ಪ್ರಮುಖ ವಾಣಿಜ್ಯ

26, 27ರ ಉದ್ದೇಶಿತ ಬ್ಯಾಂಕ್‌ ಮುಷ್ಕರ ರದ್ದು, ಎಂದಿನಂತೆ ವಹಿವಾಟು

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಬ್ಯಾಂಕ್ ನೌಕರರ ಸಂಘಟನೆಗಳು ಸೆಪ್ಟೆಂಬರ್ 26ರಿಂದ ನಡೆಸಲು ಉದ್ದೇಶಿಸಿದ್ದ 48 ಗಂಟೆಗಳ ಮುಷ್ಕರವನ್ನು ಕೈಬಿಟ್ಟಿವೆ.

ವಿತ್ತ ಕಾರ್ಯದರ್ಶಿ ರಾಜೀವ್ ಕುಮಾರ್ ಅವರನ್ನು ಸೋಮವಾರ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಬ್ಯಾಂಕ್‌ ನೌಕರರ ಸಂಘಟನೆಗಳ ಪ್ರತಿನಿಧಿಗಳು ಮುಷ್ಕರ ಹಿಂಪಡೆಯುವ ಘೋಷಣೆ ಮಾಡಿದರು.

ಬ್ಯಾಂಕ್‌ಗಳ ವಿಲೀನ, ವೇತನ ಪರಿಷ್ಕರಣೆ, 2018ರ ಪಿ.ಸಿ ಕಾಯ್ದೆಯ ಸೆಕ್ಷನ್ 17(ಎ) ಅನ್ನು ಸೇವಾ ನಿಯಮಗಳ ಭಾಗವಾಗಿ ಸೇರಿಸಿಬೇಕು, 5 ಪೂರ್ಣದಿನಗಳ ವಾರವನ್ನು ಪುನರಾರಂಭಿಸಬೇಕು, ನಗದು ವರ್ಗಾವಣೆ ಅವಧಿ ಕಡಿತ, ನಿವೃತ್ತರಿಗೆ ಸಂಬಂಧಿಸಿದ ವಿಷಯಗಳು ಮತ್ತು ಥರ್ಡ್ ಪಾರ್ಟಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ವಿಷಯಗಳನ್ನು ನೌಕರರ ಸಂಘಟನೆ ಪ್ರತಿನಿಧಿಗಳು ವಿತ್ತ ಕಾರ್ಯದರ್ಶಿಗಳ ಜತೆ ಚರ್ಚಿಸಿದರು ಎಂದು ಪ್ರಕಟಣೆ ತಿಳಿಸಿದೆ.

ಎಲ್ಲ ಬೇಡಿಕೆಗಳ ಬಗ್ಗೆ ಸಹಾನುಭೂತಿಯಿಂದ ಪರಿಶೀಲಿಸುವುದಾಗಿ, ಕಾರ್ಯಯೋಗ್ಯ ಪರಿಹಾರ ಹುಡುಕುವುದಾಗಿ ಹಣಕಾಸು ಕಾರ್ಯದರ್ಶಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 25ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 27ರ ಮಧ್ಯರಾತ್ರಿ ವರೆಗೆ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಮುಂದೂಡಲಾಗಿದೆ ಎಂದು ನೌಕರರ ಸಂಘಟನೆಗಳ ಪ್ರಕಟಣೆ ಹೇಳಿದೆ.

ಎಐಬಿಓಸಿ, ಎಐಬಿಓಎ, ಐಎನ್‌ಬಿಓಸಿ, ಎನ್‌ಓಬಿಓ ಸಂಘಟನೆಗಳ ಪ್ರಧಾನ ಕಾರ್ಯದರ್ಶಿಗಳಾದ ಸೌಮ್ಯ ದತ್ತಾ, ನಟರಾಜನ್ ಎಸ್‌, ಕೆ.ಕೆ ನಾಯರ್‌ ಮತ್ತು ವಿಜಯ್ ವಿ ಟಿಕೆಕರ್‌ ಪ್ರಕಟಣೆಗೆ ಸಹಿ ಮಾಡಿದ್ದಾರೆ.

Related posts

ಮಂಗಳೂರು: ಪರಿಸ್ಥಿತಿ ಶಾಂತ, ಕರ್ಫ್ಯೂ ಅಲ್ಪ ಸಡಿಲಿಕೆ

Upayuktha

ದ.ಕ ಜಿಲ್ಲೆಯ ಅವಲಂಬಿತರ ಹೋರಾಟ ಸಮಿತಿ ರಚನೆ: ಗಡಿ ಸಂಚಾರ ಮುಕ್ತಗೊಳಿಸಲು ಆಗ್ರಹ

Upayuktha

ಭಾರತದ ಉನ್ನತಿಯನ್ನು ವಿಶ್ವಕ್ಕೆ ಪರಿಚಯಿಸಿದವರು ವಿವೇಕಾನಂದರು: ವಿನಯ್ ಬಿದಿರೆ

Upayuktha