ರಾಜ್ಯ

10 ಕೋಟಿ ರೂ. ದಂಡ ಪಾವತಿಸಿದ ಜಯಲಲಿತಾ ಆಪ್ತೆ ವಿಕೆ ಶಶಿಕಲಾ

ಬೆಂಗಳೂರು: ಆದಾಯಕ್ಕೆ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ನ್ಯಾಯಾಲಯ ವಿಧಿಸಿದ್ದ ದ 10 ಕೋಟಿ ರೂ.ಗಳ ದಂಡವನ್ನು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾ ರವರು ಪಾವತಿಸಿದ್ದಾರೆ.

1991 ರಿಂದ 1996 ರವರೆಗೆ ಜಯಲಲಿತಾ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ, ತನ್ನ ಆದಾಯಕ್ಕಿಂತ ಹೆಚ್ಚಿನ ಸಂಪತ್ತನ್ನು ಗಳಿಸಿದ ಆರೋಪವಿತ್ತು.

ಈ ಬಗ್ಗೆ ಶಶಿಕಲಾ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ  ಜೈಲಿನಲ್ಲಿರಿಸಿಲಾಗಿದ್ದು ಕಳೆದ 3 ವರ್ಷ 8 ತಿಂಗಳಿನಿಂದ ಅವರು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.

ಇಂದು ಅವರು 10 ಕೋಟಿ ರೂ.ಗಳ ದಂಡವನ್ನು ಪಾವತಿಸಿದ್ದು ದಂಡದ ಮೊತ್ತವನ್ನು ನಿನ್ನೆ ಸಂಜೆ ಡಿಮ್ಯಾಂಡ್ ಡ್ರಾಪ್ಟ್ ಮೂಲಕ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್​​​​​ನ ಕಚೇರಿಗೆ ಸಲ್ಲಿಸಲಾಗಿತ್ತು, ಆಕ್ಸಿಸ್ ಬ್ಯಾಂಕ್ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಗಳೀಗೆ ಸೇರಿದ ಎರಡು ಡಿಮ್ಯಾಂಡ್ ಡ್ರಾಫ್ಟ್ ಗಳಲ್ಲಿ ತುಂಬಿ ನ್ಯಾಯಾಲಯಕ್ಕೆ ನೀಡಲಾಗಿತ್ತು.

ಶಶಿಕಲಾ ಅವರ ಪರ ವಕೀಲ ರಾಜಾ ಸೆಂತೂರ್ ಪಾಂಡ್ಯನ್ ಈ ಬಗ್ಗೆ ವಿವರ ನೀಡಿದ್ದು ದಂಡ ಸಂದಾಯವಾದ ಬಳಿಕ ಮುಂದಿನ ಜನವರಿ 27 ರಂದು ಶಶಿಕಲಾ ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಆದಾಯಕ್ಕೆ ಮೀರಿದ ಆಸ್ತಿ ಗಳಿಕೆಯ ಪ್ರಕರಣದಲ್ಲಿ ಜಯಲಲಿತಾ, ಶಶಿಕಲಾ ಅವರು  ಇಳವರಸಿ ಹಾಗೂ ಸುಧಾಕರನ್​ ಸಹ ಆರೋಪಿಗಳಾಗಿದ್ದು ಆರೋಪ ನಿಜವಾದ ಕಾರಣ  2017 ರ‌ ಫೆ. 15ರಂದು ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್ ಮೈಕೆಲ್ ಕುನ್ಹ ಅವರು ನಾಲ್ಕು ವರ್ಷಗಳ ಜೈಲು ಶಿಕ್ಷೆ,  ಜಯಲಲಿತಾಗೆ 100 ಕೋಟಿ ಉಳಿದ ಮೂವರಿಗೆ ತಲಾ 10 ಕೋಟಿ ರೂಪಾಯಿ ದಂಡ ವಿಧಿಸಿ  ತೀರ್ಪು ನೀಡಿದ್ದರು.

 

Related posts

ಹಣಕಾಸು ವಂಚನೆ: ಬಂಧಿತ ಮಂಜೇಶ್ವರ ಶಾಸಕ ಕಮರುದ್ದೀನ್ ಆರೋಪಿ ನಂ.2

Upayuktha News Network

ಬೆಂಗಳೂರಿನಲ್ಲಿ ಶ್ರೀ ವಿಶ್ವೇಶತೀರ್ಥರ ಪ್ರಥಮ ಮೃತ್ತಿಕಾ ವೃಂದಾವನ

Upayuktha

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ@ 25: ಬೆಳ್ಳಿಹಬ್ಬದ ಸಂಭ್ರಮ ಫೆ. 22, 23ಕ್ಕೆ

Upayuktha