ಲೇಖನಗಳು

ಬದುಕು

 

ಬದುಕೆಂಬುದು ಸುಂದರವಾದ ಅನುಭೂತಿ… ಪ್ರತಿದಿನ, ಪ್ರತಿ ಗಂಟೆ, ಪ್ರತಿನಿಮಿಷವೂ ಅತೀ ಅಮೂಲ್ಯ. ಈ ಯಾವುದೂ ಹಿಂತಿರುಗಿ ಬರಲು ಸಾಧ್ಯವಿಲ್ಲ. ಒಮ್ಮೆ ಕಳೆದರೆ ಮುಗಿಯಿತು. ಆದುದರಿಂದಲೇ ಪ್ರತಿ ಕ್ಷಣದ ಬದುಕು ಕೂಡ ನವನವೀನ. ಹಾಗೇಯೇ ಬದುಕು ಎಂಬುದು ಅನಿಶ್ಚಿತವು ಕೂಡ…
ಬದುಕನ್ನು ಹೊಸತನದಿಂದ ರೂಪಿಸಿಕೊಂಡು ನಿರ್ಮಲ ಚಿತ್ತದಿಂದ ಈ ಕ್ಷಣವೇ ಪರಮ ಪವಿತ್ರವೆಂದು ತಿಳಿದು ಸಂಪೂರ್ಣವಾಗಿ ಅನುಭವಿಸುವುದೇ ಬದುಕಿನ ಮೂಲ ತತ್ವವಾಗಿದೆ.

ಜೀವನದ ಲತೆಯಲ್ಲಿ ಅನೇಕ ರೀತಿಯ ಜನರನ್ನು ನಾವೂ ಸೇರಿದಂತೆ ದಿನಾ… ಕಾಣುತ್ತಲೇ ಇದ್ದೇವೆ. ಒಬ್ಬೊಬ್ಬರ ಹಾವ-ಭಾವ, ಮಾತು ಕತೆ..ರೀತಿ ನೀತಿ…ಓದು ಬರಹ.. ಇನ್ನೂ ಮೊದಲಾದವುಗಳು.. ವಿಭಿನ್ನ ರೀತಿಯಾಗಿರುವುದು. ಹಾಗೆಯೇ ಬದುಕಿನ ಸಾಗುವ ಬಂಡಿಯಲ್ಲೂ ಅವರವರ ಭಾವನೆ.. ಆಸೆ-ಆಕಾಂಕ್ಷೆ ಬೇಕು-ಬೇಡಗಳ ಕನಸು-ನನಸುಗಳ… ಮೂಟೆಗಳು ಅವರದ್ದೇ ಆದ ಭಾವನೆಗಳು, ದೃಷ್ಟಿಕೋನಗಳು… ಹರಿದಾಡುತ್ತ…ಬದಲಾಗುತ್ತಲೇ ಇರುತ್ತವೆ. ಆದ್ದರಿಂದಲೇ ಬದುಕೊಂದು ಚಂಚಲ ಭಾವಗಳ ಹೊತ್ತೊಯ್ಯುವ ಗಾಡಿ ಎನ್ನಬಹುದೇನೋ…
ಭಗವಾನ್ ಬುದ್ಧನ ನಡೆಯಲ್ಲಿ ಬದುಕೆಂದರೆ ಆಸೆ-ದು:ಖಗಳ ಪಯಣ…
ಏಕಲವ್ಯನ ಅಭಿಪ್ರಾಯದಲ್ಲಿ ಬದುಕೆಂದರೆ, ಒಂದು ನಿರ್ದಿಷ್ಟ ಗುರಿ… ಹಾಗೂ ಗುರುಭಕ್ತಿ… ಹೀಗೆ ಅನೇಕ ಮಹಾತ್ಮರು ಬದುಕನ್ನು ತಮ್ಮದೇ ನಿಲುವಿನಲ್ಲಿ ಬಣ್ಣಿಸಿ ಹೋಗಿದ್ದಾರೆ.
ಬದುಕ್ಕಲ್ಲೇನಿದೆ ?? ಎಂಬ ಪ್ರಶ್ನೆ ಎದುರಾದಾಗ ಚೆನ್ನಾಗಿ ಬದುಕಲು ಕಲಿತರೆ… ಅಲ್ಲಿ ಆನಂದದ ಗಣಿಯಿದೆ… ಸೌಹಾರ್ದತೆಯ ಭಾವ-ಬಂಧವಿದೆ.
ಹೀಗೆ ನಾನಾ ರೀತಿಗಳಲ್ಲಿ ಯೋಚಿಸಿ, ವಿಶ್ಲೇಷಿಸುವಾಗ.. ಬದುಕೆಂದರೆ, ಮೂರು ದಿನದ ಒಂದು ಆಟ… ಜನನ, ಜೀವನ, ಮರಣದ ಒಂದು ಬಾಳ ಪಯಣ. ಇಲ್ಲಿ ಸಂತೋಷವಿದೆ… ಅಹಂ ಇದೆ… ಈರ್ಷೆ ಇದೆ.. ಸೋಲು- ಗೆಲುವು ಹಾಗೆ ಕೊನೆಗೆ ಅಂತ್ಯವೂ ಇದೆ.
ಒಟ್ಟಿನಲ್ಲಿ, ಬದುಕು ಒಂದು ಅವಕಾಶ. ಅದನ್ನು ಸಕಾರಾತ್ಮಕ ಭಾವ-ನಡೆಗಳೊಂದಿಗೆ ಸ್ವೀಕರಿಸಬೇಕು. ನಾವೂ ಬದುಕಬೇಕು ಇತರರ ಬದುಕಿನ ಒಳಿತನ್ನೂ ಕಾಣಬೇಕು. ತಾರತಮ್ಯ ಸ್ವಾರ್ಥ ಭಾವಗಳ ಬದಿಗೊತ್ತಿ ಕೂಡಿ ಬದುಕುವ ದಾರಿಯಲಿ ಸಾಗಿದಾಗ ನಮ್ಮೆಲ್ಲರ ಬದುಕು ಹಸನಾಗಬಹುದು.
ನಮ್ಮ ಬದುಕಿನಲ್ಲಿ ನಾವು ಕನಸು ಕಾಣುವುದು ಸ್ಥಾನ ಮಾನ, ಅಧಿಕಾರ, ಅಂತಸ್ತು, ಶಿಕ್ಷಣ ಪದವಿ, ಉದ್ಯೋಗ, ವ್ಯವಹಾರ, ಕುಟುಂಬ, ಮನೆ, ಕಾರು, ಉಡುಗೆ ತೊಡುಗೆ ಇತ್ಯಾದಿ.
ಆದರೆ, ಒಂದು ವಿಚಾರ… ಇವೆಲ್ಲವೂ ನಾವು ಜೀವಿಸಿದ್ದರೆ, ಮಾತ್ರ ಉಪಯೋಗಕ್ಕೆ ಬರುವುದು… ಎಂಬ ಅರಿವಿರಬೇಕು ಅಲ್ಲವೇ….?
ನಾವು ಮನೆ ಮಂದಿ ಸಮಾಜ ಜೊತೆಗೆ ಹೊಂದಿರುವ ಸಂಬಂಧ
ನಮ್ಮ ನಡೆ-ನುಡಿ … ಆಸ್ತಿ ಬಂಗಾರ ಅಂತಸ್ತು… ಉದ್ಯಮ ಏನೇ ಇದ್ದರೂ ನಾವು ಬದುಕಿದ್ದರೆ ಮಾತ್ರ ಅವುಗಳಿಗೆ ಅರ್ಥ ಬರುವುದು… ಮೌಲ್ಯ ಸಿಗುವುದು. ಆದುದರಿಂದ ನಾವು ನಮ್ಮ ಜೀವ- ಜೀವನ ಮಾತ್ರವೇ ಅತ್ಯಮೂಲ್ಯವಾಗಿರುವುದು ಎಂಬ ಇತಿ-ಮಿತಿಯನ್ನು ಅರಿತು ಹೆಜ್ಜೆಯಿಡಬೇಕಾಗಿದೆ.
ನಮ್ಮದೇ ಆದ ಆಲೋಚನೆಗಳ ಮೂಲಕ ತೀರ್ಮಾನಗಳನ್ನು ಕೈಗೊಳ್ಳುವುದನ್ನು ಬಿಟ್ಟು ಇತರರ ಅನುಭವಿಗಳ ಜೀವನಾದರ್ಶಗಳನ್ನು ತಿಳಿದುಕೊಳ್ಳಬೇಕಾದುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಚಿಂತಿಸೋಣ… ಸುಂದರ ಬದುಕ ಕಟ್ಟೋಣ.

*🖊️ಸುಪ್ರಿತಾ ಚರಣ್ ಪಾಲಪ್ಪೆ ಕಡಬ*

Related posts

ಕೃತಕ ದಂತ ಪಂಕ್ತಿ: ಬಳಕೆ, ನಿರ್ವಹಣೆ, ಸ್ವಚ್ಛತೆ ಹೇಗೆ…?

Upayuktha

ಆಸಿಡಿಟಿ (ಅತಿ ಆಮ್ಲತೆ): ಕಾರಣ, ಲಕ್ಷಣ, ಚಿಕಿತ್ಸೆ, ತಡೆಗಟ್ಟುವುದು ಹೇಗೆ..?

Upayuktha

ಮಿದುಳಿನ ಮೇಲೆ ಪರಿಣಾಮ ಬೀರುವ ಮ್ಯಾಜಿಕ್ ಮಶ್ರೂಮ್ [ಜಾದೂ ಅಣಬೆ]

Upayuktha