ಜೀವನವೆಂಬ ಚದುರಂಗದಾಟದಲ್ಲಿ
ಜಯವೆಷ್ಟೋ ಅಪಜಯವೆಷ್ಟೋ;
ಬದುಕು ಏರಿದ ಪಯಣದಲಿ
ಕೊಳ್ಳೆ ಕಿಲ್ಬಷಗಳೆಷ್ಟೋ;
ಪ್ರಯಾಣಿಸಲು ಎಲ್ಲಿ ನಿಂತರೇನಂತೆ ಯುಗದಲಿ
ಗುರಿಯ ತಲುಪುವವರೆಷ್ಟೋ; ।
ಗೇಣು ಬಟ್ಟೆಗಾಗಿ ;ಬಾಳ ಬುತ್ತಿಗಾಗಿ
ತರತರದ ರೂಪಿನಿಂದ ,
ಧನವೆಂಬ ಧನಿಕನ ಮುಸುಡನೋಡಲು
ಧೃತಿಗೆಟ್ಟು ಪಡೆಯುವ ಆತಂಕದಿಂದ ,
ಮೊಳದುದ್ದ ದೇಹ ಸೊರಗಿತು,
ನಾಳೆ ಸುಖವಿರಬಹುದೆಂಬ ಹಂಬಲದಿಂದ ; ॥
ಸಿಕ್ಕ ತುಸು ಜಾಗವನೇ ತನ್ನದೆಂಬಂತೆ
ಹೊತ್ತು ಹೊತ್ತಿಗೂ ಅಹಃಕರಿಸಿ
ಅಶಾಶ್ವತವೆಂಬುದು ಅರಿತಿದ್ದರೂ,
ಕಿಕ್ಕಿರಿದ ಜನಗಳೊಡನೆ ಅಧಿಕೃತಗೊಳಿಸಿ ,
ಕೂತಲ್ಲೇ ಕಾಣುವ ಕೆಂಪು ಗೂಟಕೆ,
ಎದೆಯೊಳಗಿನ ತವಕ ಶಾಂತಗೊಳಿಸಿ ;।
ಚಲಿಸುತ್ತಿದೆ ರೈಲಿನ ಬಂಡಿ
ಹಾಸುಗಂಬಿಯ ಕೆಳಗೆ ತತ್ತರಿಸುತ್ತಾ;
ನಿಲುಗಡೆಯ ಭಯದಲಿಹರು
ಬಂದಿತೋ ಸಮಯವೆಂದು ಉದ್ಗರಿಸುತ್ತಾ;
ಅತ್ತಿತ್ತ ಸುತ್ತ ಇಣುಕುವರು
ಎಲ್ಲಿ ಉರುಳುವುದೋ ಎಂದು ಹಲುಬುತ್ತಾ..;॥
✏️ ಸಮ್ಯಕ್ತ್ ಜೈನ್ _ಕಡಬ