ರಾಜ್ಯ

ಬೆಂಗಳೂರು ಗಲಭೆ ಪ್ರಕರಣ- ಕಾರ್ಪೊರೇಟರ್‌ಗಳಿಗೆ ಸಿಸಿಬಿ ನೋಟೀಸ್ ಜಾರಿ

ಬೆಂಗಳೂರು, ಆಗಸ್ಟ್ 18 : ಬೆಂಗಳೂರಿನ ಗಲಭೆಯ ಬಗ್ಗೆ ಸಿಸಿಬಿ ತನಿಖೆ ಮುಂದುವರೆದಿದ್ದು ವಿಚಾರಣೆಗೆ ಬರುವಂತೆ ಇಬ್ಬರು ಬಿಬಿಎಂಪಿ ಕಾರ್ಪೊರೇಟರ್‌ ಗಳಿಗೆ ಸಿಸಿಬಿ ನೋಟಿಸ್ ಜಾರಿಗೊಳಿಸಿದೆ.

ಶ್ರೀನಿವಾಸಮೂರ್ತಿ ನಿವಾಸದ ಮೇಲೆ ನಡೆದ ದಾಳಿಗೆ ರಾಜಕೀಯ ಕಾರಣವಿರಬಹುದು ಎಂದು ಸಿಸಿಬಿ ತನಿಖೆ ನಡೆಸುತ್ತಿದ್ದು ಕಾರ್ಪೊರೇಟರ್‌ಗಳನ್ನು ವಿಚಾರಣೆಗೆ ಕರೆಯಲಾಗಿದೆ.

ಮಾಜಿ ಮೇಯರ್ ಸಂಪತ್ ರಾಜ್ ಮತ್ತು ಪುಲಿಕೇಶಿ ನಗರ ಕಾರ್ಪೊರೇಟರ್ ಅಬ್ದುಲ್ ರಕೀಬ್ ಝಾಕೀರ್‌ಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಈ ಇಬ್ಬರು ನಾಯಕರು ಸಹ ಕಾಂಗ್ರೆಸ್ ಕಾರ್ಪೊರೇಟರ್‌ಗಳು.

ಈಗಾಗಲೇ ಮಾಜಿ ಮೇಯರ್ ಸಂಪತ್ ರಾಜ್ ಆಪ್ತ ಅರುಣ್‌ರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ಈ ಬಂಧನದ ಬಳಿಕ ವಿಚಾರಣೆಗೆ ಬರುವಂತೆ ಸಂಪತ್‌ ರಾಜ್‌ಗೆ ಸಿಸಿಬಿ ನೋಟಿಸ್ ನೀಡಿರುತ್ತದೆ. ಮಂಗಳವಾರ ಇಬ್ಬರು ಕಾರ್ಪೊರೇಟರ್‌ಗಳ ವಿಚಾರಣೆ ನಡೆಯಲಿದೆ.

 

Related posts

ಕೊರೊನಾಗೆ ಆಯುರ್ವೇದ ಔಷಧ: ಡಾ. ಗಿರಿಧರ ಕಜೆ ಪ್ರಸ್ತಾವ ಐಸಿಎಂಆರ್‌ಗೆ ರವಾನೆ

Upayuktha

ದ.ಕ., ಕಾಸರಗೋಡು ಜಿಲ್ಲೆಯಲ್ಲಿ ಎರಡು, ಉಡುಪಿಯಲ್ಲಿ ಒಂದು ಕೊರೊನಾ ಪಾಸಿಟಿವ್

Upayuktha

ರಾಜ್ಯದಲ್ಲಿಂದು ಒಟ್ಟು 67 ಹೊಸ ಕೊರೊನಾ ಕೇಸ್

Upayuktha