ದೇಶ-ವಿದೇಶ ಪ್ರಮುಖ

ಡಿಜೆ ಹಳ್ಳಿ ಪ್ರಕರಣ- ಸಲ್ಲಿಕೆಯಾಯಿತು 7 ಸಾವಿರ ಪುಟದ ಚಾರ್ಜ್ ಶೀಟ್

ಬೆಂಗಳೂರು: ಕಳೆದ ವರ್ಷ ಆ. 11ರಂದು ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಫೆ. 10ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್​ಶೀಟ್ ಲಭ್ಯವಾಗಿದೆ.

ಫೆ. 10ರಂದು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಎನ್ಐಎ 7 ಸಾವಿರ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದು, ಮೊದಲೇ ಸಂಚು ರೂಪಿಸಿದ್ದ ಆರೋಪಿಗಳು,‌ ಕೃಷ್ಣ ಜನ್ಮಾಷ್ಟಮಿ ದಿನವನ್ನು ಟಾರ್ಗೆಟ್​ ಮಾಡಿದ್ದರು ಎಂದು ಹೇಳಲಾಗಿದೆ.

ಇದೇ ವೇಳೆ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿ ನವೀನ್, ಫೇಸ್​ಬುಕ್​ನಲ್ಲಿ ಅವಹೇಳಕಾರಿಯಾಗಿ ಪೋಸ್ಟ್ ಮಾಡಿದ್ದ.

ಈ ಪರಿಸ್ಥಿತಿಯನ್ನೇ ಸದುಪಯೋಗಪಡಿಸಿಕೊಂಡ ಆರೋಪಿಗಳು, ಗಲಭೆ ಎಬ್ಬಿಸಿದ್ದರು ಎಂದು ಉಲ್ಲೇಖಿಸಲಾಗಿದೆ.

ಅವಹೇಳನಕಾರಿ ಪೋಸ್ಟ್ ಬೆನ್ನಲ್ಲೇ ಎಸ್​​ಡಿಪಿಐ ಸಂಘಟನೆ ಸದಸ್ಯರು, ಶಾಸಕರ ಮನೆ ಹಾಗೂ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಠಾಣೆಗಳ ಮುಂದೆ ಜಮಾವಣೆಗೊಂಡಿದ್ದರು.

ಪ್ರತಿಭಟನಾಕಾರರು ಫೇಸ್​​ಬುಕ್ ಹಾಗೂ ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಗಲಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಚೋದನೆ ಮಾಡಿದ್ದರಿಂದ ಹೊರಗಿನಿಂದ ಜನ ಸೇರಲು ಕಾರಣವಾಯಿತು.

ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಒಗ್ಗೂಡಿಸಿದ್ದ ಕಾರ್ಯಕರ್ತರು, ಗಲಭೆ ಎಬ್ಬಿಸಿದ್ದಾರೆ. ಪೊಲೀಸ್​​ ಠಾಣೆಗಳ ಮೇಲಿನ ದಾಳಿಗೆ ಪ್ರೇರಣೆಯಾಗಿದ್ದೂ ಸಹ ಸಾಮಾಜಿಕ ಜಾಲತಾಣವಾಗಿದೆ ಎಂದು ಎನ್‌ಐಎ ಸಲ್ಲಿಸಿದ ಚಾರ್ಜ್​ಶೀಟ್​​ನಲ್ಲಿ ಪ್ರಮುಖ ಅಂಶಗಳಾಗಿ ಉಲ್ಲೇಖಿಸಲಾಗಿದೆ.

ಇನ್ನು ಗಲಭೆ ಸಂಬಂಧಪಟ್ಟಂತೆ ಇವರೆಗೆ 247 ಮಂದಿ ಆರೋಪಿಗಳ ಬಂಧನವಾಗಿದ್ದು, ಈ ಪೈಕಿ 40ಕ್ಕೂ ಅಧಿಕ ಗಲಭೆಕೋರರು ಸೋಷಿಯಲ್‌ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್​​​ಡಿಪಿಐ) ಸಂಘಟನೆಯ ಸದಸ್ಯರಾಗಿದ್ದಾರೆ. ಫೈರೋಜ್ ಪಾಶಾ, ಮೊಹಮ್ಮದ್ ಶರೀಫ್, ಮುಜಾಮಿಲ್ ಪಾಶಾ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Related posts

ಕ್ಲಸ್ಟರ್‌ಗಳಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಶ್ರಮವಹಿಸಿ: ಸಚಿವ ಜಗದೀಶ್‌ ಶೆಟ್ಟರ್‌

Upayuktha

ಮಂಗಳೂರು ಹೋಟೆಲ್, ಕ್ಲಬ್‍ಗಳಲ್ಲಿ ಹೊಸ ವರ್ಷಾಚರಣೆಗೆ ಪೂರ್ವಾನುಮತಿ ಕಡ್ಡಾಯ

Upayuktha

ಧರ್ಮಸ್ಥಳದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರ ಉದ್ಘಾಟನೆ

Upayuktha