶಕಿ ಸುಮಿತ್ರಾ ಭಾವೆ ನಿಧನ

Harshitha Harish

ಬಹುಮತ ಸಾಬೀತು ಪಡಿಸುವಲ್ಲಿ ನಾರಾಯಣಸ್ವಾಮಿ ವಿಫಲ: ಪುದುಚೇರಿಯಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್

Sushmitha Jain

ಐತಿಹಾಸಿಕ ಅಯೋಧ್ಯೆ ರಾಮ ಮಂದಿರ ಶಿಲಾನ್ಯಾಸ- ಲೈವ್

Upayuktha